ಕೆಆರ್, ಚೆಲುವಾಂಬ ಆಸ್ಪತ್ರೆಗೆ ಬರುವ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ
ಮೈಸೂರು

ಕೆಆರ್, ಚೆಲುವಾಂಬ ಆಸ್ಪತ್ರೆಗೆ ಬರುವ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ

June 23, 2020

ಮೈಸೂರು, ಜೂ.22(ಎಸ್‍ಬಿಡಿ)- ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಶುಲ್ಕ ಪಾವತಿಸಿ ವಾಹನ ನಿಲುಗಡೆ ಮಾಡುವ (ಪೇ ಅಂಡ್ ಪಾರ್ಕ್) ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ಹೋಗುವವರು ತಮ್ಮ ವಾಹನ ವನ್ನು ನಿಲ್ದಾಣದಲ್ಲಿ ಪಾರ್ಕ್ ಮಾಡಿ, ಚೀಟಿ ಪಡೆಯಬೇಕು. ವಾಪಸ್ಸಾಗುವಾಗ ನಿಗದಿತ ಶುಲ್ಕ ನೀಡಿ, ವಾಹನ ತೆಗೆದು ಕೊಂಡು ಬರಬೇಕು. ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ವಾಹನದಲ್ಲಿ ಬರ ವವರೆಲ್ಲಾ ಆಯುರ್ವೇದ ಕಾಲೇಜು ವೃತ್ತದ ಸಮೀಪದಲ್ಲಿರುವ ಗೇಟ್‍ನಲ್ಲಿ ಪ್ರವೇಶಿಸಿ, ಎಡಭಾಗದಲ್ಲಿ ಪಾರ್ಕ್ ಮಾಡಬೇಕು.

ಶ್ರೀ ಭೈರವ ವಾಹನ ನಿಲ್ದಾಣದ ಬಿ.ಮಹ ದೇವು ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆ ವಾಹನ ನಿಲ್ದಾಣದ ಟೆಂಡರ್ ಪಡೆ ದಿದ್ದಾರೆ. ಸೈಕಲ್ ನಿಲ್ಲಿಸಿದರೆ ಮೊದಲ ಗಂಟೆಗೆ 2ರೂ., 1ರಿಂದ 5 ಗಂಟೆವರೆಗೆ 4ರೂ., 5ರಿಂದ 24 ಗಂಟೆವರೆಗೆ 8 ರೂ. ತೆರಬೇಕು. ದ್ವಿಚಕ್ರ ವಾಹನವಾದರೆ ಮೊದಲ ಗಂಟೆಗೆ 5ರೂ., 1ರಿಂದ 5 ಗಂಟೆ ವರೆಗೆ 10 ರೂ., 5ರಿಂದ 24 ಗಂಟೆವರೆಗೆ 20 ರೂ., ಆಟೋಗೆ ಕ್ರಮವಾಗಿ 10, 20, 35 ರೂ., ಕಾರುಗಳಿಗೆ ಕ್ರಮವಾಗಿ 15, 30, 50 ರೂ. ನಿಗದಿಪಡಿಸಲಾಗಿದೆ.
ಹಲವು ಬಾರಿ ಆಸ್ಪತ್ರೆಗೆ ಓಡಾಡುವ ಅವಶ್ಯಕತೆಯಿದ್ದರೆ ಸೈಕಲ್‍ಗೆ 5ರೂ., ದ್ವಿಚಕ್ರ ವಾಹನಕ್ಕೆ 15 ರೂ., ಆಟೋಗೆ 30 ರೂ. ಹಾಗೂ ಕಾರಿಗೆ 40 ರೂ. ನೀಡಿ, ದಿನದ ಪಾಸ್ ಪಡೆದು, ಆ ಹೊತ್ತಿನಿಂದ ಎಷ್ಟು ಬಾರಿಯಾದರೂ ನಿಲುಗಡೆ ಮಾಡ ಬಹುದು. ಹೀಗೆ ದರಪಟ್ಟಿ ಪ್ರದರ್ಶಿಸಿರುವ ಫಲಕದಲ್ಲಿ ಜಿಎಸ್‍ಟಿ ನೋಂದಣಿ ಸಂಖ್ಯೆ ಯನ್ನೂ ನಮೂದಿಸಲಾಗಿದೆ. ವಾಹನ ಗಳಿಗೆ ಹಾನಿಯಾದರೆ ಅಥವಾ ಯಾವುದೇ ವಸ್ತು ಕಳುವಾದರೆ ನಿಲ್ದಾಣದವರು ಜವಾ ಬ್ದಾರರಲ್ಲ ಎಂಬ ಎಚ್ಚರಿಕಾ ಸೂಚನೆ ಪ್ರಕಟಿಸಲಾಗಿದೆ.

ಬಡವರಿಗೆ ಮತ್ತೊಂದು ಬರೆ: ಮೂರ್ನಾಲ್ಕು ವರ್ಷ ಕಳೆದರೆ ಕೃಷ್ಣರಾಜೇಂದ್ರ (ಕೆ.ಆರ್. ಆಸ್ಪತ್ರೆ) ಆಸ್ಪತ್ರೆ ಶತಮಾನ ಪೂರೈಸಲಿದೆ. ಈವರೆಗೂ ಇದು ಬಡವರ ಪಾಲಿನ ದೊಡ್ಡಾ ಸ್ಪತ್ರೆ. ಮೈಸೂರು ಮಾತ್ರವಲ್ಲದೆ ನೆರೆ ಹೊರೆ ಜಿಲ್ಲೆಗಳಿಂದಲೂ ಇಲ್ಲಿಗೆ ಬರುತ್ತಾರೆ. ವೈದ್ಯ ಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಇರುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಗೂ ಚಿಕಿತ್ಸೆ ಲಭ್ಯ. ಈ ಆಸ್ಪತ್ರೆಗೆ ಶ್ರೀಮಂತರು ಬರುವುದಿಲ್ಲ. ಒಂದೊಂದು ರೂಪಾಯಿಗೂ ಕಷ್ಟಪಡುವ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಮಾತ್ರ ಕೆ.ಆರ್.ಆಸ್ಪತ್ರೆ ಹೊರತು ಪರ್ಯಾಯ ಆಯ್ಕೆಯಿಲ್ಲ. 10 ರೂ. ನೀಡಿ ಹೊರ ರೋಗಿ ಗಳ ಚೀಟಿ ಪಡೆದರೆ ತಪಾಸಣೆ ಜೊತೆಗೆ ಔಷಧಿಯೂ ಸಿಗುತ್ತದೆ. ಹೀಗಿರುವಾಗ ವಾಹನಗಳ ನಿಲುಗಡೆಗೆ ಶುಲ್ಕ ಪಡೆಯು ವುದು ಸರಿಯಲ್ಲ. ಆಸ್ಪತ್ರೆ ಇತಿಹಾಸದಲ್ಲೇ ರೋಗಿಗಳ ವಾಹನ ನಿಲ್ಲಿಸಲು ಹಣ ಪಡೆದ ಉದಾಹರಣೆಯಿಲ್ಲ ಎಂದು ಹಲ ವರು ಬೇಸರ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆ ಚೀಟಿಗೆ 10 ರೂ. ಪಾವತಿಸ ಲಾಗದವರು ಖಾಸಗಿ ವಾಹನಗಳಲ್ಲಿ ಬರಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡು ವುದು ಸಹಜ. ಆದರೆ ಹುಷಾರು ತಪ್ಪಿದಾಗ ನೆರೆಹೊರೆಯವರ ವಾಹನ ಪಡೆದು ಆಸ್ಪ ತ್ರೆಗೆ ಬರಬಹುದು. ತುರ್ತು ಸಂದರ್ಭ ದಲ್ಲಿ ಅಕ್ಕಪಕ್ಕದವರೇ ನೆರವಿಗೆ ಧಾವಿಸಿ, ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆತರ ಬಹುದು. ಸದ್ಯ ಕೊರೊನಾ ಭೀತಿ ಹಾಗೂ ಸಾರಿಗೆ ಸೌಲಭ್ಯ ಸಮರ್ಪಕವಾಗಿಲ್ಲದ ಕಾರಣ ಖಾಸಗಿ ವಾಹನದಲ್ಲಿ ಬರುವವರೇ ಹೆಚ್ಚು. ಸ್ಕೂಟರ್, ಬೈಕ್ ಸಿಗದವರು ಸೈಕಲ್‍ನಲ್ಲಿ ಬಂದರೂ ಪಾರ್ಕಿಂಗ್‍ಗೆ ಹಣ ಕೊಡ ಬೇಕು. ಆಸ್ಪತ್ರೆಯಲ್ಲಿ ಒಂದು ಗಂಟೆಯೊ ಳಗೆ ಚಿಕಿತ್ಸೆ ಸಿಗುವುದು ಕಷ್ಟ. ಒಂದೈದು ನಿಮಿಷ ತಡವಾದರೂ ಶುಲ್ಕ ದುಪ್ಪಟ್ಟಾ ಗುತ್ತದೆ. ಮೊದಲೇ ಸಂಕಷ್ಟದಲ್ಲಿರುವ ಬಡವರಿಗೆ ಇದೊಂದು ಹೆಚ್ಚುವರಿ ಬರೆ ಎಂದು ನೊಂದು ನುಡಿದಿದ್ದಾರೆ.

ಒಳ್ಳೆಯ ಕ್ರಮ: ಆಸ್ಪತ್ರೆಗೆ ಬರುವವರಿ ಗಿಂತ ಕೆ.ಟಿ.ಸ್ಟ್ರೀಟ್, ಇರ್ವಿನ್ ರಸ್ತೆ ಇನ್ನಿತ ರೆಡೆ ಹೋಗುವವರು ಇಲ್ಲಿ ವಾಹನ ನಿಲ್ಲಿಸು ತ್ತಿದ್ದರು. ಗ್ರಾಮಾಂತರ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಹತ್ತಿರವಾಗಿ ರುವ ಕಾರಣ ಬೇರೆ ಊರಿಗೆ ಪ್ರಯಾಣ ಬೆಳೆಸುವವರೂ ಆಸ್ಪತ್ರೆ ಆವರಣದಲ್ಲಿ ವಾಹನ ನಿಲ್ಲಿಸಿ ಹೋಗುತ್ತಿದ್ದರು. ಗೇಟ್ ಬಳಿ ಪೊಲೀಸ್ ಇರುತ್ತಿದ್ದ ಕಾರಣ ಇಲ್ಲಿ ವಾಹನ ನಿಲ್ಲಿಸಿದರೆ ಸುರಕ್ಷಿತವಾಗಿರುತ್ತದೆ, ಅಲ್ಲದೆ ಹಣವನ್ನೂ ಪಾವತಿಸುವಂತಿಲ್ಲ ಎಂಬ ಭಾವನೆಯಿಂದ ನೂರಾರು ಮಂದಿ ಪಾರ್ಕ್ ಮಾಡುತ್ತಿದ್ದರು. ಆದರೂ ಖದೀ ಮರು ಹೊಂಚು ಹಾಕಿ ವಾಹನ ಕಳವು ಮಾಡುತ್ತಿದ್ದರು. ಇದೆಲ್ಲದಕ್ಕೂ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ ಸರಿಯಾದ ಕ್ರಮ ಎಂದು ಮತ್ತಷ್ಟು ಮಂದಿಯ ವಾದವಾಗಿದೆ.

Translate »