ಗೋಕುಲಂ ಬಡಾವಣೆಯಲ್ಲಿ ನಿತ್ಯ ರಾಸಾಯನಿಕ ಸಿಂಪಡಣೆ
ಮೈಸೂರು

ಗೋಕುಲಂ ಬಡಾವಣೆಯಲ್ಲಿ ನಿತ್ಯ ರಾಸಾಯನಿಕ ಸಿಂಪಡಣೆ

May 22, 2020

ಮೈಸೂರು, ಮೇ 21- ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ನಗರಪಾಲಿಕೆ ಸದಸ್ಯ ಎಸ್.ಬಿ.ಎಂ. ಮಂಜು ವಾಹನವೊಂದನ್ನು ಸಿದ್ಧ ಪಡಿಸಿದ್ದು, ಬಡಾವಣೆಯ ಎಲ್ಲಾ ರಸ್ತೆಗಳಲ್ಲಿ ನಿತ್ಯ ಸೋಡಿಯಂ ಹೈಪೋ ಕ್ಲೋರೆಟ್ ರಾಸಾಯನಿಕ ದ್ರಾವಣವನ್ನು ಸಿಂಪಡಿ ಸುವ ವ್ಯವಸ್ಥೆ ಮಾಡಿದ್ದಾರೆ.

ವಾರ್ಡ್ ನಂ.6 ವ್ಯಾಪ್ತಿಯ ಗೋಕುಲಂ ಮತ್ತು ಬೃಂದಾವನ ಬಡಾವಣೆ ವ್ಯಾಪ್ತಿಯಲ್ಲಿ ಸೋಂಕು ನಿರೊಧಕ ದ್ರಾವಣವನ್ನು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಸಿಂಪಡಿಸುವ ಮೂಲಕ ವಾರ್ಡ್‍ನ ಜನತೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಮೈಸೂರು ಪಾಲಿಕೆ ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ ಮೂಲಕ ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳು ಸೇರಿದಂತೆ ವಾಣಿಜ್ಯ ಸಂಕೀರ್ಣ ಪ್ರದೇಶಗಳಲ್ಲಿ ಸೋಂಕು ನಿರೋಧಕ ರಾಸಾ ಯನಿಕ ದ್ರಾವಣ ಸಿಂಪಡಣೆ ಮಾಡುವ ಮೂಲಕ ಸೋಂಕು ಹರಡದಂತೆ ಮುಂಜಾ ಗ್ರತೆ ವಹಿಸಿದೆ. ವಾರ್ಡ್ ಮಟ್ಟದಲ್ಲಿಯೂ ಕಾಳಜಿ ವಹಿಸಿದ ಎಸ್‍ಬಿಎಂ ಮಂಜು ಅವರು ಓಮ್ನಿ ವ್ಯಾನ್‍ನಲ್ಲಿ ರಾಸಾಯನಿಕ ದ್ರಾವಣವನ್ನು ಸಿಂಪಡಿಸುತ್ತಿದ್ದಾರೆ. ಅದಕ್ಕೆ ಇಬ್ಬರನ್ನು ನೇಮಕ ಮಾಡಿದ್ದು, ತಾವೇ ಅವರಿಗೆ ವೇತನ ನೀಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಈ ರಾಸಾಯನಿಕ ಸಿಂಪಡಣೆ ಕಾರ್ಯ ನಡೆಯುತ್ತಿದ್ದು, ಆಗಾಗ್ಗೆ ಸಿಂಪಡಣೆ ಮಾಡುವ ಮೂಲಕ ನನ್ನ ವಾರ್ಡ್‍ನಲ್ಲಿ ಕೊರೊನಾ ಸೋಂಕು ಹರಡ ದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎನ್ನು ತ್ತಾರೆ ಪಾಲಿಕೆ ಸದಸ್ಯ ಎಸ್.ಬಿ.ಎಂ. ಮಂಜು

Translate »