ಇನ್ನೆರಡು ದಿನದಲ್ಲಿ ಬೊಮ್ಮಾಯಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ಪ್ರಧಾನಿ ಮೋದಿ
News

ಇನ್ನೆರಡು ದಿನದಲ್ಲಿ ಬೊಮ್ಮಾಯಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ಪ್ರಧಾನಿ ಮೋದಿ

May 6, 2022

ಬೆಂಗಳೂರು, ಮೇ ೫(ಕೆಎಂಶಿ)- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ರಾಜ್ಯಸರ್ಕಾರದ ಭವಿಷ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒಂದೆರಡು ದಿನದಲ್ಲೇ ನಿರ್ಧರಿಸಲಿದ್ದಾರೆ. ಯುರೋಪ್ ಪ್ರವಾಸದಿಂದ ಪ್ರಧಾನಿ ಮೋದಿ ದೆಹಲಿಗೆ ಆಗಮಿಸಿದ್ದಾರೆ. ಶುಕ್ರವಾರ ಇಲ್ಲವೆ ಶನಿವಾರ ಕರ್ನಾಟಕದ ಪರಿಸ್ಥಿತಿ ಬಗ್ಗೆ ಗೃಹ ಸಚಿವ ಅಮಿತ್ ಷಾ ಅವರೊಟ್ಟಿಗೆ ಒಂದು ಸುತ್ತಿನ ಮಾತುಕತೆ ನಡೆಸಿ, ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಧಾನಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಸ್ವತಃ ಮುಖ್ಯಮಂತ್ರಿ ಸೇರಿದಂತೆ ಅವರ ಸಂಪುಟದ ಸಚಿವರು, ಬಿಜೆಪಿ ಮುಖಂಡರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮೇ ೧೦ರೊಳಗೆ ಬಿಜೆಪಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವನ್ನು ಮುಖ್ಯಮಂತ್ರಿ ಯವರಿಗೆ ರವಾನೆ ಮಾಡಲಿದ್ದಾರೆ. ಪಕ್ಷದ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ ಇಲ್ಲವೆ ಕೇಂದ್ರ ಹಿರಿಯ ಸಚಿವರೊಬ್ಬರ ಮೂಲಕ ಸಂದೇಶ ಬರಬಹುದೆಂದು ಇದೇ ಮೂಲ ಗಳು ತಿಳಿಸಿವೆ. ಮುಂಬರುವ ವಿಧಾನಸಭಾ ಚುನಾವಣೆಗೆ ಬೊಮ್ಮಾಯಿ ನಾಯಕತ್ವ ದಲ್ಲೇ ಚುನಾವಣೆ ಎದುರಿಸುವುದು ಎಂಬ ತೀರ್ಮಾನವಾದಲ್ಲಿ, ಅವರ ಮಂತ್ರಿಮAಡ ಲಕ್ಕೆ ಮೇಜರ್ ಸರ್ಜರಿಯಾಗಲಿದೆ. ಒಂದು ವೇಳೆ ನಾಯಕತ್ವ ಬದಲಾವಣೆ ಆಗುವು ದಾದರೆ ಪರ್ಯಾಯ ನಾಯಕನ ಆಯ್ಕೆ ಮಾಡಿಕೊಂಡ ನಂತರ ಬೊಮ್ಮಾಯಿ ಅವರಿಗೆ ಸಂದೇಶ ರವಾನೆಯಾಗಬಹುದು. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ, ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ರೊಟ್ಟಿಗೆ ಸಮಾಲೋಚನೆ ನಡೆಸಿ, ಕರ್ನಾಟಕದ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಕುಂದಿದೆ ಎಂಬ ತೀರ್ಮಾನಕ್ಕೆ ಬಂದಿದೆ. ಸರ್ಕಾರದ
ಕಾರ್ಯವೈಖರಿ, ಪಕ್ಷ ಸಂಘಟನೆಯಲ್ಲೂ ವಿಫಲವಾಗಿದೆ. ಸರ್ಕಾರಕ್ಕೆ ವರ್ಚಸ್ಸು ಇದ್ದರೆ ಪಕ್ಷಕ್ಕೂ ತಾನಾಗಿಯೇ ವರ್ಚಸ್ಸು ವೃದ್ಧಿಸುತ್ತದೆ. ಆದರೆ ಇಲ್ಲಿ ಸರ್ಕಾರಕ್ಕೆ ವರ್ಚಸ್ಸು ಇಲ್ಲ ಎಂಬ ಅಸಮಾಧಾನ ಅಂದಿನ ಸಭೆಯಲ್ಲಿ ವ್ಯಕ್ತಗೊಂಡಿತ್ತು. ಆದರೆ ನಾಯಕತ್ವದ ಬಗ್ಗೆ ಪ್ರಧಾನಿಯವರೇ ತೀರ್ಮಾನ ಕೈಗೊಳ್ಳಲಿ ಎಂದು ಅಂದಿನ ಸಭೆಯು ಚೆಂಡನ್ನು ಅವರ ಅಂಗಳಕ್ಕೆ ಹಾಕಿದೆ. ಇದಾದ ನಂತರ ಗೃಹ ಸಚಿವರೇ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡು ಹಿಂತಿರುಗಿದ್ದಾರೆ. ಆದರೆ ಯಾವುದೇ ರಾಜಕೀಯ ನಿರ್ಧಾರ ಗಳನ್ನು ಪ್ರಕಟಿಸಿಲ್ಲ. ಹೀಗಾಗಿ ಎಲ್ಲರ ದೃಷ್ಟಿ ಈಗ ಪ್ರಧಾನಿಯವರ ಕಡೆಗೆ ನೆಟ್ಟಿದೆ.

ನಾನು ಹೇಳುವುದಷ್ಟನ್ನೇ ನಂಬಿ: ಸಚಿವ ಸಂಪುಟ ವಿಚಾರದಲ್ಲಿ ವಿಷಯಗಳನ್ನು ನೀವೇ ಸೃಷ್ಟಿ ಮಾಡುತ್ತೀರಿ. ಬಳಿಕ ನೀವೇ ಸ್ಪಷ್ಟನೆ ಕೇಳುತ್ತೀರಿ ಎಂದು ಸಿಎಂ ಬಸವ ರಾಜ ಬೊಮ್ಮಾಯಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ವಿಧಾನಸೌಧದಲ್ಲಿ ದಿ. ಕೆ.ಸಿ.ರೆಡ್ಡಿಯವರ ೧೨೦ನೇ ಜನ್ಮದಿನೋತ್ಸವ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಹೈಕಮಾಂಡ್ ಸೂಚನೆ ನೀಡುತ್ತಿದ್ದಂತೆಯೇ ದೆಹಲಿಗೆ ತೆರಳಿ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುತ್ತೇನೆ ಎಂದು ಹೇಳಿದರು.

ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವಿಚಾರದಲ್ಲಿ ಕೆಲವು ಕಟ್ಟು ಕತೆಗಳು ಹರಿದಾಡು ತ್ತಿವೆ. ಈ ವಿಚಾರದಲ್ಲಿ ನಾನು ಹೇಳಿದ ವಿಚಾರಗಳನ್ನು ಮಾತ್ರ ನೀವು ಅಧಿಕೃತ ಎಂದು ಪ್ರಕಟಿಸಬೇಕು. ದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಜೊತೆಯಲ್ಲಿ ಚರ್ಚಿಸಿದ ಬಳಿಕ ಮುಂದಿನ ನಡೆಯನ್ನು ನಿಮಗೆ ನಾನೇ ತಿಳಿಸುತ್ತೇನೆ ಎಂದು ಹೇಳಿದರು.

Translate »