ಕೆಆರ್ ಕ್ಷೇತ್ರದಲ್ಲೂ ಪ್ರತಿಜ್ಞಾ ಕಾರ್ಯಕ್ರಮ
ಮೈಸೂರು

ಕೆಆರ್ ಕ್ಷೇತ್ರದಲ್ಲೂ ಪ್ರತಿಜ್ಞಾ ಕಾರ್ಯಕ್ರಮ

July 3, 2020

ಮೈಸೂರು: ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ 19 ವಾರ್ಡ್‍ಗಳಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ `ಪ್ರತಿಜ್ಞಾ’ ಕಾರ್ಯಕ್ರಮ ನಡೆಸಲಾಯಿತು. ಬೆಂಗಳೂರಿನಲ್ಲಿ ನಡೆದ ಡಿ.ಕೆ.ಶಿವ ಕುಮಾರ್ ಪ್ರತಿಜ್ಞಾ ದಿನ ಕಾರ್ಯಕ್ರಮದ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಕೆಪಿಸಿಸಿ ಉಸ್ತುವಾರಿಗಳಾದ ಚಂದ್ರಶೇಖರ್, ರಾಘವೇಂದ್ರ ಮಾರ್ಗದರ್ಶನದಲ್ಲಿ 43ನೇ ವಾರ್ಡ್‍ನ ಕನಕ ಮಂದಿರ, 47ನೇ ವಾರ್ಡ್‍ನ ಅಕ್ಷಯ ಭಂಡಾರ್, ಹುಡ್ಕೋ, ಕುವೆಂಪುನಗರ, 57ನೇ ವಾರ್ಡ್‍ನ ಕೆ.ಬ್ಲಾಕ್ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ, 59ನೇ ವಾರ್ಡ್‍ನ ಚಿಕ್ಕಮ್ಮ ಚಿಕ್ಕನಂಜೇಗೌಡ ಕಲ್ಯಾಣ ಮಂಟಪ, 64ನೇ ವಾರ್ಡ್‍ನ ಆದಿಚುಂಚನಗಿರಿ ರಸ್ತೆಯ ಜನನಿ ಜನ್ಮ ಭೂಮಿ, 65ನೇ ವಾರ್ಡ್‍ನ ಶಿವಪುರ ಸಮುದಾಯ ಭವನ, 60ನೇ ವಾರ್ಡ್‍ನ ವಿಶ್ವೇಶ್ವರ ನಗರದ ಮಂಜುನಾಥ ಕಲ್ಯಾಣ ಮಂಟಪ, 62ನೇ ವಾರ್ಡ್‍ನಲ್ಲಿ ರಾಹುಲ್ ಕನ್ವೆನ್ಷನ್, 61ನೇ ವಾರ್ಡ್‍ನ ವಿದ್ಯಾರಣ್ಯಪುರಂ ಗುರುದೇವಾಶ್ರಮ, 54ನೇ ವಾರ್ಡ್‍ನ ಕರುಮಾರಿಯಮ್ಮ ಸಭಾಂಗಣ, 50ನೇ ವಾರ್ಡಿನ ಸುಣ್ಣದಕೇರಿ ಮಹದೇಶ್ವರ ದೇವಸ್ಥಾನ, 49ನೇ ವಾರ್ಡ್‍ನ ನಂಜುಮಳಿಗೆ ಕುರುಹಿನಶೆಟ್ಟಿ ಸಮುದಾಯ ಭವನ, 52ನೇ ವಾರ್ಡ್ ಕುರುಬಾರಹಳ್ಳಿ 4ನೇ ಕ್ರಾಸ್, 53ನೇ ವಾರ್ಡ್ ಇಟ್ಟಿಗೆ ಗೂಡು, 56ನೇ ವಾರ್ಡ್ ಅಶೋಕಪುರಂ ರಾಮಮಂದಿರದ ಬಳಿ, 51ನೇ ವಾರ್ಡ್‍ನ ಅಗ್ರಹಾರ ನಟರಾಜ ಕಲ್ಯಾಣ ಮಂಟಪ, 55ನೇ ವಾರ್ಡಿನ ಚಾಮುಂಡಿಪುರಂ ಟಿ.ಎಸ್.ರವಿಶಂಕರ್ ಮನೆ, 62ನೇ ವಾರ್ಡ್‍ನ ಜೆ.ಪಿ.ನಗರದ ಭೋವಿ ಸಮುದಾಯ ಭವನ, 48ನೇ ವಾರ್ಡ್ ಜಯನಗರದ ಸಮುದಾಯ ಭವನದಲ್ಲಿ ಪ್ರತಿಜ್ಞಾ ಕಾರ್ಯಕ್ರಮ ನಡೆಯಿತು. ಎಲ್ಲಾ ವಾರ್ಡ್‍ಗಳಲ್ಲಿಯೂ 2 ಎಲ್‍ಇಡಿ ಪರದೆ ಅಳವಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಮಾತನಾಡಿ, ಡಿ.ಕೆ.ಶಿವಕುಮಾರ್ `ಪ್ರತಿಜ್ಞಾ’ ಕಾರ್ಯಕ್ರಮ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಚೈತನ್ಯ ತಂದಿದೆ. ಡಿ.ಕೆ.ಶಿವ ಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಂತಹ ಶಕ್ತಿಗಳು ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದರಲ್ಲಿ ಅನುಮಾನವೇ ಇಲ್ಲ ಎಂದರು. ಟಿ.ಎಸ್.ರವಿಶಂಕರ್, ಜೆ.ಗೋಪಿ, ರಮೇಶ್ ರಾಮಪ್ಪ, ಆನಂದ, ರಾಜೇಶ್, ಮೊಗಣ್ಣಾಚಾರಿ, ಭುವ ನೇಶ್ವರಿ ಪ್ರಭುಮೂರ್ತಿ, ಕೆ.ನಾಗರತ್ನ, ಶೋಭಾ, ಪುಟ್ಟಲಿಂಗಮ್ಮ, ಲೋಕೇಶ್ ಪಿಯಾ, ಹರೀಶ್, ಸೋಮಶೇಖರ್, ಜೋಗಿ ಮಹೇಶ್, ಶ್ರೀನಾಥ್ ಬಾಬು, ಜಗನ್ನಾಥ್ ಭೋವಿ, ರವಿ, ಲತಾ ರಂಗನಾಥ್, ಮಂಜುಳಾ ಇನ್ನಿತರರು ಉಪಸ್ಥಿತರಿದ್ದರು.

ಡಿಕೆಶಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆ
ವೇಳೆ ಕಾಂಗ್ರೆಸ್ ಕಚೇರಿಯಲ್ಲಿ ಗೊಂದಲ
ಮೈಸೂರು,ಜು.2-ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡಿದ ಕಾರ್ಯಕ್ರಮ ವೀಕ್ಷಣೆ ವೇಳೆ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡ ಹಾಗೂ ಅವರ ಪುತ್ರನ ವರ್ತನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಆ ಮುಖಂಡನಿಗೆ ಮಾಜಿ ಶಾಸಕರು ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು. ಕಾಂಗ್ರೆಸ್ ಕಚೇರಿಯಲ್ಲಿ ಅಳವಡಿಸಿದ್ದ ಸ್ಕ್ರೀನ್ ಮೇಲೆ ಕಾರ್ಯಕ್ರಮದ ದೃಶ್ಯಾವಳಿಗಳೂ ಬಿತ್ತರಗೊಳ್ಳುತ್ತಿದ್ದಾಗ ಅದನ್ನು ಕ್ಲಿಕ್ಕಿಸುತ್ತಿದ್ದ ಪತ್ರಿಕಾ ಛಾಯಾಗ್ರಾಹಕ ನೋರ್ವನ ಮೇಲೆ ಕಾಂಗ್ರೆಸ್ ಮುಖಂಡ ಹಾಗೂ ಅವರ ಪುತ್ರ ಹರಿಹಾಯ್ದರು. ಈ ಮುಖಂಡರ ಜೊತೆ ಕೆಲ ಕಾರ್ಯಕರ್ತರು ಸೇರಿಕೊಂಡ ಪರಿಣಾಮ ಮಾತಿಗೆ ಮಾತು ಬೆಳೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮುಖಂಡರು ಹಾಗೂ ಕಾರ್ಯಕರ್ತರಿಗೆ ಕಾರ್ಯಕ್ರಮ ವೀಕ್ಷಿಸಲು ಅಡ್ಡಿಯಾಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮಾಜಿ ಶಾಸಕ ವಾಸು, ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಲ್ಲದೇ, `ಕಾರ್ಯಕ್ರಮ ನಡೆಯುವಾಗ ಅಶಿಸ್ತಿ ನಿಂದ ನಡೆದುಕೊಳ್ಳುವುದು ಸರಿಯಲ್ಲ. ಇಂತಹ ವರ್ತನೆಯನ್ನು ಸಹಿಸುವುದಿಲ್ಲ’ ಎಂದು ತಮ್ಮ ಪಕ್ಷದ ಮುಖಂಡ ಹಾಗೂ ಅವರ ಪುತ್ರನಿಗೆ ಎಚ್ಚರಿಕೆ ನೀಡಿದರು. ನಂತರ ಕಾರ್ಯಕ್ರಮ ವೀಕ್ಷಣೆ ಸರಾಗವಾಗಿ ನಡೆಯಿತು.

Translate »