ಶಾಸಕರಾಗಿ ಎರಡು ವರ್ಷ ಪೂರ್ಣ
ಮೈಸೂರು

ಶಾಸಕರಾಗಿ ಎರಡು ವರ್ಷ ಪೂರ್ಣ

May 16, 2020

ಮೈಸೂರು, ಮೇ 15- ಮೈಸೂರು ಹಾಗೂ ರಾಜ್ಯಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಲು ಸಾರ್ವಜನಿಕ ಬದುಕಿನಲ್ಲಿ ಕನಸು ಹೊತ್ತು ಬಂದ ತಮಗೆ ಕೃಷ್ಣರಾಜ ಕ್ಷೇತ್ರದ ಜನತೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಸದಾ ಚಿರಋಣಿ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ.

ತಾವು ಶಾಸಕರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ಕ್ಷೇತ್ರದ ಜನರಿಗೆ ಕೃತಜ್ಞತೆ ತಿಳಿಸಿರುವ ಅವರು, ಕಳೆದ 27 ವರ್ಷಗಳ ಅವಧಿಯಲ್ಲಿ ಹಲವು ಸಾಧನೆಗಳನ್ನು ಮಾಡಿದ ಹಾಗೂ ರಾಜ್ಯದಲ್ಲಿ ಕೆಲವು ಕೆಲಸಗಳನ್ನು ಪ್ರಪ್ರಥಮವಾಗಿ ಮಾಡಿದ ತೃಪ್ತಿ ತಮಗಿದ್ದರೂ ಇನ್ನೂ ಸಾಧನೆ ಮಾಡಬೇ ಕೆಂಬ ಹಂಬಲ ಹೊಂದಿದ್ದು, ಹಲವಾರು ಅಭಿವೃದ್ಧಿ ಕೆಲಸಗಳ ಪ್ರಯತ್ನ ಅರ್ಧದಲ್ಲಿದೆ. ಅದನ್ನು ಶೀಘ್ರ ಪೂರ್ಣಗೊಳಿಸುವ ನಂಬಿಕೆ ತಮಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷೇತ್ರಕ್ಕಾಗಿ ಮೈಸೂರಿಗಾಗಿ ಹಾಗೂ ರಾಜ್ಯಕ್ಕಾಗಿ ಕಂಡಿರುವ ಕನಸುಗಳನ್ನು ನನಸು ಮಾಡುವ ದಿಸೆಯಲ್ಲಿ ರಾಜಕೀಯ ಏರುಪೇರುಗಳು, ನಾನು ವಿಕೋಪ ಪರಿಸ್ಥಿತಿಗಳು, ದೇಶದ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಕುಂಠಿತ ಮುಂತಾದ ವ್ಯತಿರಿಕ್ತ ಪರಿಸ್ಥಿತಿಯಲ್ಲೂ ತಾವು ಹೊಂದಿರುವ ಗುರಿಗಳನ್ನು ಸಾಧಿಸಿ, ಕ್ಷೇತ್ರದಲ್ಲಿ 4 ಬಾರಿ ಗೆಲುವು ತಂದು ಕೊಟ್ಟು ಅತೀ ಚಿಕ್ಕ ವಯಸ್ಸಿ ನಲ್ಲೇ ರಾಜ್ಯದ ಪಬ್ಲಿಕ್ ಅಕೌಂಟ್ಸ್ ಕಮಿಟಿ ಅಧ್ಯಕ್ಷನಾಗಿ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ, ರಾಜ್ಯ ಕ್ಯಾಬಿನೆಟ್ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಕೆ.ಆರ್.ಕ್ಷೇತ್ರದ ಜನತೆಯ ಋಣವನ್ನು ತೀರಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ರಾಮದಾಸ್ ತಿಳಿಸಿದ್ದಾರೆ.

Translate »