ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಡಿ ಜನರ ಅಭಿವೃದ್ಧಿಗೆ ಅಂಕಿತವಾಗಲಿ
ಮೈಸೂರು

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಡಿ ಜನರ ಅಭಿವೃದ್ಧಿಗೆ ಅಂಕಿತವಾಗಲಿ

December 5, 2021

ಮೈಸೂರು,ಡಿ.4(ಎಸ್‍ಬಿಡಿ)- ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಾಡಿ ಜನರ ಅಭಿವೃದ್ಧಿ ಬಗ್ಗೆ ಅವಲೋಕಿಸ ಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಸಹ ಯೋಗದಲ್ಲಿ ಗಿರಿಜನ ಉಪಯೋಜನೆಯಡಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋ ತ್ಸವದ ಅಂಗವಾಗಿ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಶನಿ ವಾರ ಆಯೋಜಿಸಿದ್ದ `ಬುಡಕಟ್ಟು ಉತ್ಸವ’ ಕಾರ್ಯಕ್ರಮವನ್ನು ಬೆಟ್ಟಕುರುಬರ ಪಾರಂ ಪರಿಕ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದರು.
ಬುಡಕಟ್ಟು ಗಿರಿಜನರ ಸಂಸ್ಕøತಿಯ ಉತ್ಸವದ ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ತಳುಕು ಹಾಕಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ವೇಳೆ ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಗಳಾದರೂ ಗಿರಿಜನ ಅಭಿವೃದ್ಧಿ ಪಥದಲ್ಲಿ ಇದ್ದಾರೆಯೇ?. ಇವರ ಕಲೆ, ಸಂಸ್ಕøತಿ ಉಳಿಸುವ ಪ್ರಯತ್ನ ನಡೆದಿದೆಯಾದರೂ ಕಲಾವಿದರು ಬೆಳೆಯುತ್ತಿದ್ದಾರಾ? ಎನ್ನುವ ಪ್ರಶ್ನೆ ಕಾಡುತ್ತದೆ. ಈ ಬಗ್ಗೆ ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಕೊರೊನಾ ಪರಿಣಾಮ ಯಾವುದೇ ಕಾರ್ಯಕ್ರಮ ಸಂಘಟಿಸುವುದು ಕಷ್ಟಸಾಧ್ಯವಾಗಿರುವಾಗ ಸರಳವಾಗಿ `ಬುಡಕಟ್ಟು ಉತ್ಸವ’ ಆಯೋ ಜಿಸುವ ಮೂಲಕ ಕಲಾವಿದರಿಗೆ ನೆರವಾಗಿ ರುವುದು ಶ್ಲಾಘನಾರ್ಹ ಎಂದರು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಪಂಚಭೂತಗಳಲ್ಲಿ ವಂಚನೆ ಇಲ್ಲ, ಆದರೆ ಮನುಷ್ಯರಲ್ಲಿ ಇಂದಿಗೂ ಅಸ್ಪøಶ್ಯತೆ ಉಳಿದಿದೆ. ದ್ರೋಣಾಚಾರ್ಯರು ಬೇಡರ ಕುಲದ ಏಕಲವ್ಯನ ಬೆರಳನ್ನು ಕಾಣಿಕೆ ಯಾಗಿ ಪಡೆದರು. ಸಾರ್ವಜನಿಕವಾಗಿ ದ್ರೌಪದಿಗೆ ಅಪಮಾನ ಮಾಡಿದರು. ಆ ಮಹಾಭಾರತ ಇಂದಿನ ಭಾರತದಲ್ಲಿದೆ. ಅಸಮಾನತೆ, ದೌರ್ಜನ್ಯ, ಸತ್ಯ ಹೇಳುವವರ ಬಾಯಿ ಮುಚ್ಚಿಸುವ ಕೆಲಸವಾಗುತ್ತಿದೆ. ಅಕ್ಷರ ಕಲಿತವರೇ ದೇಶಕ್ಕೆ ಶತ್ರುವಾಗಿದ್ದಾರೆ. ನಮ್ಮಂತೆ ಮನುಷ್ಯರಾಗಿದ್ದ ಮಾದೇಶ್ವರ, ಮಂಟೆಸ್ವಾಮಿ ಅಗಾಧವಾದ ಸೇವೆ ಮಾಡಿದರು. ಬುಡಕಟ್ಟು, ಗಿರಿಜನರ ಉದ್ಧಾರಕ್ಕೆ ದುಡಿದರು. ಹಾಗಾಗಿ ಜನ ಅವರನ್ನು ದೇವರೆಂದೇ ಪೂಜಿಸುತ್ತಾರೆ. ಆದರೆ ಈಗಿನ ವ್ಯವಸ್ಥೆ ಆತಂಕ ಹುಟ್ಟಿಸುತ್ತದೆ. ಅನಕ್ಷರಸ್ಥರು, ಬುಡಕಟ್ಟು, ಗಿರಿಜನರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ ಎಂದು ಅಭಿಪ್ರಾಯಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಬುಡಕಟ್ಟು ಜನ ನಿಜವಾದ ಕಾಡಿನ ರಕ್ಷಕರು, ಯಾವ ಪ್ರಯತ್ನಕ್ಕೂ ಮಣಿಯದೆ ನಗರೀಕರಣದಿಂದ ದೂರ ಉಳಿದಿರುವ ಅವರು ತಮ್ಮ ಶ್ರೀಮಂತ ಸಂಸ್ಕøತಿ ಉಳಿಸಿಕೊಂಡಿದ್ದಾರೆ. ಸಂಸ್ಕøತಿ ಉಳಿಸು ವುದರ ಜೊತೆಗೆ ಅವರ ಅಭಿವೃದ್ಧಿಗೂ ಪರಿ ಶ್ರಮಿಸೋಣ ಎಂದು ಆಶಯ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಮಾತನಾಡಿ, ಈವರೆಗೆ ಯಾವುದಾದರೂ ಹಾಡಿಯಲ್ಲಿ ನಡೆಸಲಾಗುತ್ತಿದ್ದ ಈ ಕಾರ್ಯಕ್ರಮವನ್ನು ಕೊರೊನಾ ಹಿನ್ನೆಲೆ ಯಲ್ಲಿ ಮೈಸೂರಿನಲ್ಲಿ ಏರ್ಪಡಿಸಲಾಗಿದ್ದು, 8 ಕಲಾ ತಂಡಗಳು ಭಾಗವಹಿಸಿವೆ. ಇನ್ನು ನಾಲ್ಕೈದು ದಿನಗಳಲ್ಲಿ ಜಾನಪದೋತ್ಸವ ವನ್ನೂ ನಡೆಸುವ ಯೋಜನೆ ಇದೆ. ಕಾರ್ಯ ಕ್ರಮ ನಡೆಸಲಾಗದ ಪರಿಸ್ಥಿತಿ ನಿರ್ಮಾಣ ವಾಗಿ, ಕಲಾವಿದರಿಗೆ ಸಂಭಾವನೆ ಕೈತಪ್ಪ ಬಾರದು ಎಂಬ ಉದ್ದೇಶದಿಂದ ಕಾರ್ಯ ಕ್ರಮ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಪ್ರಭಾ ಮಾತನಾಡಿ, ಬುಡಕಟ್ಟು ಜನರಿಗೆ ಸಂಬಂಧಿಸಿದ ಇಂತಹ ಕಾರ್ಯಕ್ರಮ ವನ್ನು ನಗರ ಪ್ರದೇಶದಲ್ಲೇ ಆಯೋಜಿಸುವು ದರಿಂದ ಕಾಡಿನ ನಡುವೆ ಅಡಗಿರುವ ಕಲಾ ಪ್ರತಿಭೆಯನ್ನು ಮುಖ್ಯವಾಹಿನಿಗೆ ತಂದಂ ತಾಗುತ್ತದೆ. ಮುಂದಿನ ದಿನಗಳಲ್ಲಿ ಮೈಸೂರು ದಸರಾ ಮಹೋತ್ಸವದಲ್ಲಿ ಬುಡಕಟ್ಟು ಕಲಾವಿದರಿಗೂ ಅವಕಾಶ ಕಲ್ಪಿಸಿಕೊಡ ಬೇಕೆಂದು ಮನವಿ ಮಾಡಿದರು.

Translate »