ರಾಮಮಂದಿರ ನಿರ್ಮಾಣಕ್ಕೆ ಸದ್ಯ 2,100 ಕೋಟಿ ಸಂಗ್ರಹ: ಈಗ ವಿದೇಶಗಳಲ್ಲಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಿಂತನೆ
ಮೈಸೂರು

ರಾಮಮಂದಿರ ನಿರ್ಮಾಣಕ್ಕೆ ಸದ್ಯ 2,100 ಕೋಟಿ ಸಂಗ್ರಹ: ಈಗ ವಿದೇಶಗಳಲ್ಲಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಿಂತನೆ

March 2, 2021

ಲಖನೌ,ಮಾ.1-ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾ ಣಕ್ಕೆ ದೇಶಾದ್ಯಂತ ಹಮ್ಮಿಕೊಂಡಿದ್ದ ನಿಧಿ ಸಂಗ್ರಹ ಅಭಿಯಾನ ಶನಿವಾರ ಅಂತ್ಯಗೊಂಡಿದ್ದು, ನಿರೀಕ್ಷೆಗೂ ಮೀರಿ ಬರೋಬ್ಬರಿ 2100 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈಗ ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ಈಗ ಜಾಗತಿಕವಾಗಿಯೂ ನಿಧಿ ಸಮ ರ್ಪಣಾ ಅಭಿಯಾನಕ್ಕೆ ಚಾಲನೆ ನೀಡುವ ಚಿಂತನೆ ನಡೆಸಿದೆ.

ಜಾಗತಿಕವಾಗಿಯೂ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡುವಂತೆ ವಿದೇಶಗಳಲ್ಲಿ ವಾಸಿಸುತ್ತಿರುವ ರಾಮ್ ಭಕ್ತರಿಂದ ಸಾಕಷ್ಟು ಮನವಿಗಳು ಬರುತ್ತಿವೆ. ರಾಮಮಂದಿರ ಟ್ರಸ್ಟ್‍ನ ಖಜಾಂಚಿ ಮಹಂತ್ ಗೋವಿಂದ್ ದೇವ್‍ಗಿರಿ ಹೇಳಿದ್ದಾರೆ.

ಶೀಘ್ರದಲ್ಲೇ ಟ್ರಸ್ಟಿಗಳ ಸಭೆಯಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು. ನಿಧಿ ಸಮರ್ಪಣಾ ಅಭಿಯಾನವನ್ನು ಜಾಗತಿಕವಾಗಿ ಪ್ರಾರಂಭಿಸಲು ಟ್ರಸ್ಟ್ ಸದಸ್ಯರು ಅನುಸರಿಸ ಬೇಕಾದ ಆರ್‍ಬಿಐ, ಹಣಕಾಸು ಸಚಿವಾಲಯ, ಐ-ಟಿ ನಿಯಮ ಗಳು ಮತ್ತು ಅನುಮತಿಗಳಿಗೆ ಸಂಬಂಧಿಸಿದ ವಿಧಾನಗಳು ಮತ್ತು ಪೆÇ್ರೀಟೋಕಾಲ್ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮಹಂತ್ ಗೋವಿಂದ್ ದೇವ್‍ಗಿರಿ ತಿಳಿಸಿದ್ದಾರೆ. ಯಾವುದೇ ಸಂಭಾವ್ಯ ವಿವಾದಗಳನ್ನು ತಪ್ಪಿಸಲು ಜಾಗತಿಕ ಧನಸಹಾಯ ಪಡೆಯುವುದಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ನಿಬಂಧನೆಗಳ ಕುರಿತು ಅಧ್ಯಯನ ನಡೆಸಲು ಟ್ರಸ್ಟ್ ಈಗಾಗಲೇ ಒಬ್ಬರು ತಜ್ಞರನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

 

Translate »