ಸೀವೆಜ್ ಫಾರಂ ತ್ಯಾಜ್ಯ ವಿಲೇವಾರಿ ಹೊಸ ಯೋಜನೆ ವಿರೋಧಿಸುವವರು ಸ್ವಚ್ಛ ಭಾರತ ವಿರೋಧಿಗಳು…
ಮೈಸೂರು

ಸೀವೆಜ್ ಫಾರಂ ತ್ಯಾಜ್ಯ ವಿಲೇವಾರಿ ಹೊಸ ಯೋಜನೆ ವಿರೋಧಿಸುವವರು ಸ್ವಚ್ಛ ಭಾರತ ವಿರೋಧಿಗಳು…

May 16, 2020

ಮೈಸೂರು, ಮೇ 15(ಎಂಟಿವೈ)- ಮೈಸೂರಿನ ವಿದ್ಯಾ ರಣ್ಯಪುರಂನಲ್ಲಿರುವ ಸೀವೆಜ್ ಫಾರಂ ಕಸದ ಸಮಸ್ಯೆ ಬಗೆಹರಿಸಲು ನಾನು ಮುಂದಾ ಗಿರುವುದನ್ನು ವಿರೋಧಿಸುವವರು ಪ್ರಧಾನಿ ನರೇಂದ್ರ ಮೋದಿ ಅವರ `ಸ್ವಚ್ಛ ಭಾರತ್ ಅಭಿಯಾನ’ ವನ್ನೇ ವಿರೋಧಿಸಿದಂತೆ ಎಂದು ಸಂಸದ ಪ್ರತಾಪ ಸಿಂಹ ಮತ್ತೊಮ್ಮೆ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಟಾಂಗ್ ನೀಡಿದ್ದಾರೆ.

ಮೈಸೂರಿನ ಜಲದರ್ಶಿನಿಯಲ್ಲಿ ಶುಕ್ರವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷ ದಿಂದ ಸೀವೆಜ್ ಫಾರಂನಲ್ಲಿ ಅಪಾರ ಪ್ರಮಾಣದ ಕಸದ ರಾಶಿ ಸಂಗ್ರಹವಾಗಿ, ಸುತ್ತಮುತ್ತಲಿನ ನಿವಾಸಿಗಳಿಗೆ ದುರ್ವಾ ಸನೆ ಬೀರುತ್ತಿದೆ. ಇದೀಗ ಕಸದ ರಾಶಿಯನ್ನು ತೆರವು ಗೊಳಿಸಿ ಶಾಶ್ವತವಾಗಿ ಸಮಸ್ಯೆ ಇತ್ಯರ್ಥಕ್ಕೆ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿರುವುದಕ್ಕೆ ಅಪಸ್ವರ ಎತ್ತುವುದು ಸರಿಯಲ್ಲ. ಸರಿಯಾದ ರೀತಿಯಲ್ಲಿ ಸಾರ್ವಜನಿಕ ಅಭಿಪ್ರಾಯ ಕೇಳಿಲ್ಲ ಎನ್ನುವುದು ಸರಿಯಲ್ಲ. ಯೋಜನೆ ಅನುಷ್ಠಾನಕ್ಕೆ ಬಹು ಭಾಗ ಪ್ರಕ್ರಿಯೆ ಪೂರ್ಣಗೊಂಡಿ ರುವಾಗ ಅಡ್ಡಗಾಲಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಯೋಜನೆ ಅನುಷ್ಠಾನಕ್ಕೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಅವರು ಹೇಳುತ್ತಿರುವುದು ಸರಿಯಲ್ಲ. ನಾಲ್ಕು ಬಾರಿ ಶಾಸಕರಾಗಿ ದ್ದವರು, ಸಚಿವರಾಗಿ, ಕಾಪೆರ್Çರೇಷನ್ ಚುನಾವಣೆ ಮತ್ತು ಪದವೀಧರರ ಕ್ಷೇತ್ರದಿಂದಲೂ ಹಿಂದೆ ಸ್ಪರ್ಧಿಸಿ ಅನುಭವ ಹೊಂದಿದ್ದವರು. ಅಂತಹವರಿಗೆ ಸಾರ್ವಜನಿಕ ಅಭಿಪ್ರಾಯ ಯಾವುದಕ್ಕೆ ಕೇಳಬೇಕು, ಕೇಳಬಾರದು ಎಂದು ತಿಳಿದಿ ಲ್ಲವೇ? ಗ್ರಾ.ಪಂ. ಸದಸ್ಯನಿಗೂ ಸಾರ್ವಜನಿಕ ಅಭಿಪ್ರಾಯ ಎಂದರೇನು ಎನ್ನುವುದು ತಿಳಿದಿರುತ್ತದೆ ಎಂದರು.

ಯಾವುದೇ ಹೊಸ ಯೋಜನೆ ಜಾರಿಗೆ ಮುನ್ನ ಅದ ರಿಂದ ಪರಿಸರಕ್ಕೆ ಹಾನಿಯಾಗುತ್ತದೆಯೇ ಎನ್ನುವುದನ್ನು ತಿಳಿಯಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಸರ ನಿಯಂ ತ್ರಣ ಮಂಡಳಿ ನೋಟಿಸ್ ಕೊಟ್ಟು ಜನರ ಅಭಿಪ್ರಾಯ ವನ್ನು ಸಂಗ್ರಹಿಸುತ್ತದೆ. ಹೊಸ ಯೋಜನೆಯಿಂದ ಸ್ಥಳೀಯ ರಿಗೆ ಏನಾದರೂ ಹಾನಿಯಾಗುತ್ತಾ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಲಾಗುತ್ತದೆ. ಅದರಿಂದ ಹಾನಿ ಆಗುತ್ತದೆ ಎಂದಾದರೆ ಸಾರ್ವಜನಿಕರು ತಮ್ಮ ಅಭಿ ಪ್ರಾಯ ಮಂಡಿಸಬಹುದು. ಇದು ಹೊಸ ಯೋಜನೆ ಅಲ್ಲ. ಇಲ್ಲಿರುವ ಎಕ್ಸೆಲ್ ಪ್ಲಾಂಟ್ ಹೊಸ ಯೋಜನೆ ಅಲ್ಲ. 30 ವರ್ಷದಿಂದ ಇದೆ. ಡಿ.ರಂದೀಪ್ ಅವರು ಡಿಸಿ ಆಗಿದ್ದಾಗ 2017ರಲ್ಲಿ ರಿ ಮಾಡಲಿಂಗ್ ಮಾಡುವಾಗಲೂ ಸಭೆ ನಡೆಸಿದ್ದಾರೆ. ಕೆಸರೆ ಮತ್ತು ರಾಯನಕೆರೆಯಲ್ಲೂ ಹೊಸ ಪ್ಲಾಂಟ್‍ಗಳನ್ನು ನಿರ್ಮಿಸಲುದ್ದೇಶಿಸಿದ್ದಾಗ ಸಾರ್ವಜನಿಕ ವಿಚಾರಣೆ ಆಗಿದೆ. ಜನರು ಅಭಿಪ್ರಾಯ ಕೊಟ್ಟಿದ್ದಾರೆ. ಆದರೆ ಇದೀಗ ಮತ್ತೊಮ್ಮೆ ಹೊಸದಾಗಿ ಸಾರ್ವಜನಿಕ ಅಭಿಪ್ರಾಯ ಯಾಕೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ನನಗೆ ಇದನ್ನು ಅವರು ಹೇಳಬೇಕು ಎಂದು ಕಿಡಿಕಾರಿದರು.

ಸ್ಥಳೀಯರಿಗೆ ದುರ್ವಾಸನೆ ಬೀರುತ್ತಿರುವ 3 ಲಕ್ಷ ಟನ್ ಕಸವನ್ನು ಸ್ವಚ್ಛ ಮಾಡುವ ಕೆಲಸ ಇದಾಗಿದೆ. 2018ರ ಫೆಬ್ರ ವರಿಯಲ್ಲಿ ರಾಮದಾಸ್ ಅವರು ಮಾಜಿ ಶಾಸಕರಾಗಿ ದ್ದರು. ಆ ವೇಳೆ ಕಸದ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಕುಳಿತಿದ್ದರು. ಅಂದು ಸ್ಥಳಕ್ಕೆ ನಾನೇ ಖುದ್ದಾಗಿ ಜಿಲ್ಲಾಧಿಕಾರಿಯೊಂದಿಗೆ ಹೋಗಿ, ಎಳೆನೀರು ಕುಡಿಸಿ ಕಸದ ಸಮಸ್ಯೆ ಇತ್ಯರ್ಥ ಮಾಡುವ ಭರವಸೆ ಕೊಟ್ಟಿದ್ದೆ. ಅದೇ ವರ್ಷ ನಡೆದ ಚುನಾವಣೆಯಲ್ಲಿ ರಾಮ ದಾಸ್ ಶಾಸಕರಾದರು. ನಂತರ 18 ತಿಂಗಳ ಕಾಲ ಎಕ್ಸೆಲ್ ಪ್ಲಾಂಟ್ ಹತ್ತಿರ ಹೋಗಿ ಜನರ ಅಭಿಪ್ರಾಯ ಕೇಳಿಲ್ಲ. ನಾನು ಕೊಟ್ಟ ಭರವಸೆಯಿಂದಾಗಿ ಸಚಿವ ವಿ.ಸೋಮಣ್ಣ ಅವರ ಸಹಕಾರ ಪಡೆದು, ಮೂರು ಮೀಟಿಂಗ್ ಮಾಡಿ ಅಂತಿಮವಾಗಿ ಈ ಯೋಜನೆ ಜಾರಿಗೊಳಿಸಲು ತೀರ್ಮಾ ನಿಸಲಾಯಿತು. ಇದೀಗ ಟೆಂಡರ್ ಕರೆಯುವ ಹಂತಕ್ಕೆ ಬಂದು ನಿಂತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಈ ಯೋಜನೆ, ಪ್ರಧಾನಿ ಮೋದಿಯವರು 2014 ಅ.2ರಂದು ಘೋಷಿಸಿದ ಸ್ವಚ್ಛ ಭಾರತ ಅಭಿಯಾನದ ಒಂದು ಭಾಗವೇ ಆಗಿದೆ. ಮೈಸೂರನ್ನು ಸ್ವಚ್ಛ ನಗರಿ ಎಂದು ಹೇಳುತ್ತಾರೆ. ಅದಕ್ಕೆ ಪೂರಕ ವಾಗಿ ಈ ಹೊಸ ಯೋಜನೆ ಸಹಕಾರಿಯಾಗಲಿದೆ. ಅದಕ್ಕೆ ಯಾರದ್ದೂ ತಕರಾರಿಲ್ಲ, ತಕರಾರು ಮಾಡಿದರೆ ಅವರು ಸ್ವಚ್ಛ ಭಾರತದ ವಿರೋಧಿಗಳಾಗುತ್ತಾರೆ. ಯಾವುದೇ ಅಡೆತಡೆ ಬಂದರೂ ಸರಿ ಈ ಯೋಜನೆಯನ್ನು ಮಾಡಿಯೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಣ್ಣ, ಮಧÀ್ಯಮ ಕೈಗಾರಿಕೆಗೆ ಉಪಯೋಗ: ಪ್ರಧಾನಿ ಮೋದಿ ಕೊರೊನಾ ಹಿನ್ನೆಲೆಯಲ್ಲಿ ಘೋಷಿಸಿರುವ 20ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್‍ನಿಂದ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ಹೆಚ್ಚು ಅನುಕೂಲವಾಗಲಿದೆ. ಕೈಗಾ ರಿಕೆಗಳ ಅಭಿವೃದ್ಧಿಗೆ ಉದ್ಯೋಗ ಸೃಷ್ಟಿಗೆ ದೊಡ್ಡ ಅನು ಕೂಲ ಮಾಡಿಕೊಡಲಿದೆ. ಲಾಕ್‍ಡೌನ್‍ನಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿದ್ದವು. ಇದನ್ನು ಮನಗಂಡು ದೊಡ್ಡ ಮಟ್ಟದ ಪ್ಯಾಕೇಜ್ ಘೋಷಿಸಿದ್ದಾರೆ. ಅಲ್ಲದೆ 21ನೇ ಶತಮಾನ ಭಾರತದ್ದು. ಕೈಗಾರಿಕೆಗಳ ಅಭಿ ವೃದ್ಧಿ ಮಾಡಿ, ಯುವಜನರಿಗೆ ಕೆಲಸ ಸಿಗುವಂತೆ ದೊಡ್ಡ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದು ಖಂಡಿತ ಕೈಗಾರಿಕೆಗಳ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಬಹಳ ಅನು ಕೂಲ ಮಾಡಿಕೊಡಲಿದೆ. ಮುಂದಿನ ದಿನಗಳಲ್ಲಿ ಜನರಿಗೆ ಪ್ಯಾಕೇಜ್ ಬಗ್ಗೆ ಚೆನ್ನಾಗಿ ಮನವರಿಕೆಯಾಗುತ್ತದೆ ಎಂದರು.

Translate »