ಮೈಸೂರು, ಜು.7(ವೈಡಿಎಸ್)- ಮೈಸೂರಿನಲ್ಲಿ ಮಧುವನ ಬಡಾವಣೆ ಬಳಿ ಮಂಗಳವಾರ ಸಂಜೆ ಸ್ಕೂಟರ್‍ನಲ್ಲಿ ಬಂದ ಸರಗಳ್ಳರಿ ಬ್ಬರು ನಡೆದುಕೊಂಡು ಹೋಗು ತ್ತಿದ್ದ ಮಹಿಳೆ ಯಿಂದ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಶ್ರೀರಾಂಪುರ 2ನೇ ಹಂತದ ಮಧುವನ ಬಡಾವಣೆ ನಿವಾಸಿ ಗಾಯಿತ್ರಿ ದೇವಿ ಮಾಂಗಲ್ಯ ಸರ ಕಳೆದುಕೊಂಡವರು. ಅವರು ಮಂಗಳವಾರ ಸಂಜೆ ಮಧುವನ ಬಡಾವಣೆ ಕ್ರಾಸ್ ಸಮೀಪ ನಡೆದುಕೊಂಡು ಮನೆಗೆ ವಾಪಸಾಗುತ್ತಿದ್ದಾಗ ಹಿಂಬದಿಯಿಂದ ಸ್ಕೂಟರ್‍ನಲ್ಲಿ ಬಂದ ಖದೀಮರು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದರು. ಈ ಬಗ್ಗೆ ಕುವೆಂಪುನಗರ ಠಾಣೆ ಪ್ರಕರಣ ದಾಖಲಾಗಿದೆ.
