ಸಾ.ರಾ.ಮಹೇಶ್ ಆರೋಪಿಸಿದಾಕ್ಷಣ ನೇಮಕಾತಿ ಪ್ರಕ್ರಿಯೆ ರದ್ದಾಗದು
ಮೈಸೂರು

ಸಾ.ರಾ.ಮಹೇಶ್ ಆರೋಪಿಸಿದಾಕ್ಷಣ ನೇಮಕಾತಿ ಪ್ರಕ್ರಿಯೆ ರದ್ದಾಗದು

May 22, 2020

ಮೈಸೂರು, ಮೇ 21(ಆರ್‍ಕೆಬಿ)- ಅಕ್ರಮದ ಆರೋಪ ಕೇಳಿ ಬಂದಾಕ್ಷಣ ಮೈಮುಲ್ ನೇಮಕ ಪ್ರಕ್ರಿಯೆ ರದ್ದು ಪಡಿಸಲು ಸಾಧ್ಯವಿಲ್ಲ. ಇಲಾಖೆ ತನಿಖೆ ನಡೆದಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕುರಿತು ನಿರ್ಧರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ಸ್ಪಷ್ಟಪಡಿಸಿದರು.

ಜಿಪಂ ಕಚೇರಿ ಆವರಣದಲ್ಲಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ಸಚಿವರು, ಈ ನೇಮಕ ಪ್ರಕ್ರಿಯೆಯೇನೂ ತರಾತುರಿಯಿಂದ ಆದದ್ದಲ್ಲ. 6-7 ತಿಂಗಳಿಂದ ನಡೆದು ಬಂದಿದೆ. ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ ಎಂಬ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಲಾ ಗದು. ತನಿಖೆ ಯಾರಿಂದ ಮಾಡಿಸಬೇಕು ಎಂದು ಸಾರಾ ಅವರನ್ನು ಕೇಳುವ ಅಗತ್ಯವಿಲ್ಲ. ಇಲಾಖೆಯ ರಿಜಿ ಸ್ಟ್ರಾರ್ ಕೂಲಂಕುಶವಾಗಿ ಪರಿಶೀಲನೆ ನಡೆಸುತ್ತಾರೆ. ಇಲಾಖಾ ತನಿಖಾ ವರದಿ 3-4 ದಿನದಲ್ಲಿ ಬರಲಿದ್ದು, ತಪ್ಪಾಗಿದ್ದರೆ ಆರ್‍ಸಿಎಸ್ ಮತ್ತು ಸಹಕಾರ ಇಲಾಖೆ ಎಸಿಎಸ್ ತನಿಖೆ ನಡೆಸುತ್ತಾರೆ ಎಂದು ಸಚಿವರು ವಿವರಿಸಿದರು.

ಸಂದರ್ಶನ ನಡೆಸಿದರೆ ಪ್ರತಿಭಟಿಸುವುದಾಗಿ ಸಾ.ರಾ. ಮಹೇಶ್ ಹೇಳಿದ್ದಾರಲ್ಲ? ಎಂಬ ಪ್ರಶ್ನೆಗೆ, `ಪ್ರತಿಭಟನೆ ಅವರ ಹಕ್ಕು. ಮೈಮುಲ್‍ನಲ್ಲಿ ಕೆಲಸ ಮಾಡಲು ಜನರಿಲ್ಲ ಎಂದು ಅವರ ಅವಧಿಯಲ್ಲೇ ಮಂಜೂರಾತಿ ಮಾಡಿಸಿ ದ್ದರು. ಅಗತ್ಯ ಸಂಖ್ಯೆಯ ನೌಕರರಿಲ್ಲ. ಹಾಗಾಗಿ ಡೈರಿಯಲ್ಲಿ ರೈತರಿಂದ ಹಾಲು ಶೇಖರಿಸಲು ತೊಂದರೆಯಾಗುತ್ತ್ತಿದೆ ಎಂದು ನೇಮಕ ಪ್ರಕ್ರಿಯೆ ಆರಂಭಿಸಿದ್ದಾಗಿ ಮೈಮುಲ್ ಅಧ್ಯಕ್ಷರು, ಎಂಡಿ ತಿಳಿಸಿದ್ದಾರೆ’ ಎಂದು ಉತ್ತರಿಸಿದರು.

ಸಾ.ರಾ.ಮಹೇಶ್ ಅವರ ಇಂಥ ಬ್ಲಾಕ್ ಮೇಲ್ ಹೇಳಿಕೆಗಳಿಗೆ ಹೆದರುವ ಅಗತ್ಯವಿಲ್ಲ. ಅವರ ಬಳಿ ಇರುವ ದಾಖಲೆಗಳನ್ನು ಸಾರ್ವಜನಿಕವಾಗಿ ಮಂಡಿಸಲಿ. ಬುಟ್ಟಿ ಯಲ್ಲಿ ಹಾವಿದೆ, ಹೊರಗೆ ಬಿಡುತ್ತೇನೆ ಎಂದು ಹೆದರಿಸುವ ಹೇಳಿಕೆ ನೀಡುವುದು ಬೇಡ. ಯಾರಿಗಾದರೂ ಅನ್ಯಾಯ ವಾಗಿದ್ದರೆ ಅದನ್ನು ಸರಿಪಡಿಸುವ ಹೊಣೆ ನಮ್ಮದು. ಅರ್ಹ ಅಭ್ಯರ್ಥಿ ಬಿಟ್ಟು ಬೇರೆಯವರ ನೇಮಕ ಆಗಬಾರದು ಅಷ್ಟೇ ಎಂದರು. ನಂತರ ಇದೇ ವಿಚಾರವಾಗಿ ರೈಲ್ವೆ ನಿಲ್ದಾಣದಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮ ಶೇಖರ್, ಮೈಮುಲ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖಾ ವರದಿ ಆಧರಿಸಿ ಕ್ರಮ ವಹಿಸಲಾಗುವುದು. ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಸಾ.ರಾ.ಮಹೇಶ್ ರೊಂದಿಗೂ ನಾನು ಮಾತನಾಡಿದ್ದೇನೆ. ಮೈಮುಲ್ ರೈತರ ಸಂಸ್ಥೆ, ನೇಮಕಾತಿ ಪ್ರಕ್ರಿಯೆ ಈಗ ಆರಂಭವಾಗಿದ್ದಲ್ಲ. ಅವರ ಸರ್ಕಾರ ಇದ್ದಾಗಿನಿಂದಲೇ ನಡೆಯುತ್ತಿತ್ತು. ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ರಿಜಿಸ್ಟ್ರಾರ್‍ರಿಂದ ತನಿಖೆ ನಡೆಸಲಾಗುತ್ತಿದೆ. ವರದಿ ಸಲ್ಲಿಸಿದ ನಂತರ ಪರಿಶೀಲಿಸಿ, ನೇಮಕಾತಿ ಮುಂದು ವರಿಸಬೇಕೇ ಅಥವಾ ಸ್ಥಗಿತಗೊಳಿಸುವುದೇ ಎಂಬು ದನ್ನು ಸರ್ಕಾರ ನಿರ್ಧರಿಸುತ್ತದೆ ಎಂದರು.

Translate »