ಪೊಲೀಸರ ಕಿರುಕುಳ ಆರೋಪ:  ಸಾರ್ವಜನಿಕರಿಂದ ಪ್ರತಿಭಟನೆ
ಮೈಸೂರು

ಪೊಲೀಸರ ಕಿರುಕುಳ ಆರೋಪ: ಸಾರ್ವಜನಿಕರಿಂದ ಪ್ರತಿಭಟನೆ

March 24, 2021

ಮೈಸೂರು, ಮಾ.23(ಆರ್‍ಕೆ)-ಬೋಗಾದಿ ಬಳಿ ಪೊಲೀಸರಿಂದ ವಾಹನ ತಪಾಸಣೆ ವೇಳೆ ಅಮಾ ಯಕ ಬಲಿಯಾಗಿದ್ದಾನೆ. ಈ ಬೈಕ್ ಸವಾರನ ಸಾವಿಗೆ ಪೊಲೀಸರ ಅವೈಜ್ಞಾನಿಕ ವಾಹನ ತಪಾಸಣೆ ವಿಧಾನವೇ ಕಾರಣ. ಸಂಬಂಧಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂತ್ರಸ್ತನ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಇನ್ನು ಮುಂದೆ ಈ ರೀತಿಯ ಅವೈಜ್ಞಾನಿಕ ತಪಾಸಣೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ಬೆಳಗ್ಗೆ ಹಿನಕಲ್ ಬಳಿ ರಿಂಗ್ ರೋಡ್ ಜಂಕ್ಷನ್‍ನಲ್ಲಿ ಪ್ರತಿ ಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೊರೇಟರ್ ಕೆ.ವಿ. ಶ್ರೀಧರ್, ಮಾಜಿ ಉಪ ಮೇಯರ್ ಶೈಲೇಂದ್ರ, ಮಾಜಿ ಕಾರ್ಪೊರೇಟರ್ ಮಲ್ಲೇಶ್ ನೇತೃತ್ವದಲ್ಲಿ ಫ್ಲೈ ಓವರ್ ಕೆಳಗೆ ಪ್ರತಿಭಟನಾ ಧರಣಿ ನಡೆಸಿದ ನೂರಾರು ಮಂದಿ, ಪೊಲೀಸರ ವರ್ತನೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮೈಸೂರಿನ ಬೋಗಾದಿಯ ಆರ್‍ಎಂಪಿ ಕ್ವಾರ್ಟರ್ಸ್ ಸರ್ಕಲ್ ಬಳಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದೇವರಾಜು ದುರ್ಮರಣಕ್ಕೀಡಾಗಿ ಹಿಂಬದಿ ಸವಾರ ಸುರೇಶ್ ಗಾಯಗೊಂಡಿರುವುದಕ್ಕೆ ಸಂಚಾರ ಪೊಲೀ ಸರ ದಿಕ್ಕು ದೆಸೆ ಇಲ್ಲದ ತಪಾಸಣಾ ಕಾರ್ಯಾ ಚರಣೆಯೇ ಕಾರಣವಾಗಿದ್ದು, ಅನಧಿಕೃತ ಹಾಗೂ ಅವೈಜ್ಞಾನಿಕವಾಗಿ ವಾಹನ ತಪಾಸಣೆ ಮಾಡಿದ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿ ಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಾಹನ ತಪಾಸಣೆ ವೇಳೆ ಎಲ್ಲೋ ಮರೆಯಲ್ಲಿ ನಿಂತು ಹತ್ತಿರ ಬಂದಾಗ ಹಠಾತ್ತನೆ ಬಂದು ಬೈಕ್ ಅಡ್ಡಗಟ್ಟಿದ್ದರಿಂದ ಹೆದರಿದ ಬೈಕ್ ಸವಾರರು, ಪೊಲೀ ಸರಿಂದ ತಪ್ಪಿಸಿಕೊಳ್ಳಲು ಹೋಗಿ, ಆಯತಪ್ಪಿ ಬಿದ್ದಾಗ, ಹಿಂದಿನಿಂದ ಬಂದ ಟಿಪ್ಪರ್ ಹರಿದು ದೇವರಾಜು ಸಾವನ್ನಪ್ಪಿರುವುದು ಜಗಜ್ಜಾಹೀರಾಗಿರುವಾಗ ಬೈಕ್ ಹಿಂಬದಿ ಸವಾರ ಸುರೇಶ್‍ನಿಂದ ಪೊಲೀಸರು ತಡೆದಿಲ್ಲ ಎಂದು ಬಲವಂತವಾಗಿ ಹೇಳಿಕೆ ಕೊಡಿಸುವ ಮೂಲಕ ಘಟನೆಯ ಸಾಕ್ಷ್ಯ ನಾಶ ಮಾಡಲೆತ್ನಿಸಿದ್ದಾರೆ. ಈ ಆರೋಪದಿಂದ ಬಚಾವಾಗುವ ಹುನ್ನಾರ ನಡೆಸಿ ದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪೊಲೀಸರ ಅವೈಜ್ಞಾನಿಕ ರೀತಿಯ ವಾಹನ ತಪಾ ಸಣಾ ಕಾರ್ಯಾಚರಣೆಗೆ ಅಮಾಯಕ ವ್ಯಕ್ತಿ ಬಲಿ ಯಾಗಿರುವುದರಿಂದ ನೈತಿಕ ಹೊಣೆ ಹೊತ್ತು ಮೈಸೂರು ನಗರ ಪೊಲೀಸ್ ಆಯುಕ್ತ ಹಾಗೂ ರಾಜ್ಯ ಗೃಹ ಸಚಿ ವರು ರಾಜೀನಾಮೆ ನೀಡಬೇಕು. ಘಟನೆಗೆ ಕಾರಣ ರಾದ ಸಂಚಾರ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಸೇವೆಯಿಂದ ಅಮಾನತು ಗೊಳಿಸಬೇಕು ಎಂದು ಆಗ್ರಹಿಸಿದರು.

ದುರ್ಮರಣಕ್ಕೀಡಾದ ದೇವರಾಜು ಕುಟುಂಬದವ ರಿಗೆ ಪರಿಹಾರ ಕಲ್ಪಿಸಬೇಕು. ಮರೆಯಲ್ಲಿ ನಿಂತು, ವಾಹನ ಸವಾರರ ಗಾಬರಿಗೊಳಿಸುವ ತಪಾಸಣೆ ನಿಲ್ಲಿಸಿ, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ವೈಜ್ಞಾನಿಕ ವಾಗಿ ನೋಟೀಸ್ ನೀಡಿ, ಅವರ ಮನೆಗಳಿಗೆ ತೆರಳಿ ದಂಡ ವಸೂಲಿ ಮಾಡಲಿ. ರಸ್ತೆ, ಜಂಕ್ಷನ್‍ಗಳಲ್ಲಿ ವಾಹನ ಗಳನ್ನು ತಡೆದು ಹಣ ವಸೂಲಿ ಮಾಡುವ ಕ್ರಮವನ್ನು ಕೈಬಿಡಬೇಕು. ಸಾರ್ವಜನಿಕರಿಗೆ ತಪಾಸಣೆ ಹೆಸರಲ್ಲಿ ಕಿರುಕುಳ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಪೊಲೀಸರು, ಗೃಹ ಸಚಿವರು ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ವಸೂಲಿ ದಂಧೆ ಕೈಬಿಡದಿದ್ದರೆ ಪೊಲೀಸರ ವಿರುದ್ಧ ಉಗ್ರ ರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುಮಾರು ಅರ್ಧ ಗಂಟೆ ಹಿನಕಲ್ ರಿಂಗ್ ರಸ್ತೆ ಜಂಕ್ಷನ್‍ನಲ್ಲಿ ಫ್ಲೈ ಓವರ್ ಕೆಳಗೆ ಮಾನವ ಸರಪಳಿ ಏರ್ಪಡಿಸಿ ಪ್ರತಿಭಟನೆ ಮಾಡಿದ ಕಾರಣ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಹೆಬ್ಬಾಳು, ಮೈಸೂರು, ಬೋಗಾದಿ, ಹೂಟಗಳ್ಳಿ ಕಡೆಯಿಂದ ಬರುತ್ತಿದ್ದ ವಾಹನಗಳ ಸಂಚಾರ ಪ್ರತಿಭಟನೆ ಯಿಂದಾಗಿ ಅಸ್ತವ್ಯಸ್ತವಾಯಿತು. ಸ್ಥಳದಲ್ಲಿದ್ದ ಪೊಲೀ ಸರು ಕೆಲ ಸಮಯ ಮೌನಕ್ಕೆ ಶರಣಾದರು.

ಈ ಸಂದರ್ಭ ಸ್ಥಳದಲ್ಲಿ ಕೆಲಸಮಯ ಬಿಗುವಿನ ವಾತಾವರಣ ಉಂಟಾಗಿತ್ತು. ನಾಲ್ಕೂ ರಸ್ತೆಗಳಲ್ಲಿ ವಾಹನಗಳು ಜಾಮ್ ಆಗಿದ್ದರಿಂದ ಕಡೆಗೂ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆಯನ್ನು ಕೈಬಿಡುವಂತೆ ಮಾಡಿದರು. ನಂತರ ವಾಹನ ಸಂಚಾರ ಸುಗಮವಾಯಿತು.
ಪ್ರತಿಭಟನೆಯಲ್ಲಿ ಕೃಷ್ಣ, ಮಂಜು, ಯಶವಂತ, ಪುನೀತ್, ಅರುಣ್, ಮಂಜುಗೌಡ ಸೇರಿದಂತೆ ಹಿನಕಲ್, ಬೋಗಾದಿ, ಕುಂಬಾರಕೊಪ್ಪಲು ಸೇರಿ ದಂತೆ ಸುತ್ತಮುತ್ತಲಿನ ಬಡಾವಣೆಗಳ ಹಲವರು ಭಾಗವಹಿಸಿದ್ದರು. ಸ್ಥಳದಲ್ಲಿ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಹೆಚ್.ಎನ್.ಬಾಲಕೃಷ್ಣ ನೇತೃತ್ವದಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿತ್ತು.

Translate »