ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯ: ಪುತ್ರನ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ
ಮೈಸೂರು

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯ: ಪುತ್ರನ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ

June 30, 2021

ಮೈಸೂರು, ಜೂ.29 (ವೈಡಿಎಸ್)- ರಸ್ತೆ ಅಪ ಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡ ಪುತ್ರನ ಅಂಗಾಗಗಳನ್ನು ದಾನ ಮಾಡುವ ಮೂಲಕ ಸಾವಿ ನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಜ್ಜಹಳ್ಳಿ ನಿವಾಸಿ ರಾಮಕೃಷ್ಣ(50) ಎಂಬುವರ ಅಂಗಾಗ ಗಳನ್ನು ದಾನ ಮಾಡಲು ಪೋಷಕರು ನಿರ್ಧರಿಸಿದ್ದು, ಪುತ್ರನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ರಾಮಕೃಷ್ಣ ಎಂಬವರು ಮೂರು ದಿನದ ಹಿಂದೆ ಬೈಕ್‍ನಲ್ಲಿ ಮೈಸೂರಿಗೆ ಬರುತ್ತಿದ್ದಾಗ ಶ್ರೀರಂಗಪಟ್ಟಣ ಚೆಕ್‍ಪೋಸ್ಟ್ ಬಳಿ ನಿಂತಿದ್ದ ವೇಳೆ ವಾಹನವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿತ್ತು.

ಇದರಿಂದ ಗಂಭೀರವಾಗಿ ಗಾಯಗೊಂಡ ರಾಮ ಕೃಷ್ಣ ಅವರನ್ನು ಕರೆದುಕೊಂಡು ಬಂದು ಮೈಸೂರಿನ ರಾಮಕೃಷ್ಣ ನಗರದ ಸುಯೋಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರಾಮಕೃಷ್ಣ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಬಗ್ಗೆ ವೈದ್ಯರು ಪೋಷ ಕರಿಗೆ ಮಾಹಿತಿ ನೀಡಿದ್ದರು.

ಪುತ್ರ ಬದುಕುವ ಸಾಧ್ಯತೆ ಕಡಿಮೆ ಎಂಬುದು ಖಚಿತವಾದ ನಂತರ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದರು.
ಕೂಡಲೇ ಸುಯೋಗ ಆಸ್ಪತ್ರೆ ವೈದ್ಯರ ತಂಡ ಪೊಲೀಸರನ್ನು ಸಂಪರ್ಕಿಸಿ ಮೆದುಳು ನಿಷ್ಟ್ರಿಯ ಗೊಂಡಿದ್ದ ರಾಮಕೃಷ್ಣ ಅವರನ್ನು ಜೀರೋ ಟ್ರಾಫಿಕ್‍ನಲ್ಲಿ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು.

ಮೈಸೂರಿನ ಪೊಲೀಸರು ಮಂಡ್ಯ, ರಾಮ ನಗರ, ಬೆಂಗಳೂರು ಪೊಲೀಸರ ನೆರವಿನೊಂದಿಗೆ ಜೀರೋ ಟ್ರಾಫಿಕ್‍ನಲ್ಲಿ ಮೆದುಳು ನಿಷ್ಟ್ರಿಯ ಗೊಂಡಿದ್ದ ವ್ಯಕ್ತಿಯನ್ನು ಸುಸಜ್ಜಿತ ವ್ಯವಸ್ಥೆಯುಳ್ಳ ಆಂಬುಲೆನ್ಸ್‍ನಲ್ಲಿ ಕಳುಹಿಸಲಾಯಿತು.

ಮಂಗಳವಾರ ಸಂಜೆ 6.30ರ ವೇಳೆ ಬೆಂಗ ಳೂರು ತಲುಪಿದ ನಂತರ ಅಂಗಾಗ ದಾನ ಪ್ರಕ್ರಿಯೆ ಆರಂಭಿಸಿದರು. ಕಣ್ಣು, ಹೃದಯ ಕವಾಟ, ಮೂತ್ರಪಿಂಡ ಮತ್ತಿತರೆ ಅಂಗಗಳನ್ನು ತೆಗೆದು ಅಗತ್ಯವಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಲು ವೈದ್ಯರ ತಂಡ ನಿರ್ಧರಿಸಿದೆ ಎಂದ ತಿಳಿದುಬಂದಿದೆ. ಯಾವ ಅಂಗಗಳು ಯಾವ ಯಾವ ಆಸ್ಪತ್ರೆಗೆ ದಾನವಾಗಿ ಹೋಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿಲ್ಲ

Translate »