ಮೈಸೂರು ರೈಲು ನಿಲ್ದಾಣದಲ್ಲಿ ಪಿಟ್‍ಲೈನ್ ದುರಸ್ತಿ ಕಾಮಗಾರಿ ಆರಂಭ
ಮೈಸೂರು

ಮೈಸೂರು ರೈಲು ನಿಲ್ದಾಣದಲ್ಲಿ ಪಿಟ್‍ಲೈನ್ ದುರಸ್ತಿ ಕಾಮಗಾರಿ ಆರಂಭ

July 8, 2020

ಮೈಸೂರು,ಜು.7(ಆರ್‍ಕೆ)- ಕೊರೊನಾ ವೈರಸ್ ಭೀತಿಯಿಂದಾಗಿ ರೈಲು ಸಂಚಾರ ಬಹುತೇಕ ಸ್ಥಗಿತಗೊಂಡಿರುವುದರಿಂದ ಮೈಸೂರು ನಿಲ್ದಾಣದ ಪಿಟ್‍ಲೈನ್‍ಗಳ ರಿಪೇರಿ ಕೆಲಸವನ್ನು ರೈಲ್ವೇ ಇಲಾಖೆ ಕೈಗೆತ್ತಿಕೊಂಡಿದೆ. 1993-94ನೇ ಸಾಲಿನಲ್ಲಿ ನಿರ್ಮಿಸಿದ್ದ ಮೈಸೂರು ರೈಲು ನಿಲ್ದಾಣ ಯಾರ್ಡ್‍ನ 1 ಮತ್ತು 3ನೇ ಸಂಖ್ಯೆಯ ಪಿಟ್‍ಲೈನ್‍ಗಳ ಬಹುತೇಕ ಬೇರಿಂಗ್ ಪ್ಲೇಟ್ ಗಳು ಜಖಂಗೊಂಡಿದ್ದವು.

ಆರಂಭದಲ್ಲಿ ಜಾಕ್ ಹ್ಯಾಮರ್ ಬಳಸಿ ಮೇಲಿನ 30 ಸೆಂಟಿಮೀಟರ್ ಲೇಯರ್ ಕಾಂಕ್ರಿಟ್ ಅನ್ನು ತೆಗೆದು ಹಾಕಲು ಯೋಜಿಸಲಾಗಿತ್ತಾದರೂ, ಹೆಚ್ಚಿನ ವೈಬ್ರೇ ಷನ್‍ನಿಂದ ಹಳೇ ಕಾಂಕ್ರಿಟ್‍ಗೆ ಹಾನಿ ಯಾಗುವ ಸಾಧ್ಯತೆ ಇರುವ ಕಾರಣ ಅತ್ಯಾಧುನಿಕ ಉಪಕರಣ ಬಳಸಿ ಪಿಟ್ ಲೈನ್‍ಗಳನ್ನು ನವೀಕರಿಸಲು ನಿರ್ಧರಿಸ ಲಾಗಿದೆ ಎಂದು ವಿಭಾಗೀಯ ಕಮರ್ಷಿ ಯಲ್ ಮ್ಯಾನೇಜರ್ ಪ್ರಿಯಾಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೈಮಂಡ್ ಕಟ್ಟಿಂಗ್ ಟೆಕ್ನಾಲಜಿ ಬಳಸುವುದರಿಂದ ಕೆಳಭಾಗದ ಕಾಂಕ್ರಿಟ್‍ಗೆ ಹಾನಿಯಾಗದಂತೆ ಮೇಲ್ಭಾಗದ 30 ಸೆಂಟಿಮೀಟರ್ ಕಾಂಕ್ರಿಟ್ ಅನ್ನು ಕಡಿಮೆ ಅವಧಿಯೊಳಗೆ ಕತ್ತರಿಸಿ ತೆಗೆಯಬಹು ದಾಗಿದೆ ಎಂಬ ತಜ್ಞರ ಅಭಿಪ್ರಾಯದಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. 2 ತಿಂಗಳೊಳಗಾಗಿ 3.58 ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾ ಗಿದ್ದು, ವಿಭಾಗೀಯ ರೈಲ್ವೇ ವ್ಯವಸ್ಥಾಪಕಿ ಅಪರ್ಣ ಗರ್ಗ್ ಅವರು ಜುಲೈ 4ರಂದು ಪ್ರಗತಿಯಲ್ಲಿರುವ ಪಿಟ್‍ಲೈನ್ ನವೀಕರಣ ಕಾಮಗಾರಿಯನ್ನು ಪರಿಶೀಲಿಸಿದರು ಎಂದು ಪ್ರಿಯಾಶೆಟ್ಟಿ ತಿಳಿಸಿದ್ದಾರೆ.

Translate »