ಪಿಕ್‍ಆಪ್ ವಾಹನ ಪಲ್ಟಿ: ಹಲವರಿಗೆ ಗಾಯ
ಕೊಡಗು

ಪಿಕ್‍ಆಪ್ ವಾಹನ ಪಲ್ಟಿ: ಹಲವರಿಗೆ ಗಾಯ

February 29, 2020

ಸುಂಟಿಕೊಪ್ಪ,ಫೆ.28-ಕಾಫಿ ತುಂಬಿಕೊಂಡು ತೆರಳುತ್ತಿದ್ದ ಪಿಕ್‍ಆಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ನಡೆದಿದ್ದು, ಚಾಲಕ ಸೇರಿದಂತೆ ವಾಹನದಲ್ಲಿದ್ದ ವರಿಗೆ ಗಾಯಗಳಾಗಿವೆ.

ಕೆದಕಲ್ ಬಳಿ ಪಿಕ್ ಆಪ್‍ಲ್ಲಿ (ಕೆಎ12-ಎ. 7095) ಕಾಫಿಯನ್ನು ತುಂಬಿಸಿಕೊಂಡು ಸುಂಟಿ ಕೊಪ್ಪ ಕಡೆಗೆ ಬರುತ್ತಿದ್ದರು. ಈ ಸಂದರ್ಭ 7ನೇ ಮೈಲು ಬಳಿ ಪಿಕ್‍ಆಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲೇ ಪಲ್ಟಿ ಹೊಡೆದು ನಿಂತಿತು. ಚಾಲಕ ಹಾಗೂ ಕಾರ್ಮಿಕರಾದ ಶಂಕರ, ಶೇಖರ, ರಾಜು ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಬಳಿಕ ಗಾಯಾಳುಗಳನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಪೈಕಿ ಶಂಕರ ಎಂಬುವರ ಕೈಯಲ್ಲಿ ಸಣ್ಣ ಪ್ರಮಾಣದ ಮೂಳೆ ಮುರಿತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »