ಔಷಧಿ ವ್ಯಾಪಾರಿಗಳಿಗೂ ಮೊದಲಿಗೇ ಕೋವಿಡ್ ಲಸಿಕೆ ನೀಡಲು ಮನವಿ
ಮೈಸೂರು

ಔಷಧಿ ವ್ಯಾಪಾರಿಗಳಿಗೂ ಮೊದಲಿಗೇ ಕೋವಿಡ್ ಲಸಿಕೆ ನೀಡಲು ಮನವಿ

October 23, 2020

ಮೈಸೂರು, ಅ.22(ಎಂಟಿವೈ)- ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಲು ನಿರ್ಧರಿಸಿರುವ ಸರ್ಕಾರ, ಔಷಧಿ ವ್ಯಾಪಾರಿಗಳನ್ನೂ ಆರೋಗ್ಯ ಕಾರ್ಯಕರ್ತರೆಂದು ಪರಿಗಣಿಸಿ ಮೊದಲ ಹಂತದಲ್ಲೇ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿ ಗಳ ಸಂಘವು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಮನವಿ ಸಲ್ಲಿಸಿದೆ.

ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವ ರನ್ನು ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ರಾಜು, ಕಾರ್ಯದರ್ಶಿ ಸಿ.ಕೆ. ಅರುಣ್, ಜಂಟಿ ಕಾರ್ಯದರ್ಶಿ ಎಸ್. ದೇವರಾಜು ನೇತೃತ್ವದಲ್ಲಿ ಮೆಡಿಕಲ್ ಶಾಪ್ ಮಾಲೀಕರು ಹಾಗೂ ಚಿಲ್ಲರೆ ಔಷಧಿ ಮಾರಾಟಗಾರರ ನಿಯೋಗ ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ಔಷಧಿ ವ್ಯಾಪಾರಿಗಳು ಕೊರೊನಾ ಸೋಂಕಿತರ ಪ್ರಾಥ ಮಿಕ ಸಂಪರ್ಕಕ್ಕೆ ಬರುತ್ತಿದ್ದಾರೆ. ಕೊರೊನಾ ಸಂಕಷ್ಟ ಸಮಯದಲ್ಲೂ ಜನರಿಗೆ ಅಗತ್ಯ ಔಷಧಿ ಪೂರೈಸಲು ಔಷಧಿ ವ್ಯಾಪಾರಿಗಳು ಶ್ರಮಿಸಿದ್ದಾರೆ. ಲಾಕ್‍ಡೌನ್ ಸಮಯದಲ್ಲೂ ರೋಗಿಗಳ ಮನೆ ಬಾಗಿಲಿಗೆ ಔಷಧಿ ಸರಬರಾಜು ಮಾಡುವ ಸೇವೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರ ಪಟ್ಟಿಗೆ ಔಷಧಿಗಳ ವ್ಯಾಪಾರಿಗಳನ್ನೂ ಸೇರಿಸಬೇಕು. ಮೊದಲಿಗೆ ಕೋವಿಡ್ ಲಸಿಕೆ ನೀಡಲು ನಿರ್ಧರಿ ಸಿದ ಪಟ್ಟಿಗೂ ಸೇರಿಸುವಂತೆ ಕೋರಿದರು.

ಔಷಧಿ ವ್ಯಾಪಾರಿಗಳ ಬೇಡಿಕೆ ಸಮಂ ಜಸವಾಗಿದೆ. ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಪೂರಕವಾದ ನಿಲುವು ತಾಳುವುದಾಗಿ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು.

ಔಷಧಿ ವ್ಯಾಪಾರಿಗಳ ಸಂಘದ ಕಾರ್ಯ ದರ್ಶಿ ಸಿ.ಕೆ.ಅರುಣ್ ಮಾತನಾಡಿ, ಕೊರೊನಾ ಹರಡುವಿಕೆ ತಡೆಗಟ್ಟಲು, ಸೋಂಕಿಗೆ ಬಲಿ ಯಾದವರ ರಕ್ಷಣೆಗೆ ಜಿಲ್ಲಾಡಳಿತದ ಜತೆ ಔಷಧಿ ವ್ಯಾಪಾರಿಗಳ ಸಂಘ ಪೂರ್ಣ ಸಹಕಾರ ನೀಡಿದೆ. ಮೈಸೂರಿನ ಔಷಧಿ ವ್ಯಾಪಾರಿಗಳಲ್ಲಿ ಹಲವರು ಸೋಂಕಿಗೆ ಒಳಗಾಗಿದ್ದರೆ, ಐವರು ಬಲಿಯಾಗಿದ್ದಾರೆ. ಈಗ ಸರ್ಕಾರ ಆರೋಗ್ಯ ಕಾರ್ಯಕರ್ತ ರಿಗೆ ಮೊದಲಿಗೇ ಕೋವಿಡ್ ಲಸಿಕೆ ಹಾಕಲು ನಿರ್ಧರಿಸಿದೆ. ಔಷಧಿ ವ್ಯಾಪಾರಿಗಳನ್ನೂ ಅದೇ ರೀತಿ ಪರಿಗಣಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಡಿಸೆಂಬರ್‍ನಲ್ಲಿ ಮೊದಲ ಹಂತದಲ್ಲಿ 3 ಕೋಟಿ ಲಸಿಕೆ ಸಿದ್ಧಗೊಳ್ಳುತ್ತಿದೆ. ಕೋವಿಡ್ ಲಸಿಕೆ ಆರೋಗ್ಯ ಕಾರ್ಯಕರ್ತರಲ್ಲಿ ಯಾರಿ ಗೆಲ್ಲಾ ನೀಡಬೇಕೆಂದು ಅ.31ರೊಳಗೆ ಪಟ್ಟಿ ಮಾಡುವಂತೆ ಸರ್ಕಾರ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದೆ. ಔಷಧಿ ವ್ಯಾಪಾರಿಗಳನ್ನೂ ಪರಿಗಣಿಸುವಂತೆ ಮನವಿ ಮಾಡಿದ್ದೇವೆ ಎಂದರು.

Translate »