ತತ್ವಜ್ಞಾನಿಗಳ ದಿನಾಚರಣೆ: ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ
ಮೈಸೂರು

ತತ್ವಜ್ಞಾನಿಗಳ ದಿನಾಚರಣೆ: ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ

May 30, 2022

ಮೈಸೂರು, ಮೇ ೨೯(ಆರ್‌ಕೆಬಿ)- ಶ್ರೀ ಶಂಕರಾಚಾರ್ಯರ ಜಯಂತಿ ಹಾಗೂ ತತ್ವಜ್ಞಾನಿಗಳ ದಿನಾಚರಣೆ ಅಂಗವಾಗಿ ಕರ್ನಾಟಕ ಸೇನಾಪಡೆ ವತಿಯಿಂದ ಭಾನುವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.

ಮೈಸೂರಿನ ಗನ್‌ಹೌಸ್ ಬಳಿಯ ಶಂಕರಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಜೇಸುದಾನ್ (ರಾಜಕೀಯ), ಎಸ್.ಗಣೇಶ್‌ರಾವ್ (ಸಮಾಜ ಸೇವೆ), ಮಹೇಶ್ ಕಾಮತ್ (ಹೋಟೆಲ್ ಉದ್ಯಮ), ಟಿ.ಸುರೇಶ್ (ಸೇವೆ), ಉದಯ ಶಂಕರ್ (ಶಿಕ್ಷಣ), ಎಸ್.ವಾಣ (ಬರಹ), ರಾಘವೇಂದ್ರ ಸೇಠ್ (ವಾಣ ಜ್ಯ), ಮಡ್ಡೀಕೆರೆ ಗೋಪಾಲ್ (ಕನ್ನಡ ಸಾಹಿತ್ಯ) ಅವರಿಗೆ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ೪೫ ಮಂದಿ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ೬೨೫ಕ್ಕೆ ೬೨೫ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಾದ ಯಶಸ್ವಿ ಅರಸ್ ಮತ್ತು ಚಾರುಕೀರ್ತಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಂತರ ಮಾತನಾಡಿದ ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಶಂಕರಮಠದ ಶಾರದಾದೇವಿ ಸನ್ನಿಧಾನದಲ್ಲಿ ೬೦೦ಕ್ಕೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯ ಕಾರ್ಯ. ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸುತ್ತಿರು ವುದು ಉತ್ತಮ ಬೆಳವಣ ಗೆ ಎಂದರು. ಜೆಡಿಯು ಮಹಿಳಾ ರಾಜ್ಯಾ ಧ್ಯಕ್ಷೆ ಡಾ.ಮಂಜುಳಾ ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾ ಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಹೆಚ್.ಕೆ.ರಾಮು, ಚಿಂತಕ ರಘುರಾಂ ಕೆ.ವಾಜಪೇಯಿ, ಸಾಹಿತಿ ಡಾ.ಲೀಲಾ ಕೆ.ಪ್ರಕಾಶ್, ಕವಯಿತ್ರಿ ಪುಷ್ಪಾ ಅಯ್ಯಂಗಾರ್, ಸೇನಾಪಡೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ಗೌಡ, ಮುಖಂಡರಾದ ಶಾಂತರಾಜೇ ಅರಸ್, ನರಸಿಂಹೇಗೌಡ, ಸಿ.ಕೃಷ್ಣಯ್ಯ, ಡಾ.ರಾಮಚಂದ್ರ, ಬಂಗಾರಪ್ಪ, ಅಂಬಾ ಅರಸ್, ಇಂದಿರಾ, ಜ್ಯೋತಿ, ಪದ್ಮ, ರವಿ ನಾಯಕ, ಪ್ರಭಾಕರ ಇತರರಿದ್ದರು.

 

Translate »