ಒಂದೆಡೆ ಅಂತಾರಾಷ್ಟಿçÃಯ ಯೋಗಕ್ಕೆ ಸಿದ್ಧತೆ, ಮತ್ತೊಂದೆಡೆ ಕಸದ ರಾಶಿಯ ಸ್ವಾಗತ
ಮೈಸೂರು

ಒಂದೆಡೆ ಅಂತಾರಾಷ್ಟಿçÃಯ ಯೋಗಕ್ಕೆ ಸಿದ್ಧತೆ, ಮತ್ತೊಂದೆಡೆ ಕಸದ ರಾಶಿಯ ಸ್ವಾಗತ

May 30, 2022

ಮೈಸೂರು, ಮೇ ೨೯(ಎಂಟಿವೈ)- ಸಾಂಸ್ಕೃತಿಕ ನಗರಿ ಹಾಗೂ ಸ್ವಚ್ಛನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಮೈಸೂರು’ನಗರದಲ್ಲಿ ಅಂತರ ರಾಷ್ಟಿçÃಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ದಿನ ಸಮೀಪಿಸುತ್ತಿದ್ದು, ಮೈಸೂರಿನ ಹೊರ ವಲಯ ದಲ್ಲಿ ಬಿದ್ದಿರುವ ಕಸದ ರಾಶಿ ಸುಂದರ ನಗರಿಯನ್ನು ಅಣಕಿಸುವಂತಿದೆ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿ ತಾದ್ರಿಪುರದ ರಸ್ತೆ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ ಸಮೀಪ ರಸ್ತೆ ಬದಿ, ಪೃಥ್ವಿ ಲೇಔಟ್, ಮೈಸೂರು-ಬನ್ನೂರು ಮುಖ್ಯ ರಸ್ತೆಯ ದೇವೇ ಗೌಡ ಸರ್ಕಲ್ ಬಳಿ, ಜೆ.ಪಿ.ನಗರ ರೈಲ್ವೆ ಹಳಿ, ನರ್ಮ್ ಯೋಜನೆಯ ವಸತಿ ಸಮುಚ್ಛಯದ ಬಳಿ, ಮೈಸೂರು-ತಿ.ನರಸೀಪುರ ರಸ್ತೆಯ ಆಲನಹಳ್ಳಿ ಬಳಿ, ಸಾತಗಳ್ಳಿ ಬಸ್ ನಿಲ್ದಾಣದ ಸಮೀಪವಿರುವ ಖಾಲಿ ಮೈದಾನ ಸೇರಿದಂತೆ ವಿವಿಧೆಡೆ ಕಸದ ರಾಶಿಯೇ ಬಿದ್ದಿದ್ದು, ಯೋಗ ದಿನದ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಸದ ರಾಶಿಯೇ ಸ್ವಾಗತ ಕೋರುವಂತೆ ಭಾಸವಾಗುತ್ತಿದೆ.

ಅದರಲ್ಲೂ ಮೈಸೂರಿನ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿರುವ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರದ ರಸ್ತೆ ಕಸದ ರಾಶಿಯಿಂದ ದುರ್ನಾತ ಬೀರುತ್ತಿದೆ. ಲಲಿ ತಾದ್ರಿಪುರದ ರಸ್ತೆಯಲ್ಲಿನ ಜೆಎಸ್‌ಎಸ್ ಆಯು ರ್ವೇದ ಆಸ್ಪತ್ರೆ ಸಮೀಪ ಕಸದ ರಾಶಿ, ಪ್ಲಾಸ್ಟಿಕ್ ಕವರ್ ಸೇರಿದಂತೆ ನಿರುಪಯುಕ್ತ ವಸ್ತುಗಳ ರಾಶಿಯೇ ಬಿದ್ದಿರುವುದು ಅಸಹ್ಯ ತರಿಸುತ್ತಿದೆ.
ಪಾಲಿಕೆಯಿಂದಲೇ ಕಸದ ರಾಶಿ: ಲಲಿತಾದ್ರಿಪುರ ರಸ್ತೆಯಲ್ಲಿರುವ ಪೃಥ್ವಿ ಲೇಔಟ್ ಹಾಗೂ ಸುತ್ತಮುತ್ತ ಲಿನ ಲೇಔಟ್‌ಗಳಲ್ಲಿನ ನಿವೇಶನದಾರರು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಲೇಔಟ್‌ಗೆ ಸೇರಿದ ಖಾಲಿ ಜಾಗದಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಾಹನಗಳಿಂದಲೇ ಕಸವನ್ನು ತುಂಬಿ ಕೊಂಡು ಬಂದು ಸುರಿಯಲಾಗುತ್ತಿದೆ. ಇದರಿಂದ ಪ್ರೇರಿತರಾದ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳು ಕಾರು ಹಾಗೂ ಬೈಕ್‌ಗಳಲ್ಲಿ ಬಂದು ಕಸದ ಪೊಟ್ಟಣವನ್ನು ಎಸೆದು ಹೋಗುತ್ತಿದ್ದಾರೆ.

ರಿಂಗ್ ರಸ್ತೆ ಬದಿ ಸ್ವಚ್ಛಗೊಳಿಸಲಿ: ಮೈಸೂರು ರಕ್ಷಣಾ ವೇದಿಕೆಯ ಎಂ.ಎಸ್.ಗುರುರಾಜ ಶೆಟ್ಟಿ ಮಾತ ನಾಡಿ, ಈ ಹಿಂದೆ ಮೈಸೂರಿಗೆ ಸ್ವಚ್ಛ ನಗರಿ ಎಂಬ ಬಿರುದು ಬಂದಿತ್ತು. ಈ ಸಾಲಿನ ಸ್ವಚ್ಛ ಸರ್ವೇಕ್ಷಣೆ ಚಟುವಟಿಕೆ ಆರಂಭವಾಗುವ ಸಂದರ್ಭದಲ್ಲೇ ಮೈಸೂ ರಿಗೆ ಪ್ರವೇಶ ಪಡೆಯುವ ಎಲ್ಲಾ ರಸ್ತೆಗಳ ಜಂಕ್ಷನ್ ಗಳಲ್ಲಿ ಕಸದ ರಾಶಿ ಪ್ರವಾಸಿಗರನ್ನು ಸ್ವಾಗತಿಸು ವಂತಹ ದುಸ್ಥಿತಿ ಎದುರಾಗಿದೆ. ಮೈಸೂರು ಬನ್ನೂರು ರಸ್ತೆ, ಮೈಸೂರು ನರಸೀಪುರ
ರಸ್ತೆಯ ಜಂಕ್ಷನ್‌ನಲ್ಲಿ ಕಸದ ರಾಶಿಯೇ ಸುರಿಯಲಾಗಿದೆ. ರಿಂಗ್ ರಸ್ತೆಯ ಹಲವೆಡೆ ಕಸ ಹಾಗೂ ಕಟ್ಟಡ ತ್ಯಾಜ್ಯ ಕಂಡು ಬರುತ್ತಿದೆ. ಕೂಡಲೇ ರಸ್ತೆ ಬದಿ ಸುರಿಯಲಾಗಿರುವ ಕಸವನ್ನು ತೆರವುಗೊಳಿಸಬೇಕು. ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ಬದಿಯಲ್ಲಿರುವ ಕಸದ ರಾಶಿ ತೆರವುಗೊಳಿಸುವ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರಿಗೆ ಉತ್ತಮ ವಾತಾವರಣ ಕಲ್ಪಿಸುವಂತಾಗಬೇಕು ಒತ್ತಾಯಿಸಿದರು.

ರಸ್ತೆ ಗುಂಡಿ ಮುಚ್ಚಿ: ಮೈಸೂರಿನ ಬಹುತೇಕ ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ಎರಡು ತಿಂಗಳ ಹಿಂದಷ್ಟೇ ಒಂದು ವಾರ್ಡ್ಗೆ ೧೦ ಲಕ್ಷ ರೂ. ವೆಚ್ಚ ಮಾಡಿ ಗುಂಡಿ ಬಿದ್ದಿದ್ದ ರಸ್ತೆಗಳನ್ನು ದುರಸ್ತಿ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಗುಂಡಿಗಳು ಬಾಯಿ ತೆರೆದುಕೊಂಡಿವೆ. ರಾತ್ರಿ ವೇಳೆ ರಸ್ತೆಯಲ್ಲಿರುವ ಗುಂಡಿ ಕಾಣದೇ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಅದರಲ್ಲೂ ನಜû಼ರ್‌ಬಾದ್‌ನಿಂದ ಹಾಲಿನ ಡೈರಿವರೆಗೂ ರಸ್ತೆ ಗುಂಡಿ ಬಿದ್ದಿದೆ. ಈ ರಸ್ತೆಯಲ್ಲಿ ಆಂಬುಲೆನ್ಸ್ಗಳ ಸಂಚಾರ ಹೆಚ್ಚಾಗಿವೆ. ರಸ್ತೆಯಲ್ಲಿನ ಗುಂಡಿಗಳು ಆಂಬುಲೆನ್ಸ್ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ಆರೋಪಿಸಿದರು.

Translate »