ಮೈಸೂರು, ಆ.18- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಿರ್ವಹಣಾ ಕಾಮಗಾರಿಯನ್ನು ಆಗಸ್ಟ್ 20ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ನೆಲ್ಲಿತಾಳಪುರ, ಕುರಿಹುಂಡಿ, ಹರದನಹಳ್ಳಿ ಮತ್ತು ದುಗ್ಗಳ್ಳಿ ಗ್ರಾಮಗಳು ಮತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಾಗೆಯೇ ಅಂದೇ ಇದೇ ವೇಳೆ ಹೆಮ್ಮರಗಾಲ, ಕುಂಬ್ರಳ್ಳಿ, ಮಾಡ್ರಳ್ಳಿ, ಶ್ರೀನಗರ, ಸಿಂಗಾರಿಪುರ, ಗೊಣತಗಾಲ, ಹೆಡತಲೆ, ಭುಜಂಗಯ್ಯನಹುಂಡಿ, ಮಲ್ಲಹಳ್ಳಿ, ಹಂಪಾಪುರ, ಹಳೇಪುರ ವ್ಯಾಪ್ತಿಯ ಗ್ರಾಮಗಳು ಮತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಇದರ ಜೊತೆಗೆ ಆ.20ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಮೆಲ್ಲಹಳ್ಳಿ, ಹಾರೋಹಳ್ಳಿ, ಹಳೆಕೆರಿಹುಂಡಿ, ಶಿವಪುರ, ಹಲಗಯ್ಯನಹುಂಡಿ, ಪಿಲ್ಲಹಳ್ಳಿ, ವರಕೂಡು, ಬಡಗಲಹುಂಡಿ, ಮೂಡಲಹುಂಡಿ, ಕೆಂಪೇಗೌಡನಹುಂಡಿ, ವರುಣಾ, ದಂಡಿಕೆರೆ, ವಾಜಮಂಗಲ, ಮೊಸಂಬಾಯನಹಳ್ಳಿ, ಯಾಂದಳ್ಳಿ, ಸಜ್ಜೆಹುಂಡಿ, ಜಂತಗಳ್ಳಿ, ಮಹದೇ ಶ್ವರ ಬಡಾವಣೆ, ಇಂಡಸ್ ಬಡಾವಣೆ, ಭೂಗತಗಳ್ಳಿ ಗೇಟ್, ಚಿಕ್ಕಹಳ್ಳಿ, ಚೋರನಹಳ್ಳಿ, ಭೂಗತಗಳ್ಳಿ, ನಾಡನಹಳ್ಳಿ, ಪೋಲೀಸ್ ಬಡಾವಣೆ, ನೇತಾಜಿನಗರ, ಐಪಿಎಸ್ ನಗರ, ಲಾಲ್ ಬಹದ್ದೂರು ಶಾಸ್ತ್ರಿ ನಗರ, ಎಸ್.ಎಂ.ಪಿ. ಡೆವಲಪರ್ಸ್, ಶೋಭ ಡೆವಲಪರ್ಸ್, ಯಶಸ್ವಿನಿ ಹಿಲ್ ವ್ಯೂ, ವರಕೂಡು, ಬಡಗಲಹುಂಡಿ, ಮೂಡಲಹುಂಡಿ, ಕೆಂಪೇಗೌಡನ ಹುಂಡಿ, ಜಂತಗಳ್ಳಿ, ಚಿಕ್ಕಹಳ್ಳಿ, ಚೋರನಹಳ್ಳಿ, ಯಾಂದಳ್ಳಿ, ಜೆಎಸ್‍ಎಸ್ ಬಡಾವಣೆ, ವಸಂತನಗರ, ಸುಕದಾಯಿ ಬಡಾವಣೆ, ಶಾಂತವೇರಿ ಗೋಪಾಲಗೌಡನಗರ, ಸಪ್ತಮಾತೃಕ ಬಡಾವಣೆ, ಸಹೃದಯ ನಗರ, ಪ್ರಕೃತಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಪ್ರಕಟಣೆ ತಿಳಿಸಿದೆ.