ಯೋಜನೆ ಜಾರಿ ಶತಸಿದ್ಧ: ಮುಖ್ಯಮಂತ್ರಿ
News

ಯೋಜನೆ ಜಾರಿ ಶತಸಿದ್ಧ: ಮುಖ್ಯಮಂತ್ರಿ

March 23, 2022

ಬೆಂಗಳೂರು,ಮಾ.22(ಕೆಎಂಶಿ)-ತಮಿಳುನಾಡು ವಿಧಾನ ಸಭೆಯಲ್ಲಿ ಮೇಕೆದಾಟು ಯೋಜನೆ ವಿರೋಧಿಸಿ ಕೈಗೊಂಡಿ ರುವ ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಯೋಜನೆ ಯನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸುವುದು ಶತಸಿದ್ಧ ಎಂದು ವಿಧಾನಸಭೆಯಲ್ಲಿ ತಿಳಿಸಿದರು.

ಶೂನ್ಯವೇಳೆಯಲ್ಲಿ ಎಚ್.ಕೆ.ಪಾಟೀಲ್, ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಮಾಡಿದ ಪ್ರಸ್ತಾ ವಕ್ಕೆ ಇಡೀ ಸದನ ಪಕ್ಷಭೇದ ಮರೆತು ಒಕ್ಕೊರಲಿನಿಂದ ಆ ರಾಜ್ಯದ ನಿರ್ಣಯವನ್ನು ಖಂಡಿಸಿತು. ತಮಿಳುನಾಡು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿರ್ಣಯವನ್ನು ಕಾನೂನುಬಾಹಿರ ವಾಗಿ ಕೈಗೊಂಡಿದೆ ಎಂದ ಮುಖ್ಯಮಂತ್ರಿ ಅವರು, ನಮ್ಮ ಹಕ್ಕಿನ ಮೇಲೆ ಗದಾಪ್ರಹಾರ ಮಾಡು ತ್ತಿದೆ, ಕಾನೂನು ತಜ್ಞರ ಸಲಹೆ ಪಡೆದು ನಾಳೆಯೇ ಕಾವೇರಿ ಹಾಗೂ ಮೇಕೆದಾಟು ವಿಚಾರದಲ್ಲಿ ರಾಜ್ಯದ ನಿಲುವನ್ನು ಸದನ ದಲ್ಲೇ ಮಂಡಿಸುವುದಾಗಿ ತಿಳಿಸಿದರು.

ಯೋಜನೆ ಕಾರ್ಯಗತ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾ ಗುವುದು. ಅಗತ್ಯ ಬಿದ್ದರೆ ಕೇಂದ್ರಕ್ಕೆ ಸರ್ವಪಕ್ಷದ ನಿಯೋಗ ಕೊಂಡೊಯ್ಯಲಾಗುವುದು. ಸರ್ವಪಕ್ಷದ ಸಭೆಯಲ್ಲಾದ ತೀರ್ಮಾನ ವನ್ನು ಕೇಂದ್ರ ಜಲಶಕ್ತಿ ಸಚಿವರ ಗಮನಕ್ಕೆ ತರಲಾಗಿದೆ ಎಂದರು. ಮೇಕೆದಾಟು ಯೋಜನೆ ಮೂಲಕ ನಮ್ಮ ಪಾಲಿನ ನೀರನ್ನು ಬಳಕೆ ಮಾಡಲು ಯಾರ ಅಪ್ಪಣೆ ಬೇಕಿಲ್ಲ, ಯೋಜನೆ ಅನು ಷ್ಠಾನಕ್ಕಾಗಿ ಸಿಡಬ್ಲ್ಯೂಸಿ ಯಲ್ಲಿ ಸ್ಪಷ್ಟಪಡಿಸಿದ್ದೇವೆ. ಕಾವೇರಿ ನ್ಯಾಯಾಧೀಕರಣದ ತೀರ್ಪನ್ನು ಉಲ್ಲಂಘಿ ಸುತ್ತಿಲ್ಲ ಎಂದರು. ಹಲವು ವರ್ಷಗಳಿಂದ ತಮಿಳುನಾಡಿನ ಪಾಲಿನ ನೀರು ಅಲ್ಲದೆ, ಹೆಚ್ಚುವರಿ ನೀರು ಹರಿದು ಹೋಗಿರುವುದಕ್ಕೆ ದಾಖಲೆ ಇದೆ. ಅಲ್ಲದೆ, ತಮಿಳುನಾಡು ಹೆಚ್ಚುವರಿ ನೀರಿಗೆ ಯೋಜನೆ ರೂಪಿಸುತ್ತಿದೆ, ಅನುಮತಿ ಇಲ್ಲದೆ ಹೊಗೇನಕಲ್ 2ನೇ ಯೋಜನೆಗೆ ಅಡಿಗಲ್ಲು ಹಾಕಿದ್ದು, ಈಗಾಗಲೇ ರಾಜ್ಯ ಆಕ್ಷೇಪ ವ್ಯಕ್ತಪಡಿಸಿದೆ ಎಂದರು. ಇದಕ್ಕೂ ಮುನ್ನ ಮಾತನಾ ಡಿದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಎಚ್.ಕೆ. ಪಾಟೀಲ್, ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿರುವ ನಿರ್ಣಯಕ್ಕೆ ಯಾವುದೇ ಕಿಮ್ಮತ್ತಿಲ್ಲ, ರಾಜ್ಯ ಸರ್ಕಾರ ಮೊದಲು ಪ್ರಧಾನಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಮನವೊಲಿಕೆ ಮಾಡಬೇಕು. ತಾಂತ್ರಿಕ ಮತ್ತು ಕಾನೂನಾತ್ಮಕವಾಗಿ ಯೋಜನೆ ಅನುಷ್ಠಾಗೊಳಿಸಲು ರಾಜ್ಯ ಸರ್ಕಾರಕ್ಕೆ ನ್ಯಾಯಬದ್ಧ ವಾದ ಹಕ್ಕಿದೆ. ತಮಿಳುನಾಡು ಗಡಿ ಪ್ರದೇಶದ ಹಿಂದೆ ಅಣೆಕಟ್ಟೆ ಕಟ್ಟಲು ನಮ್ಮ ತಕರಾರಿಲ್ಲ ಎಂದು ಆ ಸರ್ಕಾರದ ಪರ ವಕೀಲರೇ ಸುಪ್ರೀಂಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ. ಇಂತಹ ನಿರ್ಣಯಗಳನ್ನು ಕೈಗೊಳ್ಳಲು ಅಲ್ಲಿನ ವಿಧಾನಸಭೆಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ರಾಜಕೀಯವಾಗಿ ಕ್ಯಾತೆ ತೆಗೆಯಲು ಈ ನಿರ್ಣಯ ಮಾಡಿದ್ದಾರೆ.

Translate »