ದೇಶದಲ್ಲಿ 9,887 ಮಂದಿಗೆ ಕೊರೊನಾ, ಸೋಂಕಿತರ ಸಂಖ್ಯೆ 2.36 ಲಕ್ಷಕ್ಕೆ ಏರಿಕೆ
ಮೈಸೂರು

ದೇಶದಲ್ಲಿ 9,887 ಮಂದಿಗೆ ಕೊರೊನಾ, ಸೋಂಕಿತರ ಸಂಖ್ಯೆ 2.36 ಲಕ್ಷಕ್ಕೆ ಏರಿಕೆ

June 7, 2020

ನವದೆಹಲಿ, ಜೂ.6- ದೇಶದಲ್ಲಿ ಕೇವಲ ಒಂದೇ ದಿನ ಬರೋಬ್ಬರಿ 9,887 ಮಂದಿ ಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2.36 ಲಕ್ಷಕ್ಕೆ ಏರಿಕೆಯಾಗಿದೆ. ಒಂದೇ ದಿನ 9,887 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,36,657ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕೇವಲ 24 ಗಂಟೆಗಳಲ್ಲಿ 294 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 6642ಕ್ಕೆ ತಲುಪಿದೆ. ಒಂದೇ ದಿನ ಇಷ್ಟೊಂದು ಸಂಖ್ಯೆಯ ಸೋಂಕು ಹಾಗೂ ಸಾವು ವರದಿ ಯಾಗಿರುವುದು ಇದೇ ಮೊದಲಾಗಿದ್ದು, ಹೀಗಾಗಿ ಕೊರೊನಾ ತನ್ನ ಗರಿಷ್ಟ ಮಟ್ಟದತ್ತ ಭಾರತದಲ್ಲಿ ದಾಪು ಗಾಲಿಡುತ್ತಿದೆಯೇ ಎಂಬ ಅನುಮಾನಗಳು ಮೂಡತೊಡಗಿವೆ. 2,36,657 ಮಂದಿ ಸೋಂಕಿತರ ಪೈಕಿ ಈವರೆಗೆ 1,14,073 ಮಂದಿ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ ಇನ್ನೂ 1,15,942 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದು ಬಂದಿದೆ.
ದೆಹಲಿಯ 6 ಇಡಿ ಅಧಿಕಾರಿಗಳಿಗೆ

Translate »