ನಿರಹಂಕಾರ ಗುಣದ ಕವಿಗಳ ಅಗತ್ಯವಿದೆ
ಮೈಸೂರು

ನಿರಹಂಕಾರ ಗುಣದ ಕವಿಗಳ ಅಗತ್ಯವಿದೆ

February 15, 2021

ಮೈಸೂರು, ಫೆ.14(ಎಂಟಿವೈ)- `ಕಾವ್ಯ ಬರೆದ ಕವಿಯಲ್ಲಿ ಅಹಂಕಾರ ತುಂಬಿದರೆ, ಕಾವ್ಯವೇ ಹುಟ್ಟುಹಾಕುವ ಕವಿಯಲ್ಲಿ ನಿರ ಹಂಕಾರ ಇರಲಿದೆ. ಪ್ರಸ್ತುತ ಸಂದರ್ಭ ನಿರಹಂಕಾರ ಗುಣದ ಕವಿಗಳ ಅವಶ್ಯಕತೆ ಹೆಚ್ಚಿದೆ ಎಂದು ಕರ್ನಾಟಕ ಸಾಹಿತ್ಯ ಅಕಾ ಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಕಸಾಪ ಜಿಲ್ಲಾ ಘಟಕ, ಕನ್ನಡ ಸಾಹಿತ್ಯ ಕಲಾಕೂಟ ದಿಂದ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಕವಿ ಪಿ.ಎಸ್.ಸಿದ್ದಾಚಾರ್ ಅವರ `ಶ್ರೀಮನ್ಮಹಾರಾಜ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕವಿ ಸಿದ್ದಾಚಾರ್ ಚರಿತ್ರೆ ವಸ್ತು ಒಳ ಗೊಂಡು ವಾರ್ಧಕ ಅಷ್ಟಪದಿಯಲ್ಲಿ ಕೃತಿ ರಚಿಸಿದ್ದಾರೆ. ಅದರಲ್ಲಿ ಸಂಘರ್ಷ, ಸಾಮ ರಸ್ಯ, ಸಮೃದ್ಧಿ ಅಡಕವಾಗಿದೆ. ಜನಪದ ಶೈಲಿ ಕೃತಿ ಸುಲಭವಾಗಿ ಅರ್ಥವಾಗುವಂತಿದೆ. ಶ್ರೀಮನ್ಮಹಾರಾಜ ಕಾವ್ಯವು ಪ್ರಭುತ್ವ-ವ್ಯವಸ್ಥೆ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಈ ಎರಡರ ನಡುವೆ ಪ್ರಭುತ್ವ, ವ್ಯವಸ್ಥೆ ಸಾಗು ತ್ತದೆ ಎಂದು ಸಾರುತ್ತದೆ. ಇಂಥ ಕೃತಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲರಿಗೂ ಅರ್ಥ ವಾಗುತ್ತದೆ ಎಂದು ವ್ಯಾಖ್ಯಾನಿಸಿದರು.

ಒಳ್ಳೆಯ ಶಿಕ್ಷಣ ಪಡೆದರಷ್ಟೆ ಕವಿ ಹುಟ್ಟು ತ್ತಾನೆ ಎಂಬ ಕಲ್ಪನೆ ಸರಿಯಲ್ಲ. ಸುತ್ತ್ತಲಿನ ಪರಿಸರದಿಂದಲೂ ಉತ್ತಮ ಕವಿ ಹಾಗೂ ಕಾವ್ಯ ಹುಟ್ಟುತ್ತದೆ ಎನ್ನುವುದಕ್ಕೆ ಸಿದ್ದಾಚಾರ್ ಉದಾಹರಣೆ ಎಂದರು. ಕವಿ ಜಯಪ್ಪ ಹೊನ್ನಾಳಿ, ಅಂಕಣಕಾರ ವಿ.ರಂಗನಾಥ್, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಗೌರವಾಧ್ಯಕ್ಷ ಎಸ್.ರಾಮಪ್ರಸಾದ್, ಕವಿ ಪಿ.ಎಸ್.ಸಿದ್ದಾಚಾರ್, ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಚಂದ್ರ ಶೇಖರ್ ಮತ್ತಿತರರಿದ್ದರು.

 

Translate »