ಯೋಗದಿಂದ ಸುಂದರ, ಸ್ವಾಸ್ಥ್ಯ ಬದುಕು ಸಾಧ್ಯ
ಮೈಸೂರು

ಯೋಗದಿಂದ ಸುಂದರ, ಸ್ವಾಸ್ಥ್ಯ ಬದುಕು ಸಾಧ್ಯ

June 22, 2021

ಮೈಸೂರು,ಜೂ.21-ಭಾರತ ಸಾಂಸ್ಕøತಿಕವಾಗಿ ಸಂಪದ್ಭರಿತ ವಾದ ರಾಷ್ಟ್ರ. ಭಾರತೀಯ ಪರಂಪರೆಯು ಬದುಕನ್ನು ತಪಸ್ಸೆಂಬಂತೆ ಸ್ವೀಕರಿಸಿದೆ. ಹುಟ್ಟಿನಿಂದ ಸಾಯು ವವರೆಗೂ ನಾವು ಪಾಲಿಸಬೇಕಾದ ಸಂಸ್ಕಾರಗಳು, ರೀತಿ, ನೀತಿ, ನಿಯಮಗಳನ್ನು ನಮ್ಮ ಹಿರಿಯರು ನಮಗೆ ನೀಡಿದ್ದಾರೆ. ಅವುಗಳಲ್ಲಿ ಯೋಗವೂ ಒಂದು. ಯೋಗದಿಂದ ಸುಂದರ ಮತ್ತು ಸ್ವಾಸ್ಥ್ಯ ಬದುಕನ್ನು ಸಾಗಿಸಲು ಸಾಧ್ಯ ಎಂದು ಜೆಎಸ್‍ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಹೇಳಿದರು.

ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಏಳನೇ ಅಂತಾ ರಾಷ್ಟ್ರೀಯ ಯೋಗ ದಿನದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಯೋಗವು ದೇಹ ಮತ್ತು ಮನಸ್ಸು ಎರಡನ್ನೂ ಸ್ವಾಸ್ಥ್ಯವಾಗಿಡಲು ಸಹಾಯ ಮಾಡುತ್ತದೆ. ಕೇವಲ ದೈಹಿಕ ಆರೋಗ್ಯ ದಿಂದ ಮಾತ್ರವೇ ವ್ಯಕ್ತಿ ಸುಂದರವಾದ ಬದುಕನ್ನು ಸಾಗಿಸಲು ಸಾಧ್ಯವಿಲ್ಲ, ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ಮನಗಂಡೇ ಪ್ರಪಂಚ ಯೋಗದತ್ತ ಗಮನ ಹರಿಸಿತು. ಪ್ರತಿಯೊಬ್ಬರೂ ಯೋಗ ವನ್ನು ಕಲಿಯಬೇಕು, ಅನುಸರಣೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ಆಚರಿಸಲು ವಿಶ್ವದ ನಾಯಕರು ಮುಂದಾಗಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕೋವಿಡ್ ಕಳೆದ ಒಂದೂವರೆ ವರ್ಷದಿಂದ ಮಾನವನ ಅಷ್ಟೇ ಅಲ್ಲದೇ ಇಡೀ ಪ್ರಕೃತಿಯ, ವ್ಯಾಪಾರದ ಮೇಲೆ ಇನ್ನಿಲ್ಲದಂತಹ ಪರಿಣಾಮ ವನ್ನು ಬೀರಿದೆ. ಇಂದಿಗೂ ಮಾನವನು ಮನೆಯಿಂದ ಹೊರಬರ ಲಾರದ, ಎಲ್ಲರೊಡನೆ ಬೆರೆಯಲಾರದ ಸ್ಥಿತಿಯಲ್ಲಿಯೇ ಇದ್ದಾನೆ.

2015ರಿಂದ ಪ್ರತಿವರ್ಷ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಒಂದೆಡೆ ಸೇರಿ ಯೋಗದಿನವನ್ನು ಆಚರಿಸುತ್ತಿದ್ದೆವು. ಆದರೆ ಕೋವಿಡ್ ಕಾರಣದಿಂದ ಈ ವರ್ಷದ ಯೋಗದಿನವನ್ನು ‘ಯೋಗದೊಂ ದಿಗೆ ಮನೆಯಲ್ಲಿಯೇ ಇರಿಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಯೋಗವು ಒಂದು ದಿನಕ್ಕೆ ಸೀಮಿತಗೊಳ್ಳದೆ ಪ್ರತಿದಿನ ಆಚರಿಸೋಣ, ಯೋಗಯುಕ್ತ ಸಮಾಜ ರೋಗಮುಕ್ತ ಸಮಾಜವಾಗುವುದರತ್ತ ಯಾವುದೇ ಅನುಮಾನವಿಲ್ಲ. ಆದಷ್ಟು ಬೇಗ ಸಮಾಜ ಕೋವಿಡ್‍ನಿಂದ ಹೊರಬರಲಿ ಎಂದು ಹೇಳಿದರು.

ಬೆಂಗಳೂರಿನ ಶ್ರೀಮತಿ ಕೆ.ಶಿಲ್ಪಶ್ರೀ ಆನ್‍ಲೈನ್ ಮೂಲಕ ಯೋಗವನ್ನು ನಡೆಸಿಕೊಟ್ಟರು. ಅಧ್ಯಾಪಕರು, ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಪಾಲ್ಗೊಂಡರು. ಶ್ರೀಮತಿ ಎಂ.ಗೀತಾ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಡಾ. ಹೆಚ್.ಸಿ.ಹೊನ್ನಪ್ಪ ಸ್ವಾಗತಿಸಿದರು. ಡಾ.ಎನ್.ಮಹೇಶ್ವರಿ ವಂದಿಸಿ ದರು. ಡಾ.ಎಲ್.ಸುಹಾಸ್ ಕಾರ್ಯಕ್ರಮ ನಿರೂಪಿಸಿದರು.

Translate »