ಅಪೋಲೊದಲ್ಲಿ `ಪೋಸ್ಟ್ ಕೋವಿಡ್ ರಿಕವರಿ ಕ್ಲಿನಿಕ್’
ಮೈಸೂರು

ಅಪೋಲೊದಲ್ಲಿ `ಪೋಸ್ಟ್ ಕೋವಿಡ್ ರಿಕವರಿ ಕ್ಲಿನಿಕ್’

October 23, 2020

ಮೈಸೂರು, ಅ.22(ಪಿಎಂ)- ಕೊರೊನಾ ಸೋಂಕಿನಿಂದ ಮುಕ್ತ ರಾದ (ಗುಣಮುಖರಾದ) ಬಳಿಕವೂ ಎದುರಾಗಬಹುದಾದ ಇತರೆ ಅನಾರೋಗ್ಯ ಸಮಸ್ಯೆಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ `ಪೋಸ್ಟ್ ಕೋವಿಡ್ ರಿಕವರಿ ಕ್ಲಿನಿಕ್’ ಗುರುವಾರ ಕಾರ್ಯಾರಂಭ ಮಾಡಿದೆ.

ಈ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಆಸ್ಪತ್ರೆಯ ಡಾ. ಸಂಜೀವ್ ರಾವ್ ಗಿರಿಮಾಜಿ, ಕೊರೊನಾದಿಂದ ಮುಕ್ತರಾದ ಬಳಿಕವೂ ಶೇ.50ರಷ್ಟು ಮಂದಿಯಲ್ಲಿ ವಿವಿಧ ರೀತಿಯ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಎದೆನೋವು, ಹೃದಯ ಸಂಬಂಧಿ ಸಮಸ್ಯೆ, ಶ್ವಾಸಕೋಶ ಸಮಸ್ಯೆ, ಸುಸ್ತು, ಉಸಿರಾಟದ ತೊಂದರೆ, ಕೀಲು ನೋವು, ದೃಷ್ಟಿದೋಷ, ಮರೆವು, ಉರಿಯೂತ, ರಕ್ತ ಹೆಪ್ಪುಗಟ್ಟುವುದು, ನಿದ್ರೆ ಸಮಸ್ಯೆ, ಬಾಯಿ ರುಚಿಸದೆ ಇರುವುದು ಮೊದಲಾದ ಅನಾರೋಗ್ಯ ಕಾಡುತ್ತಿದೆ. ಅಂಥವರಿಗೆ ಚಿಕಿತ್ಸೆ ನೀಡಲು `ಕೋವಿಡ್ ರಿಕವರಿ ಕ್ಲಿನಿಕ್’ ಆರಂಭಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್ ನಂತರದ ಅಗತ್ಯ ಚಿಕಿತ್ಸೆಗಾಗಿ ವೈದ್ಯರಿಗೆ ತರಬೇತಿ ನೀಡಿz್ದÉೀವೆ. ಕೋವಿಡ್ ನಂತರ ಪೂರ್ಣ ಚೇತರಿಸಿಕೊಳ್ಳಲು ಈ ಕ್ಲಿನಿಕ್ ಸಹಕಾರಿಯಾಗಲಿದೆ. ಈ ಕ್ಲಿನಿಕ್‍ನಲ್ಲಿ ತಜ್ಞರು, ಮನೋವೈದ್ಯರು, ಪೌಷ್ಟಿಕಾಂಶ ಆಹಾರ ತಜ್ಞರು ಸೇವೆ ಒದಗಿಸಲಿz್ದÁರೆ ಎಂದರು.

ಅಪೋಲೊದ ಶ್ವಾಸಕೋಶ ತಜ್ಞ ಡಾ.ಕೆ.ಮಧು ಮಾತನಾಡಿ, ಕೊರೊನಾ ಸೋಂಕು ಶ್ವಾಸಕೋಶ ಮಾತ್ರವಲ್ಲ ದೇಹದ ಇತರೆ ಅಂಗಗಳ ಮೇಲೂ ದುಷ್ಪಾರಿಣಾಮ ಉಂಟು ಮಾಡುತ್ತದೆ. ಕೊರೊನಾದಿಂದ ಮುಕ್ತರಾದರೂ ದೀರ್ಘಕಾಲ ಸಮಸ್ಯೆಗಳನ್ನು ಎದುರಿಸುವವರಿಗೆ ನಿರಂತರ ಮೇಲ್ವಿಚಾರಣೆ ಮತ್ತು ಸಮ ಯೋಚಿತ ಚಿಕಿತ್ಸೆ ಅಗತ್ಯ. ಕೋವಿಡ್ ರಿಕವರಿ ಕ್ಲಿನಿಕ್ ಈ ಎಲ್ಲಾ ಸೌಲಭ್ಯ ಹೊಂದಿದೆ ಎಂದು ಹೇಳಿದರು.

ಅಪೋಲೊ ಆಸ್ಪತ್ರೆ ಉಪಾಧ್ಯಕ್ಷ ಎನ್.ಜಿ.ಭರತೀಶ್ ರೆಡ್ಡಿ ಮಾತನಾಡಿ, ಈ ವಿಶೇಷ ಕ್ಲಿನಿಕ್ ಅನ್ನು ಮೈಸೂರು ಮಾತ್ರ ವಲ್ಲದೆ, ಬೆಂಗಳೂರು, ಚೆನ್ನೈ, ಮಧುರೈ, ಹೈದರಾಬಾದ್, ಕೊಲ್ಕತಾ, ಭುವನೇಶ್ವರ, ಗುವಾಹಟಿ, ದೆಹಲಿ, ಇಂದೋರ್, ಲಕ್ನೋ, ಮುಂಬೈ, ಅಹಮದಾಬಾದ್‍ನ ಅಪೋಲೊ ಆಸ್ಪತ್ರೆ ಗಳಲ್ಲಿಯೂ ಆರಂಭಿಸಲಾಗಿದೆ ಎಂದು ತಿಳಿಸಿದರು.

 

 

 

 

Translate »