ಪೆಟ್ರೋಲ್ 25 ಪೈಸೆ, ಡೀಸೆಲ್ 35 ಪೈಸೆ ಏರಿಕೆ!
ಮೈಸೂರು

ಪೆಟ್ರೋಲ್ 25 ಪೈಸೆ, ಡೀಸೆಲ್ 35 ಪೈಸೆ ಏರಿಕೆ!

February 24, 2021

ನವದೆಹಲಿ,ಫೆ.23-ತೈಲೋತ್ಪನ್ನಗಳ ದರಗಳು ಮತ್ತೆ ಏರಿಕೆ ಕಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್ 25 ಪೈಸೆ ಮತ್ತು ಡೀಸೆಲ್ 35 ಪೈಸೆ ಏರಿಕೆಯಾಗಿದೆ. ಭಾರತ ದಲ್ಲಿ ತೈಲೋತ್ಪನ್ನಗಳ ದರಗಳಲ್ಲಿ 25ರಿಂದ 35 ಪೈಸೆಯಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 90.83 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ದರ ಕೂಡ 81.32 ರೂ.ಗೆ ಆಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ 93.95 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರ 86.19 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರದಲ್ಲಿ 97.32 ರೂ.ಗೆ ಏರಿಕೆಯಾದರೆ, ಡೀಸೆಲ್ 88.42 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ 92.88 ರೂ.ಗೆ ಮತ್ತು ಡೀಸೆಲ್ 86.29 ರೂ.ಗೆ ಏರಿಕೆಯಾಗಿದ್ದು, ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ 91.1 ರೂಗೆ ಮತ್ತು ಡೀಸೆಲ್ 84.18 ರೂ.ಗೆ ಏರಿಕೆಯಾಗಿದೆ.

Translate »