ನಾಳೆ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ 297ನೇ ಜಯಂತ್ಯುತ್ಸವ
ಮೈಸೂರು

ನಾಳೆ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ 297ನೇ ಜಯಂತ್ಯುತ್ಸವ

May 30, 2022

ಮೈಸೂರು,ಮೇ ೨೯(ಪಿಎಂ)-ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ವತಿಯಿಂದ ಮೇ ೩೧ರಂದು ಭಾರತೀಯ ಅಸ್ಮಿತೆ ಕಾಶಿ ವಿಶ್ವನಾಥನ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ, ಅಪ್ರತಿಮ ಆಡಳಿತ ನೀಡಿದ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ೨೯೭ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಬೀರಪ್ಪ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಮುಕ್ತ ಗಂಗೋತ್ರಿಯ ಮುಕ್ತ ವಿವಿಯ ಕಾವೇರಿ ಸಭಾಂಗಣ ದಲ್ಲಿ ಅಂದು ಬೆಳಗ್ಗೆ ೧೧ ಗಂಟೆಗೆ ಜಯಂತಿಯ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಯಾಗಿ ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಪಾಲ್ಗೊಳ್ಳಲಿದ್ದಾರೆ. ಸಂಘಟನೆಯ ಸಂಸ್ಥಾಪಕರೂ ಆದ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಕುರುಬ ಸಮುದಾಯಕ್ಕೆ ಸೇರಿದ ಅಹಲ್ಯಾಬಾಯಿ ಹೋಳ್ಕರ್ ಮರಾಠರ ಸಂಸ್ಥಾನ ಮಾಲ್ವಾವನ್ನು ಆಳಿದ ರಾಣ . ರಾಷ್ಟçದ ಇತಿಹಾಸದಲ್ಲಿ ಸಾಮ್ರಾಜ್ಯವನ್ನಾಳಿದ ರಾಜಮಾತೆಯರಲ್ಲಿ ಇವರು ಅಗ್ರಸ್ಥಾನ ಪಡೆದಿದ್ದಾರೆ. ದೇಶದ ೧೨ ಕಡೆಗಳಲ್ಲಿ ಜ್ಯೋತಿ ರ್ಲಿಂಗದ ಜೀರ್ಣೋದ್ಧಾರಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಸಮುದಾಯದ ಎಲ್ಲಾ ಹಿರಿಯ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಅಧ್ಯಯನ ಪ್ರವಾಸ: ಜೂನ್‌ನಲ್ಲಿ ಎ.ಹೆಚ್.ವಿಶ್ವನಾಥ್ ಸೇರಿದಂತೆ ದೇಶದ ೪೫ ಮಂದಿ ಸಮುದಾಯದ ನಾಯಕರು ವಿವಿಧ ದೇಶಗಳ ಕುರಿ ಸಾಕಾಣ ಕೆ ಸಮುದಾಯಗಳ ಕುರಿತು ಅಧ್ಯಯನಕ್ಕಾಗಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬೀರಪ್ಪ ತಿಳಿಸಿದರು. ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಶಶಾಂಕ್, ವಿವನ್ ಈಶ್ವರ್, ಹರೀಶ್, ಚಂದ್ರು ಬಿ.ಕನಕ, ಅಭಿಷೇಕ್ ಶಿವಣ್ಣ, ವಿನೋದ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »