ಟ್ರಾಕ್ಟರ್ ಹರಿದು ಮಹಿಳೆ ಸಾವು
ಚಾಮರಾಜನಗರ

ಟ್ರಾಕ್ಟರ್ ಹರಿದು ಮಹಿಳೆ ಸಾವು

March 20, 2020

ಹನೂರು, ಮಾ.19- ಮಹಿಳೆ ತಲೆ ಮೇಲೆ ಟ್ರಾಕ್ಟರ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಯ್ಯನಹಟ್ಟಿ ಗ್ರಾಮದ ನಿವಾಸಿ ವರದಮ್ಮ(70) ಸಾವನ್ನಪ್ಪಿದವರು.

ವಿವರ: ಬುಧವಾರ ಸಂಜೆ ತಮ್ಮ ಸಂಬಂಧಿಕರ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದ ವರದಮ್ಮ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ಟ್ರಾಕ್ಟರ್ ಚಕ್ರ ವರದಮ್ಮನ ತಲೆ ಮೇಲೆ ಹರಿದ ಪಪರಿಣಾಮ ಆಕೆ ಸೃಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ರಾಮಾಪುರ ಇನ್ಸ್‍ಪೆಕ್ಟರ್ ಮನೋಜ್‍ಕುಮಾರ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »