ಹಂಪಿ, ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಆರು ಡಬಲ್ ಡೆಕ್ಕರ್ ತೆರೆದ ಬಸ್‍ಗಳ ವ್ಯವಸ್ಥೆ
ಮೈಸೂರು

ಹಂಪಿ, ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಆರು ಡಬಲ್ ಡೆಕ್ಕರ್ ತೆರೆದ ಬಸ್‍ಗಳ ವ್ಯವಸ್ಥೆ

March 2, 2021

ಮೈಸೂರು,ಮಾ.1-ಮುಖ್ಯಮಂತ್ರಿಗಳು 2019-20ನೇ ಸಾಲಿನ ಆಯವ್ಯಯದ ಭಾಷಣದಲ್ಲಿ ವಿಶ್ವವಿಖ್ಯಾತ ಹಂಪಿ ಮತ್ತು ಮೈಸೂ ರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರಿಗೆ ಲಂಡನ್ ಬಿಗ್‍ಬಸ್ ಮಾದರಿಯ 6 ಡಬಲ್ ಡೆಕ್ಕರ್ ತೆರೆದ ಬಸ್‍ಗಳನ್ನು ಕೆ.ಎಸ್.ಟಿ.ಡಿ.ಸಿ ವತಿಯಿಂದ ಕಾರ್ಯಾಚರಣೆಗೊಳಿಸಲು ರೂ. 5 ಕೋಟಿಗಳ ಅನುದಾನವನ್ನು ಹಂಚಿಕೆ ಮಾಡಿದ್ದಾರೆ.

ಸರ್ಕಾರದ ಈ ಆಶಯದಂತೆ ಲಂಡನ್ ಬಿಗ್‍ಬಸ್ ಮಾದರಿಯ ಡಬಲ್ ಡೆಕ್ಕರ್ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲು ನಿಗಮವು ಡಬಲ್ ಡೆಕ್ಕರ್ ಬಸ್ಸುಗಳನ್ನು ನುರಿತ ಸಂಸ್ಥೆಗಳಿಂದ ಹೊರ ಮೈ ವಿನ್ಯಾಸಗೊಳಿಸಿ ಸಜ್ಜುಗೊಳಿಸಿದ್ದು, ಪ್ರವಾಸ ವೀಕ್ಷಣೆಗೆ ತಯಾರಾಗಿ ರುತ್ತದೆ. ಸದರಿ ಬಸ್ ಕಾರ್ಯಾಚರಣೆಗೆ ಪ್ರಥಮ ಹಂತವಾಗಿ ಮೈಸೂರು ನಗರದಲ್ಲಿ ಕಾರ್ಯಾಚರಣೆಗೊಳಿಸಲು ಸೂಚಿತ ಮಾರ್ಗಗಳಲ್ಲಿರುವ ಅಡೆತಡೆಗಳನ್ನು ತೆರವುಗೊಳಿಸಿದ್ದು, ಬಸ್‍ಗಳ ಸುಗಮ ಕಾರ್ಯಾಚರಣೆಗೆ ಮಾರ್ಗಗಳು ಸಿದ್ಧವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರದ ಪ್ರಸ್ತಾಪಿಸಿದ ಮಾರ್ಗ ಗಳಾದ ಹೋಟೆಲ್ ಮಯೂರ ಹೊಯ್ಸಳ-ಜಿಲ್ಲಾಧಿಕಾರಿಗಳ ಕಚೇರಿ-ಕ್ರಾಫರ್ಡ್ ಹಾಲ್-ಕುಕ್ಕರಹಳ್ಳಿ ಕೆರೆ-ಮೈಸೂರು ಯೂನಿ ವರ್ಸಿಟಿ- ಈoಟಞಟoಡಿe ಒuseum (ಜಾನಪದ ಮ್ಯೂಸಿಯಂ) -ರಾಮಸ್ವಾಮಿ ಸರ್ಕಲ್ -ಅರಮನೆ ಕರಿಕಲ್ಲು ತೊಟ್ಟಿ-ಅರಮನೆ (ದಕ್ಷಿಣ ದ್ವಾರ)-ಜಯಮಾರ್ತಾಂಡ – ಮೃಗಾಲಯ-ಕಾರಂಜಿ ಕೆರೆ -ಸಂಗೊಳ್ಳಿ ರಾಯಣ್ಣ ವೃತ್ತ (ಎಚಿಛಿಞi ಕಿuಚಿಡಿಣeಡಿs ಅiಡಿಛಿಟe) ಸ್ನೋ ಸಿಟಿ- ಚಾಮುಂಡಿವಿಹಾರ್ ಸ್ಟೇಡಿಯಂ-ಸೆಂಟ್ ಫಿಲೋ ಮಿನ ಚರ್ಚ್ -ಬನ್ನಿಮಂಟಪ -ರೈಲ್ವೆ ಸ್ಟೇಷನ್-ಹೋಟೆಲ್ ಮಯೂರ ಹೊಯ್ಸಳ ಮಾರ್ಗದಲ್ಲಿ ಪ್ರತಿ ಅರ್ಧ ಗಂಟೆಗೊಂದ ರಂತೆ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ. ಲಂಡನ್ ಮಾದರಿಯಲ್ಲಿ ತಯಾರಾದ ನಿಗಮದ ಪ್ರತಿಷ್ಠಿತ ಡಬಲ್ ಡೆಕ್ಕರ್ ಬಸ್ಸನ್ನು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮಾ.2 ರಂದು ಸಂಜೆ 5.30ಕ್ಕೆ ಊoಣeಟ ಖಚಿಜissoಟಿ ಃಟue, ಮೈಸೂರಿನಲ್ಲಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಶೃತಿ ಕೃಷ್ಣ ಉಪಸ್ಥಿತರಿರುತ್ತಾರೆ. ಸದರಿ ಬಸ್ಸಿನಲ್ಲಿ ಮೈಸೂರು ನಗರ ವೀಕ್ಷಣೆಗೆ ಪ್ರತಿ ಪ್ರವಾಸಿಗರಿಗೆ ಒಂದು ದಿನಕ್ಕೆ ರೂ. 250/- ಅನ್ನು ನಿಗದಿಪಡಿಸಲಾಗಿದ್ದು, ಪ್ರವಾಸಿಗರು ಈ ವಿಶಿಷ್ಟ ಅನುಭವ ಪಡೆಯಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.

Translate »