ಉತ್ತಮ ಅರ್ಥವ್ಯವಸ್ಥೆಯು ದೇಶದ ಸದೃಢತೆ ಪ್ರತೀಕ
ಮೈಸೂರು

ಉತ್ತಮ ಅರ್ಥವ್ಯವಸ್ಥೆಯು ದೇಶದ ಸದೃಢತೆ ಪ್ರತೀಕ

February 24, 2021

ಮೈಸೂರು, ಫೆ.23(ಆರ್‍ಕೆ)- ಉತ್ತಮ ಅರ್ಥವ್ಯವಸ್ಥೆಯು ಯಾವುದೇ ದೇಶದ ಸದೃಢತೆಯ ಪ್ರತೀಕವಾಗುತ್ತದೆ ಎಂದು ಬೆಂಗ ಳೂರಿನ ಬ್ರೈನ್ಸ್ ನ್ಯೂರೊ ಸ್ಪೈನ್ ಆಸ್ಪತ್ರೆ ಸಂಸ್ಥಾಪಕ ಅಧ್ಯಕ್ಷ ಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಎನ್.ಕೆ. ವೆಂಕಟರಮಣ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಜೆಎಸ್‍ಎಸ್ ಮಹಾವಿದ್ಯಾಪೀಠವು ಮೈಸೂ ರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಏರ್ಪ ಡಿಸಿದ್ದ ‘ಸುವರ್ಣ ಮಹೋತ್ಸವ ದತ್ತಿ ಉಪ ನ್ಯಾಸ-10’ ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಅವರ ‘ಸ್ಪೇಸ್ ಟೆಕ್ನಾಲಜಿ ಅಂಡ್ ಸೊಸೈ ಟಲ್ ಅಪ್ಲಿಕೇಷನ್ಸ್’, ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಡಾ. ಗೀತಾ ಗೋಪಿನಾಥ್ ಅವರ ‘ಗ್ಲೋಬಲೈಸೇಷನ್: ಚಾಲೆಂಜಸ್ ಅಂಡ್ ದಿ ನೀಡ್ ಫಾರ್ ಕೋ-ಆಪರೇ ಷನ್’ ಕೃತಿಗಳನ್ನು ಬಿಡುಗಡೆ ಮಾಡಿ ಎನ್.ಕೆ. ವೆಂಕಟರಮಣ ಮಾತನಾಡಿದರು.

ಯಾವುದೇ ದೇಶದ ಪ್ರಗತಿಯು ಅಲ್ಲಿನ ಆರ್ಥಿಕ ವ್ಯವಸ್ಥೆಯನ್ನು ಅವಲಂಬಿಸಿದೆ. ಡಾ.ಗೀತಾ ಗೋಪಿನಾಥ್ ಅವರು ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಚೀಫ್ ಎಕನಾಮಿಸ್ಟ್ ಆಗಿ ತಮ್ಮ ಅನುಭವಗಳನ್ನು ಪುಸ್ತಕದಲ್ಲಿ ಹಂಚಿ ಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ದೃಢಪಟ್ಟಲ್ಲಿ ಡಿಫೆನ್ಸ್, ಫಿಲಾ ಸಫಿಯಲ್ಲೂ ಪ್ರಗತಿ ಸಾಧಿಸಿ ಆ ಮೂಲಕ ವಿಶ್ವದ ಬಡತನ ನಿರ್ಮೂಲನೆ ಮಾಡ ಬಹುದು ಎಂಬುದನ್ನೂ ಅವರು ಪ್ರಸ್ತಾ ಪಿಸಿ ಕೆಲ ಸಲಹೆಗಳನ್ನೂ ನೀಡಿರುವುದು ಶ್ಲಾಘ ನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸ್ಪೇಸ್ ಟೆಕ್ನಾಲಜಿ ಅಂಡ್ ಸೊಸೈಟಲ್ ಅಪ್ಲಿಕೇಷನ್ಸ್’ ಕೃತಿ ಬಗ್ಗೆ ಮಾತನಾಡಿದ ಅವರು, ಬಾಹ್ಯಾಕಾಶ ಸಂಶೋಧನೆಯಲ್ಲಿ ‘ಇಸ್ರೋ’ ಗಣನೀಯ ಕೊಡುಗೆ ನೀಡಿದ್ದು, ಬೌಗೋಳಿಕ, ಸಾಗರ ಮತ್ತು ಪ್ರಕೃತಿ ವಿಕೋಪ ಗಳ ಕುರಿತಂತೆ ಅಧ್ಯಯನ ನಡೆಸಿ ಮುಂದೆ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ಮುಂಚಿತವಾಗಿ ಸಲಹೆ ನೀಡು ವಲ್ಲಿ ಸಂಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು.

‘ಸಾಧನೆ-ವಿಮೋಚನೆಯ ಹಾದಿ’ ವಿಷಯ ಕುರಿತು ಮಾತನಾಡಿದ ಆಂಧ್ರಪ್ರದೇಶದ ಮದನಪಲ್ಲಿಯ ‘ಸತ್ಸಂಗ್ ಫೌಂಡೇಷನ್’ ಸಂಸ್ಥಾಪಕ ಶ್ರೀ ಎಂ ಅವರು, ಮೋಕ್ಷ, ನಿರ್ವಾಣ, ಕೈವಲ್ಯ, ಪ್ರಾಣಸ್ಯ ಎಂಬುದು ಮನುಷ್ಯನ ಸುಖ-ದುಃಖಗಳನ್ನು ಸಮಾನವಾಗಿ ಅನು ಭವಿಸಿ ಜೀವನವನ್ನು ಪೂರ್ಣಗೊಳಿಸಲು ಪ್ರೇರೇಪಿಸುತ್ತವೆ ಎಂದರು.

ಆಸೆ, ಆಕಾಂಕ್ಷೆ, ಪ್ರಜ್ಞೆ ಮತ್ತು ಸತ್ಯನಿಷ್ಠೆಯ ಹಾದಿಯಲ್ಲಿ ಮನುಷ್ಯ ‘ನಾನು’ ಎಂಬುದನ್ನು ಪ್ರತಿಪಾದಿಸಿದರೆ ಅದು ಸ್ವಾರ್ಥ ಎಂದೆನಿ ಸುತ್ತದೆ. ವೇದ-ಉಪನಿಷತ್ತುಗಳಲ್ಲಿ ಸ್ವಾರ್ಥ ರಹಿತ ಬದುಕನ್ನು ಕಲಿಸುವ, ಮನುಷ್ಯನನ್ನು ವಿಶಾಲ ಮನಸ್ಥಿತಿಗೆ ಕೊಂಡೊಯ್ಯುವ ಅನೇಕ ಅಂಶಗಳಿದ್ದು, ವಿಮೋಚನೆಯ ಹಾದಿ ಹಿಡಿ ಯುವಂತೆ ಮಾಡಿವೆ ಎಂದು ನುಡಿದರು.

ಸುತ್ತೂರು ಮಠಾಧೀಶರಾದ ಶ್ರೀ ಶಿವ ರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀ ರ್ವಚನ ನೀಡಿದರು. ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮೆರಿಟರ್ ಎಚ್‍ವಿಎಸ್ ಇಂಡಿಯಾ ಲಿ. ಅಧ್ಯಕ್ಷ ಡಾ.ಎನ್.ಮುತ್ತು ರಾಜ್ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾ ಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರ ಮಠ ಸ್ವಾಗತಿಸಿದರೆ, ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ವಂದಿಸಿದರು. ಜೆಎಸ್‍ಎಸ್ ಕಾನೂನು ಕಾಲೇಜು ಮುಖ್ಯ ಕಾರ್ಯನಿರ್ವಾಹಕ ಪ್ರೊ. ಕೆ.ಎಸ್.ಸುರೇಶ್ ನಿರೂಪಣೆ ಮಾಡಿದರು.

 

Translate »