ಮೈಸೂರು

ಮಹಾರಾಷ್ಟ್ರ, ಕೇರಳದಲ್ಲಿ 2  ರೂಪಾಂತರ ವೈರಸ್ ಪತ್ತೆ

February 24, 2021

ನವದೆಹಲಿ, ಫೆ.23- SಂಖS-ಅoಗಿ-2 ನ ಓ440ಏ ಮತ್ತು ಇ484ಏ ಎರಡು ರೂಪಾಂತರಗಳು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪತ್ತೆಯಾಗಿವೆ. ಆದರೆ ಈ ಎರಡು ರಾಜ್ಯಗಳಲ್ಲಿನ ಕೆಲವು ಜಿಲ್ಲೆಗಳಲ್ಲಿ ಪ್ರಕರಣಗಳ ಉಲ್ಬಣಕ್ಕೆ ಅದೇ ಕಾರಣ ಎಂದು ನಂಬಲು ಸದ್ಯ ಯಾವುದೇ ಪುರಾವೆಯಿಲ್ಲ ಎಂದು ಕೇಂದ್ರವು ತಿಳಿಸಿದೆ.

ಪತ್ರಿಕಾಗೋಷ್ಠಿ ನಡೆಸಿದ ನೀತಿ ಆಯೋಗ ಸದಸ್ಯ(ಆರೋಗ್ಯ) ವಿ.ಕೆ. ಪಾಲ್, ದೇಶದಲ್ಲಿ ಈವರೆಗೆ 187 ಜನರಲ್ಲಿ ಇಂಗ್ಲೆಂಡ್ ರೂಪಾಂ ತರದ ಸೋಂಕು ತಗುಲಿರುವುದು ಪತ್ತೆಯಾಗಿದೆ. 6 ಜನರಿಗೆ ದಕ್ಷಿಣ ಆಫ್ರಿಕಾದ ರೂಪಾಂತರ ಸೋಂಕು ತಗುಲಿದೆ. ಒಬ್ಬ ವ್ಯಕ್ತಿಯಲ್ಲಿ ಬ್ರೆಜಿಲ್ ರೂಪಾಂತರದ ಸೋಂಕು ಕಂಡುಬಂದಿದೆ ಎಂದು ಕಳವಳ ವ್ಯಕ್ತಪಡಿಸಿ ದ್ದಾರೆ. ಆದರೆ ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಜಿಲ್ಲೆಗಳಲ್ಲಿ ಏಕಾಏಕಿ ಉಂಟಾದ ಉಲ್ಬಣಕ್ಕೆ ರೂಪಾಂತರ ಸೋಂಕು ಕಾರಣ ಎನ್ನಲು ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

 

 

Translate »