ನಾಳೆ ಕೆಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ಕೆಲವೆಡೆ ವಿದ್ಯುತ್ ವ್ಯತ್ಯಯ

June 5, 2022

ಮೈಸೂರು, ಜೂ.೪- ಮೈಸೂರಿನ ವಿವಿ ಮೊಹಲ್ಲಾ ವ್ಯಾಪ್ತಿಯ ಕಲಾ ಮಂದಿರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಿಮಿತ್ತ ಜೂ.೬ರಂದು ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಸರಸ್ವತಿಪುರಂ ೧ರಿಂದ ೫ನೇ ಮೇನ್, ನ್ಯೂ ಕಾಂತರಾಜ ಅರಸ್ ರಸ್ತೆ, ಕೆ.ಜಿ.ಕೊಪ್ಪಲು ಮುಖ್ಯ ರಸ್ತೆ, ಯೂನಿವರ್ಸಿಟಿ ಕ್ವಾರ್ಟರ್ಸ್, ಮುಸ್ಲಿಂ ಹಾಸ್ಟೆಲ್, ವಿಶ್ವ ಮಾನವ ಜೋಡಿ ರಸ್ತೆ ಮುರುಗನ್ ಮೆಡಿಕಲ್ಸ್ನಿಂದ ಕುಕ್ಕರಳ್ಳಿ ಕೆರೆ ರಸ್ತೆಯವರೆÀಗೆ, ಸರಸ್ವತಿಪುರಂ ೫ರಿಂದ ೧೦ನೇ ಮೇನ್, ಪಡುವಾರಳ್ಳಿ ಡಿಸಿ ರೆಸಿಡೆನ್ಸಿ, ರೀಜನಲ್ ಕಮಿಷನರ್ ಆಫೀಸ್, ಸಿಎಫ್‌ಟಿಆರ್‌ಐ ಕ್ಯಾಂಪಸ್, ವಾಲ್ಮೀಕಿ ರಸ್ತೆ, ಜಡ್ಜ್ ಕ್ವಾರ್ಟರ್ಸ್, ಒಂಟಿ ಕೊಪ್ಪಲು, ಹುಣಸೂರು ಮುಖ್ಯರಸ್ತೆ, ವಾಗ್ದೇವಿನಗರ, ಜೆಸಿ ಕಾಲೇಜು ಸುತ್ತಮುತ್ತ, ಚಾಮರಾಜ ಮೊಹಲ್ಲಾ, ಜಿಲ್ಲಾ ಪಂಚಾಯಿತಿ ಕಚೇರಿ, ಕೋರ್ಟ್, ಅರಸು ರಸ್ತೆ, ಡಿಸಿ ಕಚೇರಿ, ಮಹಾರಾಜ ಮತ್ತು ಯುವರಾಜ ಕಾಲೇಜು ಸುತ್ತಮುತ್ತ, ದಿವಾನ್ಸ್ ರಸ್ತೆ, ಧನ್ವಂತರಿ ರಸ್ತೆ, ಜೆ.ಕೆ.ಗ್ರೌಂಡ್ ಸುತ್ತಮುತ್ತ, ಮೆಟ್ರೋಪೋಲ್ ಸುತ್ತಮುತ್ತ, ಜೆಎಲ್‌ಬಿ ರಸ್ತೆ ಹಾಗೂ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Translate »