1981ರಲ್ಲಿ ಹಿರಿಯ ನಿರ್ದೇಶಕ ಗೀತ ಪ್ರಿಯಾ ಅವರ ಸಾರಥ್ಯದಲ್ಲಿ ಪ್ರಚಂಡ ಪುಟಾಣಿಗಳು ಎಂಬ ಮಕ್ಕಳ ಸಾಹಸದ ಚಿತ್ರ ತೆರೆಕಂಡಿತ್ತು. ಸುಂದರಕೃಷ್ಣ ಅರಸ್, ಟೈಗರ್ ಪ್ರಭಾಕರ್, ಸದಾಶಿವ ಬ್ರಹ್ಮಾವರ ಅವರೊಂದಿಗೆ ಮಾಸ್ಟರ್ ರಾಮಕೃಷ್ಣ. ಮಾಸ್ಟರ್ ಭಾನುಪ್ರಕಾಶ್ ಮತ್ತಿತರರು ನಟಿಸಿದ್ದ ಚಿತ್ರ ಭರ್ಜರಿ ಯಶಸ್ಸನ್ನು ಸಹ ಕಂಡಿತ್ತು. ಈಗ ಅದೇ ಟೈಟಿಲ್‍ನಲ್ಲಿ ಪ್ರಚಂಡ ಪುಟಾಣಿಗಳು ಚಿತ್ರ ತಿಂಗಳಾಂತ್ಯದಲ್ಲಿ ಸೆಟ್ಟೇರಲಿದೆ. ಬನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ನಲವತ್ತು ಮಕ್ಕಳು ತಮ್ಮ ಟೀಚರ್ ಒಡಗೂಡಿ ಸವದತ್ತಿ, ಗೋಕಾಕ್‍ಗೆ ಪ್ರವಾಸಕ್ಕೆಂದು ಹೊರಡುತ್ತಾರೆ. ಅಲ್ಲಿ ಆಕಸ್ಮಿಕವಾಗಿ ನಿಧಿಕಳ್ಳರ ಗುಂಪಿನಲ್ಲಿ ಸಿಕ್ಕಿಹಾಕಿಕೊಳ್ಳು ತ್ತಾರೆ. ನಿಧಿಗಾಗಿ ಬಲಿ ಕೊಡಲೆತ್ನಿಸುವ ನಿಧಿಗಳ್ಳರ ಗುಂಪಿನಿಂದ ಮಕ್ಕಳು ಹೇಗೆ ಪಾರಾಗಿ ಬರುತ್ತಾರೆಂಬ ಕುತೂಹಲಕಾರಿ ಕಥೆ ಈ ಚಿತ್ರದಲ್ಲಿದೆ.
ಚಿತ್ರದಲ್ಲಿ ಅವಿನಾಶ್ ಪ್ರಧಾನ ಪಾತ್ರ ದಲ್ಲಿ ನಟಿಸುತ್ತಿದ್ದು ಮಾಸ್ಟರ್ ಭರಮೇಶ್, ಮಾಸ್ಟರ್ ಮನೀಶ್, ಬೇಬಿ ನೇಹ, ಬ್ಯಾಂಕ್ ಜನಾರ್ದನ್, ಃಲರಾಂ ಪಾಂಚಾಲ್. ಕಾವ್ಯಪ್ರಕಾಶ್ ಮೊದಲಾದ ವರು ಉಳಿದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶ್ರೀಮತಿ ವಿ.ಸುನಿತ ಹಾಗು ಎನ್.ರಘು ಸಹಕಾರದಲ್ಲಿ ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ವಾಗುತ್ತಿರುವ ಈ ಚಿತ್ರಕ್ಕೆ ರಾಜೀವ್ ಕೃಷ್ಣ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಆರ್. ಪ್ರಮೋದ್ ಛಾಯಾಗ್ರಹಣ, ಸುರೇಶ್ ಕಂಬಳಿ ಸಾಹಿತ್ಯ, ವಿನುಮನಸು ಸಂಗೀತ, ವಿನಯ್ ಆಲೂರು ಸಂಕಲನ, ಶಂಕರ್ ಸಾಹಸ, ಅನಂತು ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದ್ದು, ಕೋಲಾರ, ಚಿಕ್ಕ ಬಳ್ಳಾಪುರ, ಹರಿಹರ ಮತ್ತು ಸವದತ್ತಿಯಲ್ಲಿ ಸುಮಾರು 25 ದಿನಗಳ ಕಾಲ ಚಿತ್ರಕ್ಕೆ ಚಿತ್ರೀಕರಣ ನಡೆಯಲಿದೆ.