ಶೂಟಿಂಗ್ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ಅವಘಡ: ನಟ ರಿಷಬ್ ಶೆಟ್ಟಿ ಬೆನ್ನು, ತಲೆಗೆ ಗಾಯ
ಮೈಸೂರು

ಶೂಟಿಂಗ್ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ಅವಘಡ: ನಟ ರಿಷಬ್ ಶೆಟ್ಟಿ ಬೆನ್ನು, ತಲೆಗೆ ಗಾಯ

March 2, 2021

ಹಾಸನ: ಚಿತ್ರೀಕರಣದ ವೇಳೆ ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ರಿಷಬ್ ಶೆಟ್ಟಿ ಹಾಗೂ ನಟಿ ಗಾನವಿ ಸಾಹಸ ದೃಶ್ಯ ಚಿತ್ರೀಕರಣವೊಂದಕ್ಕೆ ಪೆಟ್ರೋಲ್ ಬಾಂಬ್ ಬಳಸಲಾಗಿತ್ತು. ಮೊದಲ ಬಾಂಬ್ ಸಿಡಿ ದರೂ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ, 2ನೇ ಬಾಂಬ್ ಸ್ಫೋಟಗೊಂಡಾಗ ರಿಷಬ್ ಕೊಂಚ ಯಾಮಾರಿದ್ರೆ ದೊಡ್ಡ ಅಪಾಯ ಕಾದಿತ್ತು. ಇದರಿಂದ ರಿಷಬ್ ತಲೆ ಕೂದಲು ಸುಟ್ಟಿದೆ ಹಾಗೂ ಬೆನ್ನ ಮೇಲೆ ಗಾಯವಾಗಿದೆ. ಸಾಕಷ್ಟು ಮುಂಜಾಗ್ರತಾ ಕ್ರಮ ತೆಗದುಕೊಂಡಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲ ಎನ್ನಲಾಗಿದೆ. ಲಾಕ್‍ಡೌನ್ ವೇಳೆ ರಿಷಬ್ ಆಂಡ್ ಟೀಂ ಏನಾದರೂ ಮಾಡಲೇಬೇಕೆಂದು ಅತೀ ಕಡಿಮೆ ಅವಧಿಯಲ್ಲಿ ಸೀಮಿತ ಲೊಕೇಶನ್‍ನಲ್ಲಿ ಡಿಫರೆಂಟ್ ಆಗಿ ‘ಹೀರೋ’ ಸಿನಿಮಾ ರೆಡಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ವೀಕ್ಷಕರು ಶಾಕ್ ಆಗಿದ್ದಾರೆ.

 

 

Translate »