ಕೊರೊನಾ ಪಾಸಿಟಿವ್: ಪ್ರಧಾನ ಕಚೇರಿ ಸೀಲ್‍ಡೌನ್
ಮೈಸೂರು

ಕೊರೊನಾ ಪಾಸಿಟಿವ್: ಪ್ರಧಾನ ಕಚೇರಿ ಸೀಲ್‍ಡೌನ್

June 7, 2020

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ದೆಹಲಿಯ ಜಾರಿ ನಿರ್ದೇಶನಾಲಯದ 6 ಮಂದಿ ಅಧಿಕಾರಿ ಗಳಲ್ಲಿ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆ ಇದೀಗ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ.

ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 10 ಮಂದಿ ಅಧಿಕಾರಿಗಳನ್ನು ಇದೀಗ ಕ್ವಾರಂ ಟೈನ್ ಮಾಡಲಾಗಿದ್ದು, ಕಚೇರಿಯನ್ನು ಸೀಲ್‍ಡೌನ್ ಮಾಡಿ, ಸ್ಯಾನಿಟೈಸ್ ಮಾಡ ಲಾಗುತ್ತಿದೆ. ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಇಟಲಿಯನ್ನು ಹಿಂದಿ ಕ್ಕಿದ್ದು, 6ನೇ ಸ್ಥಾನಕ್ಕೆ ಜಿಗಿದಿದೆ.

ವಿಶ್ವ ಕೊರೊನಾ ವೈರಸ್ ಕುರಿತ ಅಂಕಿ -ಅಂಶಗಳನ್ನು ನಿರ್ವಹಿಸುವ ವಲ್ರ್ಡೋ ಮೀಟರ್ ವೆಬ್‍ಸೈಟ್ ಈ ಕುರಿತು ಮಾಹಿತಿ ನೀಡಿದೆ. ಅದರ ಪ್ರಕಾರ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2,34,163 ಕ್ಕೇರಿದೆ. ಈ ಮೂಲಕ 2.34,013 ಸೋಂಕಿ ತರಿರುವ ಇಟಲಿಯನ್ನು ಭಾರತ ಹಿಂದಿ ಕ್ಕಿದೆ. ಆದರೆ, ಇಟಲಿಯಲ್ಲಿ ಈ ವರೆಗೆ 33,689 ಮಂದಿ ಸಾವಿಗೀಡಾಗಿದ್ದು, ಭಾರತದಲ್ಲಿ ಈ ಸಂಖ್ಯೆ 6588 ಎಂದು ವೆಬ್‍ಸೈಟ್ ತಿಳಿಸಿದೆ.

Translate »