ಕವಿ ಸಿದ್ದಲಿಂಗಯ್ಯ ಋಣ ತೀರಿಸಲಾಗದು: ಬನ್ನೂರು ರಾಜು
ಮೈಸೂರು

ಕವಿ ಸಿದ್ದಲಿಂಗಯ್ಯ ಋಣ ತೀರಿಸಲಾಗದು: ಬನ್ನೂರು ರಾಜು

June 22, 2021

ಮೈಸೂರು,ಜೂ.21(ಎಸ್‍ಪಿಎನ್)-ನಾಡೋಜ ಸಿದ್ದಲಿಂಗಯ್ಯ ಕನ್ನಡ ಕಾವ್ಯ ಕ್ಷೇತ್ರದ ಅಪರೂಪದ ಕ್ರಾಂತಿಕಾರಿ ಕವಿ ಎಂದೇ ಗುರುತಿಸಿಕೊಂಡು ಶೋಷಿತರ ಹೃದಯದಲ್ಲಿ ಸ್ಥಾನಪಡೆದರು. ಸಮಾಜದ ಅನಿಷ್ಟ ಪದ್ಧತಿ ಹೋಗಲಾಡಿಸಲು ತಮ್ಮ ಬರಹ ಮತ್ತು ಭಾಷಣಗಳ ಮೂಲಕ ಯತ್ನಿಸಿದರು. ಅದು ತೀರಿಸಲಾಗದ ಋಣ ಎಂದು ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

ದಟ್ಟಗಳ್ಳಿಯ ನಾಗಮಾರ್ಷಲ್ ಆಟ್ರ್ಸ್ ಅಕಾಡೆಮಿ ಆವರಣದಲ್ಲಿ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ಮತ್ತು ಪದ್ಮಪಾಣಿ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ಕವಿ ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದ ಅವರು, ಸಿದ್ದಲಿಂಗಯ್ಯ ಅವರು ಕಾವ್ಯವನ್ನೇ ಖಡ್ಗವಾಗಿಸಿ ಶೋಷಿತರ ಪರವಾದ ಕವಿತೆ ಗಳನ್ನು ರಚಿಸಿದರಲ್ಲದೆ ಬಹುಜನರ ಕವಿಯಾಗಿದ್ದರು. ನಾಡಿನ ಸಾರಸ್ವತ ಲೋಕದ ಬಹುದೊಡ್ಡ ಆಸ್ತಿ ಆಗಿದ್ದರು. ಇಂಥ ಕವಿಯನ್ನು ಕನ್ನಡ ಸಾರಸ್ವತ ಲೋಕ ಕಳೆದುಕೊಂಡು ಬಡವಾಗಿದೆ ಎಂದರು. ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಗಾಯಕರು ಸಿದ್ದಲಿಂಗಯ್ಯ ನವರ `ಗುಡಿಸಲಿನಲ್ಲಿ ಅರಳಿದ ಗುಲಾಬಿ ನನ್ನ ಸಾವಿನ ಕವನ’ ಮೊದ ಲಾದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಮಹಾರಾಜ ಕಾಲೇ ಜಿನ ಜಾನಪದ ವಿಭಾಗದ ಸಹ ಪ್ರಾಧ್ಯಾಪಕಿ ಲೇಖಕಿ ವಿಜಯಲಕ್ಷ್ಮಿ ಮನಾಪುರ, ಮಲ್ಕುಂಡಿ ಮಹದೇವಸ್ವಾಮಿ, ಸೋಸಲೆ ಸಿದ್ದರಾಜು, ಶಿವರಾಜು, ಕುಮಾರ್, ಆರ್.ಎ.ರಾಧಾಕೃಷ್ಣ ಮತ್ತಿತರರಿದ್ದರು.

Translate »