ಹೊಸೂರಲ್ಲಿ ಪ್ರಜಾಪಾರ್ಟಿ ಸದಸ್ಯತ್ವ ಅಭಿಯಾನ
ಮೈಸೂರು

ಹೊಸೂರಲ್ಲಿ ಪ್ರಜಾಪಾರ್ಟಿ ಸದಸ್ಯತ್ವ ಅಭಿಯಾನ

January 12, 2021

ಮೈಸೂರು,ಜ.11(ವೈಡಿಎಸ್)-ಕರ್ನಾಟಕ ಪ್ರಜಾ ಪಾರ್ಟಿಯನ್ನು ಸ್ಥಳೀಯ ಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಹುಣಸೂರು ತಾಲೂಕು ನಲ್ಲೂರು ಪಾಲ ಹೊಸೂರಿನಲ್ಲಿ ಸದಸ್ಯತ್ವ ಅಭಿಯಾನ ನಡೆಯಿತು. ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಣ್ಣ ನೇತೃತ್ವದಲ್ಲಿ ವರಲಕ್ಷ್ಮಿ ಅವರನ್ನು ಹುಣಸೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಲಾಯಿತು. ಈ ವೇಳೆ ಮುಖಂಡರಾದ ನಾಗರಾಜು, ಅರುಣ್ ಕುಮಾರ, ಪ್ರಶಾಂತ್ ಸೇರಿದಂತೆ ನೂರಾರು ಮಂದಿ ಸದಸ್ಯತ್ವ ಪಡೆದು ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಬಿ.ಶಿವಣ್ಣ ಅವರು, ಹುಣಸೂರು ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಸಾಗುವಳಿ ಅರ್ಜಿಗಳ ಇತ್ಯರ್ಥ, ಸರ್ವೆ ನಂಬರಿನ ದುರಸ್ತಿ ಕಾರ್ಯಗಳ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲಾಗುವುದು. ಜತೆಗೆ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದರು. ಉಪಾ ಧ್ಯಕ್ಷ ಕೆ.ಜೆ.ಯೋಗೇಶ್, ಜಂಟಿ ಕಾರ್ಯದರ್ಶಿ ಬಿ.ಆರ್. ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದ್ಬೂರು ಚಂದ್ರಶೇಖರ್, ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜ್, ಕಾರ್ಯದರ್ಶಿ ರವಿ, ಹೆಚ್.ಡಿ. ಕೋಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಸಿ.ಸೋಮೇಶ್, ಸಹ ಕಾರ್ಯದರ್ಶಿ ಎಸ್.ಲೋಕೇಶ್, ಮಹಿಳಾ ಘಟಕ ಅಧ್ಯಕ್ಷೆ ತಾರಾ, ಕಾರ್ಯದರ್ಶಿ ನೂರುಲ್ಲಾ, ಕೆ.ಆರ್. ನಗರ ತಾಲೂಕು ಅಧ್ಯಕ್ಷೆ ಗೀತಾ ಉಪಸ್ಥಿತರಿದ್ದರು.

 

 

 

 

Translate »