ಸೆ.23ರಂದು ಉಪ್ಪಾರ ನೌಕರರ ಸಂಘದಿಂದ ಸಚಿವ ಪುಟ್ಟರಂಗಶೆಟ್ಟರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಮೈಸೂರು

ಸೆ.23ರಂದು ಉಪ್ಪಾರ ನೌಕರರ ಸಂಘದಿಂದ ಸಚಿವ ಪುಟ್ಟರಂಗಶೆಟ್ಟರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

September 20, 2018

ಮೈಸೂರು: ಮೈಸೂರು ಜಿಲ್ಲಾ ಉಪ್ಪಾರ ನೌಕರರು ಹಾಗೂ ವೃತ್ತಿಪರರ ಸಂಘದ ಆಶ್ರಯದಲ್ಲಿ ಸೆ.23ರಂದು ಬೆಳಿಗ್ಗೆ 10.30 ಗಂಟೆಗೆ ಸಚಿವ ಸಿ.ಪುಟ್ಟರಂಗಶೆಟ್ಟರಿಗೆ ಸನ್ಮಾನ, ಸಾಧಕರು, ನಿವೃತ್ತ ನೌಕರರಿಗೆ ಸನ್ಮಾನ, ಎಸ್‍ಎಸ್‍ಎಲ್‍ಸಿ, ಪಿಯುಸಿಯ 250 ಪ್ರತಿಭಾವಂತರಿಗೆ ಗೌರವ ಸರ್ಮರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಘದ ಸಲಹೆಗಾರ ಕೆ.ಸೋಮಶೇಖರ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲೆಯ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಳವಳ್ಳಿ ತಾಲೂಕಿನ ಅಯ್ಯನಸರಗೂರು ಮಠದ ಚಿನ್ನಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಡಾ.ಕೆ.ಅಜಯ್‍ಕುಮಾರ್ ಅಧ್ಯಕ್ಷತೆ ವಹಿಸುವರು. ಭಗೀರಥರ ಭಾವಚಿತ್ರವನ್ನು ಡಿ.ವೈ.ಉಪ್ಪಾರ ಪ್ರತಿಷ್ಠಾನದ ಅಧ್ಯಕ್ಷ ಶರಣ್ ಡಿ.ಬಂಡಿ ಅನಾವರಣಗೊಳಿಸುವರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಹನುಮಂತಶೆಟ್ಟಿ, ಕಾರ್ಯಾಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಜಿಪಂ ಸದಸ್ಯೆ ಲತಾ ಸಿದ್ದಶೆಟ್ಟಿ ಇನ್ನಿತರರು ಭಾಗವಹಿಸುವರು ಎಂದರು. ಸುದ್ದಿಗೋಷ್ಟಿಯಲ್ಲಿ ಡಾ.ಕೆ.ಅಜಯ್‍ಕುಮಾರ್, ಉಪಾಧ್ಯಕ್ಷ ಮಾದಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲಿಂಗಣ್ಣ ಇನ್ನಿತರರು ಉಪಸ್ಥಿತರಿದ್ದರು.

Translate »