ದೇಶದ ಪ್ರಗತಿಯಲ್ಲಿ ಕುರುಬ ಸಮಾಜದ ಪಾತ್ರ ಪರಿಚಯಿಸುವ ಉದ್ದೇಶ
ಮೈಸೂರು

ದೇಶದ ಪ್ರಗತಿಯಲ್ಲಿ ಕುರುಬ ಸಮಾಜದ ಪಾತ್ರ ಪರಿಚಯಿಸುವ ಉದ್ದೇಶ

October 23, 2020

ಮೈಸೂರು, ಅ.22(ಆರ್‍ಕೆಬಿ)- ಸಂಸ್ಕøತಿ, ಪರಂಪರೆ, ದೇಶದ ಬೆಳವಣಿಗೆಯಲ್ಲಿ ಕುರುಬ ಸಮುದಾಯದ ಪಾತ್ರವನ್ನು ರಾಷ್ಟ್ರಕ್ಕೆ ಪರಿ ಚಯಿಸುವ ಪ್ರಮುಖ ಉದ್ದೇಶದಿಂದಲೇ ಶೆಫರ್ಡ್ ಇಂಡಿಯಾ ಇಂಟರ್‍ನ್ಯಾಷ ನಲ್ ಸಂಘಟನೆ ಸ್ಥಾಪಿಸಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ತಿಳಿಸಿದರು.

ಮೈಸೂರಿನ ಸಿದ್ದಾರ್ಥನಗರದ ಕನಕ ಮಠದ ಸಭಾಂಗಣದಲ್ಲಿ ಶೆಫರ್ಡ್ ಇಂಡಿಯಾ ಇಂಟರ್‍ನ್ಯಾಷನಲ್‍ನ ಮೈಸೂರು ಜಿಲ್ಲಾ ಮಹಿಳಾ ಘಟಕದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುರುಬ ಸಮಾಜದ ಮಹಿಳೆ ರಾಷ್ಟ್ರದ ಧಾರ್ಮಿಕ, ರಾಜಕೀಯ ಜೀವದ ಕೇಂದ್ರ ಬಿಂದುವಾಗಿ ರುವುದು ಇತಿಹಾಸದಲ್ಲಿ ಸೇರಿಹೋಗಿದೆ ಎಂದು ರಾಣಿ ಅಹಲ್ಯಾದೇವಿ ಹೋಳ್ಕರ್ ಅವರ ಉದಾಹರಣೆ ನೀಡಿದರು.

ಸಭೆ ಉದ್ಘಾಟಿಸಿದ ಸಂಸ್ಥೆಯ ರಾಷ್ಟ್ರೀಯ ಸಂಚಾಲಕರೂ ಆದ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಶೀಘ್ರವೇ ಸಂಘಟನೆ ಯನ್ನು ರಾಜ್ಯಾದ್ಯಂತ ಬಲಗೊಳಿಸಿ ವಿವಿಧ ವಿಭಾಗಗಳನ್ನು ರಚಿಸಿ ಕಾರ್ಯೋನ್ಮುಖ ರಾಗಿ ಎಂದು ಯುವಕರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪ್ರೇಮ ಲತಾ ಬಸವರಾಜು ಮಾತನಾಡಿ, ಸಮಾ ಜದ ರಾಷ್ಟ್ರ ನಾಯಕರ ಮಾರ್ಗದರ್ಶನದ ಮೇರೆಗೆ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಘಟಕ ಗಳನ್ನು ರಚಿಸಿ, ಸಕ್ರಿಯಗೊಳಿಸಲಾಗುವುದು ಎಂದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಿವರಾಯಪ್ಪ, ಹರೀಶ್, ರಾಜ್ಯ ಅಧ್ಯಕ್ಷ ಸಿ.ಎಂ.ನಾಗರಾಜ, ಪ್ರಧಾನ ಕಾರ್ಯದರ್ಶಿ ನಾಗರಾಜು, ಮಹೇಶ್, ಸಮೃದ್ಧಿ ಸುರೇಶ್, ಮರಳಹುಂಡಿ ಪುಟ್ಟ ಸ್ವಾಮಿ, ಸಂಚಾಲಕಿ ಕಮಲಾ, ಪೂರ್ಣಿಮಾ, ಶಾಂತಲಾ ಇನ್ನಿತರರು ಇದ್ದರು.

 

 

Translate »