ಮೈಸೂರು,ಮೇ೫(ಎಂಟಿವೈ)-ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಸರ್ಕಾರವೇ ನೇರ ವಾಗಿ ಶಾಮೀಲಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಬಯಲಾಗಲು ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪP್ಷÀದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಹಗರಣವನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಹಗರಣದಲ್ಲಿ ಸರ್ಕಾರವೇ ನೇರವಾಗಿ ಭಾಗಿಯಾಗಿರುವುದು ತಲೆ ತಗ್ಗಿಸಬೇಕಾದ ವಿಚಾರ. ಸಚಿವರು ಹಾಗೂ ಬಿಜೆಪಿ ಮುಖಂಡರು ಕಿಂಗ್‌ಪಿನ್‌ಗಳಿಗೆ ಸಾಥ್ ನೀಡಿ ಅಕ್ರಮ ಎಸಗಿದ್ದಾರೆ ಎಂದರು.
ಸಚಿವರ ಸಂಬAಧಿಗಳೇ ಕಿಂಗ್‌ಪಿನ್‌ಗಳಾಗಿದ್ದಾರೆ. ಈ ಹಿನ್ನೆಲೆ ಯಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಎಲ್ಲಾ ಕಸರತ್ತು ನಡೆಸು ತ್ತಿದ್ದಾರೆ. ಇದರಿಂದಲೇ ಪ್ರಕರಣದ ತನಿಖೆ ನಡೆಸಲು ಸಿಐಡಿಗೆ ನೀಡಲಾಗಿದೆ. ಸಿಐಡಿಯವರು ಸಚಿವರಾದ ಆರಗ e್ಞÁನೇಂದ್ರ, ಡಾ.ಅಶ್ವತ್ಥನಾರಾಯಣ ಅವರನ್ನು ಕರೆದು ವಿಚಾರಣೆ ನಡೆಸು ತ್ತಾರಾ? ಎಡಿಜಿಪಿಯನ್ನು ತನಿಖೆಗೆ ಒಳಪಡಿಸುತ್ತಾರಾ? ಎಂದು ಪ್ರಶ್ನಿಸಿದ ಅವರು, ಬೇಕಂತಲೇ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಈ ಹಗರಣದಲ್ಲಿ ಮಧ್ಯವರ್ತಿಗಳನ್ನು ಮಾತ್ರ ಬಂಧಿಸಲಾಗಿದೆ. ಎಡಿಜಿಪಿ, ಡಿವೈಎಸ್ಪಿಯನ್ನು ವರ್ಗಾ ವಣೆ ಮಾಡಲಾಗಿದೆ. ಅಕ್ರಮ ನಡೆದಿಲ್ಲವೆಂದು ಗೃಹ ಸಚಿವ ಆರಗ e್ಞÁನೇಂದ್ರ ಈ ಹಿಂದೆ ಸದನದಲ್ಲಿ ಹೇಳಿ ದಾರಿ ತಪ್ಪಿಸಿz್ದÁರೆ. ಈಗ ನಡೆದಿರುವುದೇನು? ಕಳ್ಳರು ಯಾವತ್ತೂ ಸತ್ಯ ಒಪ್ಪಿಕೊಳ್ಳುವುದಿಲ್ಲ. ಅಧಿಕಾರದಲ್ಲಿ ರಲು ಬಿಜೆಪಿಯವರು ಲಾಯಕ್ಕಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ನಿಜವಾದ ಆರೋಪಿಗಳನ್ನು ಬಂಧಿಸಿಲ್ಲ. ಮಧ್ಯವರ್ತಿಗಳನ್ನು ಮಾತ್ರ ಬಂಧಿಸಿz್ದÁರೆ. ಸಚಿವ ಡಾ.ಅಶ್ವತ್ಥನಾರಾಯಣ ಕಡೆಯವರು ಇಬ್ಬರು ಇz್ದÁರೆ. ಆಯ್ಕೆಯಾದ ದರ್ಶನ್ ಗೌಡನನ್ನು ಕರೆ ತಂದು ವಿಚಾರಣೆ ಮಾಡದೆ ಬಿಟ್ಟಿz್ದÁರೆ. ನಿಷ್ಪP್ಷÀಪಾತ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ಹಿಂದಿನ ವಾಚ್ ಪ್ರಕರಣವನ್ನು ಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಕಳ್ಳತನದ ವಾಚ್ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರಿಂದ ಪ್ರಕರಣವನ್ನು ಆಗಲೇ ಎಸಿಬಿಗೆ ವಹಿಸಿz್ದೆ. ತನಿಖೆಯಾಗಿ ನನಗೆ ವಾಚ್ ಕೊಟ್ಟ ದುಬೈನ ಡಾ.ವರ್ಮಾ ಎಂಬು ವರು ಪ್ರಮಾಣ ಪತ್ರ ಸಲ್ಲಿಸಿ ರಸೀದಿ ಕೂಡ ನೀಡಿದ್ದು, ಪ್ರಕರಣ ಇತ್ಯರ್ಥವಾಗಿದೆ. ಸರ್ಕಾರಕ್ಕೇ ವಾಚ್ ಒಪ್ಪಿಸಿz್ದÉÃನೆ. ಆದರೀಗ ಸಿದ್ದರಾಮಯ್ಯ ವಾಚ್ ಕಟ್ಟಿಕೊಂಡಿರಲಿಲ್ವೇ ಎಂದು ಈಗ ಪ್ರತಿವಾದ ಮಾಡಿದರೆ ಹೇಗೆ? ಆ ವಾಚ್‌ಗೆ ೩೫-೪೦ ಲP್ಷÀ ರೂ. ಬೆಲೆ ಇರಬಹುದು. ಈಗ ನಡೆದಿರುವುದು ೩೦೦ ಕೋಟಿ ರೂ. ಅವ್ಯವಹಾರ. ಹಾಗೆಂದು ನಾನೇನೂ ಸಮರ್ಥಿಸಿಕೊಳ್ಳುತ್ತಿಲ್ಲ ಎಂದರು.
ಹಿAದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಈಗ ಬಸವರಾಜ ಬೊಮ್ಮಾಯಿ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಲ್ಲ. ಬರೀ ನೇಮಕವಾದ ಮುಖ್ಯ ಮಂತ್ರಿಗಳು. ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿಕೊಂಡರು. ಇದರಿಂದಲೇ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಶಾಸಕರನ್ನು ಖರೀದಿಸಿರುವುದಕ್ಕೆ ಪ್ರತಿಯಾಗಿ ಮಿತಿ ಮೀರಿದ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಈ ಹಿಂದೆ ಶಾಸಕ ಕೆ.ಜೆ. ಜಾರ್ಜ್ ಅವರಿಗೆ ಸಂಬAಧಿಸಿದ ಎರಡೂ ಪ್ರಕರಣ ಸಿಬಿಐಗೆ ಹೋಗಿದ್ದವು. ಎರಡೂ ಪ್ರಕರಣಗಳಲ್ಲಿ ಕ್ಲೀನ್‌ಚಿಟ್ ನೀಡಲಾಗಿದೆ. ಆಗ ಯಾರ ಸರ್ಕಾರವಿತ್ತು? ಸತ್ಯವಿದ್ದರೆ ಕ್ಲೀನ್‌ಚಿಟ್ ನೀಡುತ್ತಿದ್ದರಾ? ಎಂದು ಪ್ರಶ್ನಿಸಿದರು.
ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬAಧಿಸಿದAತೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕೆಲವು ದಾಖಲೆ ಬಿಡುಗಡೆ ಮಾಡಿದ್ದಕ್ಕೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡುವುದಕ್ಕೆ ಅಧಿಕಾರವೇ ಇಲ್ಲ. ಮೂರನೇ ಬಾರಿ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ ಮಾತ್ರಕ್ಕೆ ಅವರು ಠಾಣೆಗೆ ಹೋಗಬೇಕಾ? ಪೊಲೀಸರೇ ಅವರ ಬಳಿ ಹೋಗಿ ದಾಖಲೆಗಳ ಬಗ್ಗೆ ಮಾಹಿತಿ ಪಡೆಯಲಿ. ಅವರೇನು ಅಪರಾಧಿನಾ ಎಂದು ಪ್ರಶ್ನಿಸಿದರು. ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ಅವರ ಪಕ್ಷದ ಮಂತ್ರಿಯೇ ಪತ್ರ ಬರೆದಿದ್ದಾರೆ. ಬಿಜೆಪಿಯ ಓರ್ವ ವಿಧಾನಪರಿಷತ್ ಸದಸ್ಯರೂ ಸದನದಲ್ಲಿ ಪ್ರಶ್ನೆ ಮಾಡಿದ್ದಾರೆ. ಅಕ್ರಮ ನಡೆದಿದೆ ಎಂದು ಹೇಳಿದ್ದ ಅವರದೇ ಸರ್ಕಾರದ ಸಚಿವರಾಗಿದ್ದ ಪ್ರಭು ಚೌಹಾಣ್ ಅವರಿಂದ ಯಾವುದೇ ಮಾಹಿತಿ ಕೇಳಲು ಮುಂದಾಗಿಲ್ಲ ಯಾಕೆ ಎಂದು ಕಿಡಿಕಾರಿದರು. ಸದನದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಸಚಿವರು ಹೇಳಿದ್ದರು. ಅಕ್ರಮ ನಡೆದಿಲ್ಲದಿದ್ದರೆ ಯಾಕೆ ಮರು ಪರೀಕ್ಷೆ ನಡೆಸಲು ಆದೇಶಿಸಿದರು. ಇವರಿಗೆ ಅಧಿಕಾರದಲ್ಲಿ ಮುಂದುವರೆಯಲು ಲಾಯಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ವರಿಷ್ಠರು ಕೇಂದ್ರದಿAದ ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಯಾರೂ ಸಹ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದ ಬಿಜೆಪಿ ನಾಯಕರು ಮಾಡುತ್ತಿರುವ ಭ್ರಷ್ಟಾಚಾರಕ್ಕೆ ಕೇಂದ್ರದ ನಾಯಕರು ಮುದ್ರೆ ಒತ್ತಿ ಹೋಗುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಹಾಗೂ ಜನರ ಭಾವನೆಯನ್ನು ಬೇರೆ ಕಡೆ ಸೆಳೆಯುವುದಕ್ಕಾಗಿ ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.