ಸಿನಿಮಾ, ಧಾರಾವಾಹಿ ಚಿತ್ರೀಕರಣ ಸ್ಥಗಿತ
ಕನ್ನಡ ಚಲನ ಚಿತ್ರೋದ್ಯಮಕ್ಕೆ ಕೊರೋನಾ ವೈರಸ್ ಕಾಟದಿಂದ ಸಧ್ಯ ಮುಕ್ತಿ ದೊರೆಯುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಕರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗು ತ್ತಲಿರುವ ಹಿನ್ನೆಲೆಯಲ್ಲಿ ಭಯಭೀತರಾದ ಜನ ತಮ್ಮ ಮನೆಗಳನ್ನು ಬಿಟ್ಟು ಹೊರಗೆ ಬರೋದಕ್ಕೇ ಹೆದರುತ್ತಿದ್ದಾರೆ. ಕಳೆದ ಶುಕ್ರವಾರವಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಾದ್ಯಂತ ಚಿತ್ರಮಂದಿರ ಹಾಗೂ ಮಾಲ್‍ಗಳನ್ನು ಮುಂದಿನ ಒಂದು ವಾರದವರೆಗೆ ಮುಚ್ಚ ಬೇಕು ಎಂದು ಆದೇಶ ಹೊರಡಿಸಿದ್ದರು. ಇನ್ನೇನು ಆ ಗಡುವು ಮುಗಿಯುತ್ತಾ ಬಂದಿತ್ತು. ವಾರದ ನಂತರ ಥಿಯೇಟರ್, ಮಲ್ಟಿಪ್ಲೆಕ್ಸ್ ಓಪನ್ ಮಾಡಬಹುದು ಎಂಬ ಆಸೆ ಇಟ್ಟುಕೊಂಡಿದ್ದ ನಿರ್ಮಾಪಕರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಹೌದು, ಬುಧವಾರ ಮತ್ತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಿಎಂ ಯಡಿಯೂರಪ್ಪ ಅವರು ಬಂದ್ ಅವಧಿಯನ್ನು ಮಾರ್ಚ್ 31ರವರೆಗೆ ಮುಂದುವರೆಸಬೇಕೆಂದು ಆದೇಶ ಹೊರಡಿಸಿದ್ದಾರೆ. ಹಾಗಾಗಿ ರಾಜ್ಯದ ಎಲ್ಲಾ ಮಾಲ್, ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳನ್ನು ಈ ತಿಂಗಳಾಂತ್ಯ ದವರೆಗೆ ಮುಚ್ಚಲೇಬೇಕಾಗಿದೆ. ಅಲ್ಲೀ ವರೆಗೆ ಎಲ್ಲರೂ ಕಾಯಲೇಬೇಕಾಗಿದೆ. ಬರೀ ಥಿಯೇಟರ್ ಮಾತ್ರವಲ್ಲ ಧಾರಾವಾಹಿ, ಸಿನಿಮಾ ಚಿತ್ರೀಕರಣದಂಥ ಚಟುವಟಿಕೆ ಗಳು ಸಹ ಬಂದಾಗಿರುವುದು ದೊಡ್ಡ ಸಂಕಷ್ಟಕ್ಕೀಡು ಮಾಡಿದೆ. ಈಗಾಗಲೇ ಹೈರಾಣಾಗಿರುವ ಚಿತ್ರೋದ್ಯಮ ಇದರಿಂದ ಮತ್ತಷ್ಟು ಚಿಂತೆಗೀಡಾಗಿದೆ. ಅದರಲ್ಲೂ ದಿನಗೂಲಿ ಕಾರ್ಮಿಕರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಇನ್ನು ವಾರದ ಹಿಂದೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿದ ನಿರ್ಮಾಪಕರ ಪರಿಸ್ಥಿತಿ ಸಹ ಕಷ್ಟಕರವಾ ಗಿದೆ. ಮೊದಲೇ ನಷ್ಟದಲ್ಲಿರುವ ಚಿತ್ರೋದ್ಯಮ ಈಗ ಹಲವಾರು ಕೋಟಿಗಳ ಅಧಿಕ ನಷ್ಟ ಎದುರಿಸಬೇಕಾಗಿದೆ. ಆದರೂ ನಿರ್ಮಾ ಪಕರು ರಾಜ್ಯದ ಪರಿಸ್ಥಿತಿ ಬಿಗಡಾಯಿಸಿ ರುವುದರಿಂದ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದನ್ನು ಅರಿತು ಅವರ ಆದೇಶವನ್ನು ಪಾಲಿಸುತ್ತೇವೆ ಎಂದು ಹೇಳಿದ್ದಾರೆ. ಸಾರ್ವಜನಿಕರ ಆರೋಗ್ಯ ನಮಗಾಗುವ ನಷ್ಟಕ್ಕಿಂತ ದೊಡ್ಡದು, ಅವರ ಸುರಕ್ಷತೆ ನಮ್ಮ ಜವಾಬ್ದಾರಿ ಎಂದೇ ಹೇಳಿದ್ದಾರೆ.
ಸಿನಿಮಾ