ಪಾಲಿಕೆ ನಿಷ್ಕ್ರಿಯತೆ: ನಿವಾಸಿಗಳಿಂದಲೇ  ಕೆ.ಸಿ.ಬಡಾವಣೆ ಬವಣೆ ನಿವಾರಣೆ
ಮೈಸೂರು

ಪಾಲಿಕೆ ನಿಷ್ಕ್ರಿಯತೆ: ನಿವಾಸಿಗಳಿಂದಲೇ ಕೆ.ಸಿ.ಬಡಾವಣೆ ಬವಣೆ ನಿವಾರಣೆ

December 5, 2021

ಮೈಸೂರು, ಡಿ.4(ಎಂಕೆ)- ಮೈಸೂರು ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳಿಗಾಗಿ ಕಾದೂ ಹೈರಾಣಾದ ಕೆ.ಸಿ.ಬಡಾವಣೆ(ಕೆಂಪು ಚೆಲುವಾಜಮ್ಮಣ್ಣಿ ನಗರ) ನಿವಾಸಿಗಳು ತಾವೇ ತಮ್ಮ ಬಡಾವಣೆ ಸ್ವಚ್ಛತೆಗೆ ಮುಂದಾಗಿದ್ದಾರೆ.

ಕೆ.ಸಿ.ಬಡಾವಣೆ ನಿರ್ಮಾಣಗೊಂಡು 20 ವರ್ಷಗಳಾದರೂ ಇಂದಿಗೂ ಸರಿಯಾದ ಸ್ವಚ್ಛತಾ ನಿರ್ವಹಣೆ ಇಲ್ಲದೆ ನಿವಾಸಿಗಳು ಪರ ದಾಡುವಂತಾಗಿದೆ. ಅಲ್ಲದೆ ಮಳೆ ನೀರು ಹರಿ ಯುವ ಚರಂಡಿಗಳು ಹಲವೆಡೆ ಮುಚ್ಚಿಹೋಗಿ ರುವುದು ಮತ್ತಷ್ಟು ಕಂಗೆಡಿಸಿದೆ. ಹತ್ತಾರು ಮನವಿಗಳಿಗೂ ಸ್ಪಂದಿಸದ ಪಾಲಿಕೆ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿಯನ್ನು ಮನಗಂಡ ಕೆ.ಸಿ.ಬಡಾವಣೆ ನಿವಾಸಿ ಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನಿವಾಸಿಗಳೇ ಸೇರಿ 20ಕ್ಕೂ ಹೆಚ್ಚು ಮಂದಿ ತಮ್ಮ ಬಡಾವಣೆ ಯನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದಾರೆ.

ಚಾಮುಂಡಿಬೆಟ್ಟದ ತಪ್ಪಲು ಪ್ರದೇಶದಲ್ಲಿ ರುವ ಹಾಗೂ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಕೆ.ಸಿ.ಬಡಾವಣೆಯಲ್ಲಿ ಅಶುಚಿತ್ವ ತಾಂಡವವಾಡಲು ನಗರ ಪಾಲಿಕೆ ನೇರ ಹೊಣೆಯಾಗಿದೆ. 2 ದಿನಕ್ಕೊಮ್ಮೆ ಕಸ ವಿಲೇವಾರಿಗೆ ಮಾತ್ರ ಬರುವ ಪಾಲಿಕೆ ಸ್ವಚ್ಛತಾ ಸಿಬ್ಬಂದಿ, ಬಡಾವಣೆಯ ರಸ್ತೆ ಬದಿಯಲ್ಲಿ ಆಳೆತ್ತರ ಬೆಳೆದು ನಿಂತಿರುವ ಗಿಡ-ಗಂಟಿಗಳನ್ನು ಹಾಗೂ ಕಸದ ರಾಶಿ ಯನ್ನು ಮಾತ್ರ ಇಲ್ಲಿಯವರೆಗೆ ತೆರವುಗೊಳಿ ಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ನಿವಾಸಿಗಳು ‘ಮೈಸೂರು ಮಿತ್ರ’ನಲ್ಲಿ ದೂರಿದ್ದಾರೆ.

ಚರಂಡಿಗಳು ಮುಚ್ಚಿವೆ: ಕೆ.ಸಿ.ನಗರದೆಲ್ಲೆಡೆ ಇರುವ ಬಹುತೇಕ ಮಳೆ ನೀರು ಚರಂಡಿ ಗಳು ಕಸ, ಮಣ್ಣಿನಿಂದ ಮುಚ್ಚಿಹೊಗಿವೆ. ಮಳೆ ನೀರು ಸರಾಗವಾಗಿ ಹರಿಯಲು ಸ್ಥಳ ವಿಲ್ಲದೆ ರಸ್ತೆ ಮೇಲೆ ಹರಿದು, ಮನೆಗಳ ಒಳಗೂ ನುಗ್ಗುತ್ತಿದೆ. ಈ ಬಾರಿ ಸುರಿದ ಭಾರೀ ಮಳೆಗೆ ಸಾಕಷ್ಟು ತೊಂದರೆಗಳನ್ನು ಎದುರಿಸುವಂತಾ ಯಿತು. ಪಾಲಿಕೆಯವರಿಗೆ ಹತ್ತಾರು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ನಮ್ಮ ಮನವಿಗೂ ಸ್ಪಂದಿಸದೆ ಅಸಡ್ಡೆ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.

ಹೆಸರಿಗಷ್ಟೇ ಸದಸ್ಯೆ: ಕೆ.ಸಿ.ಬಡಾವಣೆ ವಾರ್ಡ್ ನಂ.52ರ ವ್ಯಾಪ್ತಿಗೆ ಬರಲಿದ್ದು, ಈ ವಾರ್ಡ್‍ನ ಪಾಲಿಕೆ ಸದಸ್ಯೆ ಛಾಯಾ ದೇವಿಯವರು ಹೆಸರಿಗಷ್ಟೇ ಪಾಲಿಕೆ ಸದಸ್ಯರಾಗಿ ದ್ದಾರೆಯೇ ಹೊರತು ನಿವಾಸಿಗಳ ಒಂದೇ ಒಂದು ಸಮಸ್ಯೆಗೂ ಸ್ಪಂದಿಸಿಲ್ಲ. ಯಾವಾಗ ಲಾದರೂ ಬಡಾವಣೆ ಕಡೆಗೆ ಬಂದು, ಬಂದದ್ದು ಬೇರೆಯವರಿಗೆ ತಿಳಿಯದಂತೆ ಹೋರಟು ಹೋಗುತ್ತಾರೆ. ಯಾರಾದರೂ ಅವರನ್ನು ಕಂಡು ಸಮಸ್ಯೆ ಹೇಳಿಕೊಂಡರೆ ಬರೀ ಭರವಸೆ ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.

2 ದಿನಗಳ ಸ್ವಚ್ಛತಾ ಕಾರ್ಯ: ತಮ್ಮ ಬಡಾವಣೆಯ ಸ್ವಚ್ಛತೆಗೆ ತಾವೇ ಮುಂದಾ ಗಿರುವ ಕೆ.ಸಿ.ಬಡಾವಣೆ ನಿವಾಸಿಗಳು ಮೊದಲ ಹಂತವಾಗಿ 2 ದಿನಗಳ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಮೊದಲ ದಿನವಾದ ಇಂದು(ಶನಿವಾರ) ಬಡಾವಣೆ ಜಯ ಚಾಮರಾಜೇಂದ್ರ ಮುಖ್ಯ ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಗಿಡ-ಗಂಟಿಗಳು ಹಾಗೂ ಕಸದ ರಾಶಿಗಳನ್ನು ತೆÀರವುಗೊಳಿಸಿದ್ದಾರೆ.

Translate »