ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಳೆ ಅವಾಂತರ: ಪರಿಹಾರ ಕಾಮಗಾರಿಗಳಿಗೆ 27.50 ಕೋಟಿ ರೂ. ಅನುದಾನ ನೀಡಿ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಳೆ ಅವಾಂತರ: ಪರಿಹಾರ ಕಾಮಗಾರಿಗಳಿಗೆ 27.50 ಕೋಟಿ ರೂ. ಅನುದಾನ ನೀಡಿ

May 30, 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ಜಿ.ಟಿ.ದೇವೇಗೌಡ ಮನವಿ ಸಲ್ಲಿಕೆ

ಮೈಸೂರು,ಮೇ ೨೯-ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಭಾನುವಾರ ಬೆಂಗ ಳೂರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಚಾಮುಂಡೇಶ್ವರಿ ಕ್ಷೇತ್ರ ದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು, ಪರಿಹಾರ ಕಾಮಗಾರಿಗಳಿಗೆ ೨೭.೫೦ ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿದರು.

ಕ್ಷೇತ್ರದ ಹಿನಕಲ್ ಕೆರೆ, ಬೋಗಾದಿ ಕೆರೆ, ಲಿಂಗಾA ಬುದಿ ಕೆರೆಗಳು ಸುಮಾರು ೨೦ ವರ್ಷಗಳ ನಂತರ ಕೋಡಿ ಬಿದ್ದ ಪರಿಣಾಮ ಜನವಸತಿ ಪ್ರದೇಶಗಳು ಜಲಾವೃತ ಗೊಂಡು ಸಾರ್ವಜನಿಕರು ಅಪಾರ ಪ್ರಮಾಣದ ನಷ್ಟಕ್ಕೊಳ ಗಾಗಿದ್ದಾರೆ. ಸಾರ್ವಜನಿಕ ರಸ್ತೆ, ಸೇತುವೆ, ಚರಂಡಿಗಳು ತೀವ್ರವಾಗಿ ಹಾಳಾಗಿದ್ದು, ಸಂಸದರು, ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಸಂಬAಧಿಸಿದ ಇತರೆ ಅಧಿಕಾರಿ ಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಪುನರಾವರ್ತನೆಯಾಗದಂತೆ ತಡೆಯಲು ಪಾಲಿಕೆ ಆಯುಕ್ತರು ವಿವರವಾದ ಮಾಹಿತಿಗಳೊಂದಿಗೆ ಕಾಮಗಾರಿಗಳಿಗೆ ೨೭.೫೦ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಅನುದಾನ ವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಶೀಘ್ರ ಅನುದಾನ ಬಿಡುಗಡೆ ಮಾಡಿದರೆ ತುರ್ತಾಗಿ ಕಾಮಗಾರಿಗಳನ್ನು ಕೈಗೊಳ್ಳಬಹುದು. ಇದರಿಂದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟು ನೆರವಾಗಬಹುದಾಗಿದೆ ಎಂದು ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿ ಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಿ.ಟಿ.ದೇವೇ ಗೌಡ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ವರ್ಷದ ಅಕ್ಟೋಬರ್, ನವೆಂಬರ್ ತಿಂಗಳಲ್ಲಿಯೂ ಸುರಿದ ಭಾರೀ ಮಳೆಯಿಂದ ಜನವಸತಿ ಪ್ರದೇಶಗಳಾದ ಬೋಗಾದಿ ೨ನೇ ಹಂತ, ಸಿಎಫ್‌ಟಿಆರ್‌ಐ ಬಡಾವಣೆ, ಆನಂದನಗರ ಆಶ್ರಯ ಬಡಾವಣೆ, ಆನಂದ ಬಡಾವಣೆ, ಪ್ರೀತಿ ಬಡಾವಣೆ, ರಾಮಕೃಷ್ಣನಗರ, ದಟ್ಟಗಳ್ಳಿ, ಶಾರದಾ ದೇವಿನಗರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ ಗೊಂಡು ಈ ಪ್ರದೇಶದ ನಿವಾಸಿಗಳು ಅಪಾರ ಪ್ರಮಾಣದ ನಷ್ಟಕ್ಕೆ ಒಳಗಾಗಿದ್ದರು. ಆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಭೆ ನಡೆಸಿ, ಕಾಮಗಾರಿ ಗಳನ್ನು ತ್ವರಿತವಾಗಿ ಕೈಗೊಳ್ಳಲು ೧೩೮ ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

Translate »