ಮೊಬೈಲ್ ನಂಬರ್‍ಗೆ ಪಾನ್‍ಕಾರ್ಡ್ ಲಿಂಕ್, ವಿದ್ಯುತ್ ಬಿಲ್ ಪಾವತಿ, ಹೂಡಿಕೆ ನೆಪದಲ್ಲಿ ಲಕ್ಷಾಂತರ ವಂಚನೆ
ಮೈಸೂರು

ಮೊಬೈಲ್ ನಂಬರ್‍ಗೆ ಪಾನ್‍ಕಾರ್ಡ್ ಲಿಂಕ್, ವಿದ್ಯುತ್ ಬಿಲ್ ಪಾವತಿ, ಹೂಡಿಕೆ ನೆಪದಲ್ಲಿ ಲಕ್ಷಾಂತರ ವಂಚನೆ

November 10, 2022

ಮೈಸೂರು, ನ.9-ಮೊಬೈಲ್‍ಗೆ ಪಾನ್ ಕಾರ್ಡ್ ಲಿಂಕ್ ಮಾಡುವಂತೆ ವಾಟ್ಸಾಪ್ ಸಂದೇಶ ರವಾನಿಸಿ, ಆನ್‍ಲೈನ್ ಮೂಲಕ ವ್ಯಕ್ತಿಯೊಬ್ಬರಿಗೆ 3.21 ಲಕ್ಷ ರೂ. ವಂಚಿಸಲಾ ಗಿದೆ. ಮೈಸೂರಿನ ಬೋಗಾದಿ 2ನೇ ಹಂತದ ನಿವಾಸಿ ಡಾ.ಆರ್.ಎಲ್. ಚಿಲಕ್ವಾಡ್ (61) ವಂಚನೆಗೊಳಗಾದವ ರಾಗಿದ್ದು, ಇವರ ಮೊಬೈಲ್‍ಗೆ ಪಾನ್‍ಕಾರ್ಡ್ ಅಪ್‍ಡೇಟ್ ಮಾಡುವಂತೆ ಸಂದೇಶ ರವಾನೆಯಾಗಿದೆ. ಅವರು ಲಿಂಕ್ ಮೇಲೆ ಕ್ಲಿಕ್ ಮಾಡಿ, ಕೆಲವೊಂದು ನಿರ್ದೇಶನಗಳನ್ನು ಪಾಲಿಸಿದ ನಂತರ ಅವರ ಬ್ಯಾಂಕ್ ಖಾತೆಯಿಂದ 3,21,978 ರೂ. ಕಡಿತಗೊಂಡಿದೆ.

ಮತ್ತೊಂದು ಪ್ರಕರಣದಲ್ಲಿ ಜಯಲಕ್ಷ್ಮಿಪುರಂ ನಿವಾಸಿ ಪೂನಂ ಪ್ರಕಾಶ್ (64) ಎಂಬು ವರ ಮೊಬೈಲ್‍ಗೆ ವಿದ್ಯುತ್ ಬಿಲ್ ಪಾವತಿ ಸುವಂತೆ ಸಂದೇಶ ರವಾನೆಯಾಗಿದೆ. ಸಂದೇಶ ರವಾನೆಯಾದ ಮೊಬೈಲ್ ಸಂಖ್ಯೆಯನ್ನು ಅವರು ಸಂಪರ್ಕಿಸಿದಾಗ ಮಾತನಾಡಿದ ವ್ಯಕ್ತಿ ಟೀಂ ವ್ಯೂವರ್ ಆ್ಯಪ್ ಅನ್ನು ಇನ್‍ಸ್ಟಾಲ್ ಮಾಡುವಂತೆ ತಿಳಿಸಿ, 11 ರೂ. ಪಾವತಿಸು ವಂತೆಯೂ ಹೇಳಿದ್ದಾನೆ. ಪೂನಂ ಅವರು ಹಾಗೆ ಮಾಡಿದಾಗ ಅವರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 1,72,500 ರೂ. ಕಡಿತಗೊಂಡಿದೆ. ಇನ್ನೊಂದು ಪ್ರಕರಣದಲ್ಲಿ ಕಂಪನಿ ಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಎಂದು ನಂಬಿಸಿ, ಶ್ರೀರಾಂಪುರ ನಿವಾಸಿ ಜಗದೀಶ್ವರರಾಜು (47) ಎಂಬುವರಿಗೆ ಆನ್‍ಲೈನ್ ಮೂಲಕ 1.64 ಲಕ್ಷ ರೂ. ವಂಚಿಸಲಾಗಿದೆ. ಈ ಮೂರೂ ಪ್ರಕರಣಗಳು ಮೈಸೂರು ನಗರ ಸೆನ್ ಠಾಣೆಯಲ್ಲಿ ದಾಖಲಾಗಿವೆ.

Translate »