ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆ
ಕೊಡಗು

ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆ

February 29, 2020

ಮಡಿಕೇರಿ,ಫೆ.28-ಇತ್ತೀಚೆಗೆ ರಾಜಾ ಸೀಟಿನಲ್ಲಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಖರ್ಚು ವೆಚ್ಚ ಸಂಬಂಧ ಜಿಲ್ಲಾ ಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ಪಡೆದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಶುಕ್ರವಾರ ನಡೆದ ಸಮಿತಿ ಸಭೆ ಯಲ್ಲಿ ಮಾಹಿತಿ ಪಡೆದು, ಫಲಪುಷ್ಪ ಪ್ರದ ರ್ಶನ ಸಂಬಂಧ ಒಂದು ಅಥವಾ ಎರಡು ವಾರದೊಳಗೆ ಬಿಲ್ಲುಗಳನ್ನು ಪಾವತಿಸು ವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ್ ಫಲಪುಷ್ಪ ಪ್ರದರ್ಶನ ಸಂದರ್ಭ ದಲ್ಲಿ ಸುಮಾರು 34,699 ಮಂದಿ ಭೇಟಿ ನೀಡಿದ್ದು, 3,46,990 ರೂ. ಸಂಗ್ರಹವಾ ಗಿದೆ. ಸುಮಾರು 1,338 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಅವಕಾಶ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಗಾಂಧಿ ಮೈದಾನದಲ್ಲಿ ತೆರೆಯಲಾಗಿದ್ದ 41 ಮಳಿಗೆಯಲ್ಲಿ 4,000 ದಂತೆ 1,64, 000 ರೂ. ಆದಾಯ ಬಂದಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಅವರು ರಾತ್ರಿ ಏಳೂವರೆಗೆ ಪ್ರವಾಸಿಗರಿಗೆ ರಾಜಾಸೀಟು ಪ್ರವೇಶ ಕೊನೆಗೊಳ್ಳಲಿದೆ. ಈ ವೇಳೆಯನ್ನು ಹೆಚ್ಚಿಸಬೇಕೆಂಬುದು ಸಾರ್ವಜನಿಕರಿಂದ ಕೇಳಿ ಬರುತ್ತಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್, ಪೌರಾಯುಕ್ತರಾದ ಎಂ.ಎಲ್.ರಮೇಶ್, ಪೊಲೀಸ್ ಇಲಾಖೆಯ ಸಂಚಾರ ಪೊಲೀಸ್ ಇನ್ಸ್‍ಪೆಕ್ಟರ್ ಪದ್ಮನಾಭ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾ ಯಕ ನಿರ್ದೇಶಕ ಕೆ.ಟಿ.ದರ್ಶನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಗಿರೀಶ್ ಇತರರು ಇದ್ದರು.

Translate »