ಹುಣಸೂರು, ಮೇ 25(ಕೆಕೆ)-ಕೊರೊನಾ ನೆಪ ಹೇಳಿ ಕೊಂಡು ಗ್ರಾಪಂಗಳ ಚುನಾವಣೆ ಮುಂದೂಡಿ, ಪಕ್ಷದ ಕಾರ್ಯಕರ್ತ ರನ್ನು ನಾಮನಿರ್ದೇಶನ ಮಾಡುವ ಹುನ್ನಾರ ಕೈಬಿಟ್ಟು ಚುನಾವಣೆ ನಡೆಸು ವಂತೆ ಶಾಸಕ ಹೆಚ್.ಪಿ.ಮಂಜುನಾಥ್ ಒತ್ತಾಯಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಸರ್ಕಾರಕ್ಕೆ ನಾಮನಿರ್ದೇಶನ ಮಾಡುವ ಅಧಿಕಾರವಿಲ್ಲ. ಬಿಜೆಪಿ ಪಕ್ಷದ ಕಾರ್ಯ ಕರ್ತರನ್ನು ಗ್ರಾಪಂಗಳಿಗೆ ನೇಮಿಸುವುದಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷಾತೀತವಾಗಿ ವಿರೋಧ ವಿದ್ದು, ಸದ್ಯ ಕೊರೊನಾ ನಡುವೆಯೇ ಚುನಾವಣೆ ನಡೆಸ ಬೇಕು. ಇಲ್ಲವೇ ಹಾಲಿ ಆಡಳಿತ ಮಂಡಳಿಯನ್ನು ಆರು ತಿಂಗಳ ಕಾಲ ಮುಂದುವರೆಸುವ ಮೂಲಕ ಪ್ರಜಾಪ್ರಭುತ್ವ ಸಂವಿಧಾನ ಉಳಿಸಬೇಕೆಂದು ಆಗ್ರಹಿಸಿದರು.
ಗ್ರಾಪಂಗೆ ನಾಮ ನಿರ್ದೇಶನ ಮೂಲಕ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ಈ ನಿಟ್ಟಿನಲ್ಲಿ ಸರ್ಕಾರ ಸುಗ್ರೀವಾಜ್ಞೆ ತರುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಸಲಹೆ ನೀಡಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾರಕ: ರೈತರ ಪರವಾಗಿ ರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ದೊಡ್ಡ ಹೊಡಿಕೆದಾರರ ಪರವಾಗಿ ನಿಂತಿದೆ. ಇದರಿಂದ ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ದೊಡ್ಡ ಹೊಡೆತ ಬೀಳಲಿದೆ. ಈ ಕಾಯ್ದೆ ಜಾರಿಗೊಂಡಿದ್ದೇ ಆದಲ್ಲಿ ದಂಧೆಕೋರರು ಕೃಷಿ ಉತ್ಪನ್ನಗಳನ್ನು ಅಕ್ರಮ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಬರೆ ಎಳೆಯುವ ಸಂಭವ ವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ಈಗ ಲಾದರೂ ತಿದ್ದುಪಡಿ ವಿಚಾರವನ್ನುಸದನದಲ್ಲಿ ತಂದು ಇದರ ಸಾಧಕ-ಬಾಧಕ ಚರ್ಚಿಸಿದ ನಂತರ ಜಾರಿಗೆ ತರುವುದು ಒಳ್ಳೆಯದು ಎಂದು ಒತ್ತಾಯಿಸಿದರು.