ಮೈಸೂರಲ್ಲಿ ಮತ್ತೆ ಕೊರೊನಾ ಸ್ಫೋಟಕ್ಕೆ `ಯಾತ್ರೆ’ಗಳೇ ಕಾರಣ!?
ಮೈಸೂರು

ಮೈಸೂರಲ್ಲಿ ಮತ್ತೆ ಕೊರೊನಾ ಸ್ಫೋಟಕ್ಕೆ `ಯಾತ್ರೆ’ಗಳೇ ಕಾರಣ!?

January 9, 2022

ಮೈಸೂರು, ಜ.8(ಎಂಟಿವೈ)- ಹೊಸ ವರ್ಷದ ಸಂಭ್ರಮಾಚರಣೆ, ತಮಿಳುನಾಡಿನ ಓಂಶಕ್ತಿ ಹಾಗೂ ಕೇರಳದ ಅಯ್ಯಪ್ಪ ಸ್ವಾಮಿ ಯಾತ್ರೆಯೇ ಮೈಸೂರಲ್ಲಿ ಕೊರೊನಾ ಸ್ಫೋಟಕ್ಕೆ ಕಾರಣವಾಗುತ್ತಾ ಎಂಬ ಪ್ರಶ್ನೆ ಕಾಡುತ್ತಿದ್ದು, ಜನವರಿ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗ ಳಿಂದ ಹೊಸದಾಗಿ ಪತ್ತೆಯಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ಆದರೆ, ಹೊಸ ವರ್ಷದ ಮೊದಲ ವಾರವೇ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿರುವುದು ಜನರಲ್ಲಿ ಆತಂಕ, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಲವು ತಿಂಗಳ ಬಳಿಕ ಮೈಸೂರಲ್ಲಿ ಶುಕ್ರವಾರ 219 ಹೊಸ ಪ್ರಕರಣ ಪತ್ತೆಯಾಗಿವೆ. ದಿಢೀರನೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿ ರುವುದಕ್ಕೆ ಹೊಸ ವರ್ಷದ ಸಂಭ್ರಮವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ವೈರಸ್ ಹರಡುವುದಕ್ಕೆ ಒಂದು ವಾರ ಕಾಲಾವಕಾಶ ಬೇಕಾಗಿದೆ. ಇದನ್ನು ಅವಲೋಕಿಸಿದರೆ ಹೊಸ ವರ್ಷದ ಸಂಭ್ರಮದಿಂದ ಬೇರೆ ಬೇರೆ ಸ್ಥಳಕ್ಕೆ ಹೋಗಿ ಬಂದ ವರಲ್ಲೇ ಕೊರೊನಾ ಸೋಂಕು ಅಂಟಿದ್ದು, ಒಂದು ವಾರದ ಬಳಿಕ ಪತ್ತೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಮಾತನಾಡಿ, ಹೊಸ ವರ್ಷದ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಮೈಸೂರಿಗೆ ಬಂದಿದ್ದ ಪ್ರವಾಸಿಗರು ಅಥವಾ ಸೋಂಕಿತರ ಸಂಪರ್ಕ ಪಡೆದಿದ್ದವರು, ಓಂ ಶಕ್ತಿ ಹಾಗೂ ಕೇರಳದ ವಿವಿಧೆಡೆ ಪ್ರವಾಸಕ್ಕೆ ತೆರಳಿದ್ದವರಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ತಮಿಳುನಾಡಿನ ಓಂ ಶಕ್ತಿಗೆ ಪ್ರವಾಸಕ್ಕೆ ಹೋಗಿ ಬಂದವರನ್ನು ಪತ್ತೆಹಚ್ಚಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಿ.ನರಸೀಪುರದಲ್ಲಿ ಓಂಶಕ್ತಿಗೆ ಹೋಗಿ ಬಂದವರಲ್ಲಿ ಸೋಂಕು ಪತ್ತೆಯಾಗಿರುವುದರಿಂದ ಸೋಂಕಿತರ ಸಂಪರ್ಕಿತರ ಮೇಲೆ ನಿಗಾ ಇಡಲಾಗಿದೆ ಎಂದರು.

ಜಿಲ್ಲೆಯಲ್ಲಿ 5713 ಹಾಸಿಗೆ ವ್ಯವಸ್ಥೆ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದೆಂಬ ಮುಂದಾ ಲೋಚನೆಯಿಂದ ಮೈಸೂರು ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ನಗರದ ಜಿಲ್ಲಾಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆ ಕಾಯ್ದಿರಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆ ಗಳಿಗೆ 1,486 ಹಾಸಿಗೆ ಕೊರೊನಾ ಸೋಂಕಿತರಿಗಾಗಿ ಮೀಸಲಿಡಲಾಗಿದ್ದು, ಒಟ್ಟು ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ 571 ಹಾಸಿಗೆಗಳು ಲಭ್ಯವಿದೆ. ಅದರಲ್ಲಿ ಐಸಿಯು, ವೆಂಟಿ ಲೇಟರ್, ಆಕ್ಸಿಜûóನ್ ಬೆಡ್ ಒಳಗೊಂಡಿದೆ ಎಂದರು.

ಕೊರೊನಾ ಸೋಂಕಿನಲ್ಲಿ ಹೆಚ್ಚಳವಾದರೆ ಕೋವಿಡ್ ಕೇರ್ ಸೆಂಟರ್ ಪುನರಾರಂಭಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚನೆ ನೀಡಿದ್ದಾರೆ. ಈಗಾಗಲೇ ಮಂಡಕಳ್ಳಿಯಲ್ಲಿರುವ ಮುಕ್ತ ವಿಶ್ವವಿದ್ಯಾನಿಲಯದ ಕಟ್ಟಡದ ಕೋವಿಡ್ ಕೇರ್ ಸೆಂಟರ್‍ಗೆ ಜಿಲ್ಲಾಧಿಕಾರಿ ಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲೆಯ ಎಲ್ಲಾ ಕಡೆಯೂ ಕೋವಿಡ್ ಕೇರ್ ಸೆಂಟರ್ ತೆರೆಯುವುದರಿಂದ ಅವುಗಳಲ್ಲಿ 3 ಸಾವಿರ ಹಾಸಿಗೆ ಲಭ್ಯವಿರುತ್ತದೆ. ಲಕ್ಷಣರಹಿತ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ನಲ್ಲಿಟ್ಟು ಔಷಧೋಪಚಾರ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

Translate »