ಪ್ರವೀಣ್ ಹತ್ಯೆ ಪ್ರಕರಣ: ಇಬ್ಬರ ಬಂಧನ, 21 ಶಂಕಿತರ ವಿಚಾರಣೆ
News

ಪ್ರವೀಣ್ ಹತ್ಯೆ ಪ್ರಕರಣ: ಇಬ್ಬರ ಬಂಧನ, 21 ಶಂಕಿತರ ವಿಚಾರಣೆ

July 29, 2022

ಮಂಗಳೂರು, ಜು.28-ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, 21 ಮಂದಿ ಶಂಕಿತರನ್ನು ವಿಚಾರಣೆಗೊಳಪಡಿಸಿದ್ದಾರೆ.

ಸವನೂರು ಗ್ರಾಮದ ಜಾಕೀರ್(29) ಮತ್ತು ಬೆಳ್ಳಾರೆ ಗ್ರಾಮದ ಮಹಮ್ಮದ್ ಷಫೀಕ್(27) ಬಂಧಿತರಾಗಿದ್ದು, ಇವರಿ ಬ್ಬರನ್ನು ಇಂದು ಸಂಜೆ ಪುತ್ತೂರು ಎಸಿಜೆಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಬಂಧಿತರಿಗೆ ಯಾವುದಾದರೂ ಸಂಘ ಟನೆಗಳ ಸಂಪರ್ಕವಿದೆಯೇ ಎಂಬುದೂ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮ ಗಳಿಗೆ ತಿಳಿಸಿದ ಕಾನೂನು-ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ಈವರೆಗೆ 21 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅವರಲ್ಲಿ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘ ಟನೆಗಳಿಗೆ ಸೇರಿದವರೂ ಇದ್ದಾರೆ. ಈ ಹತ್ಯೆ ತುಂಬಾ ಭೀಕರವಾಗಿದ್ದು, ಸೂಕ್ಷ್ಮ ವಿಚಾರವೂ ಆಗಿದೆ. ಪ್ರಕರಣದಲ್ಲಿ ಭಾಗಿ ಯಾದ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದ ಅವರು, ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಉಡುಪಿ ಪೊಲೀಸರ ನೆರವಿನೊಂದಿಗೆ 6 ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡ ಗಳಲ್ಲಿ ಹಾಸನ ಎಸ್‍ಪಿ ಹರಿರಾಂ ಶಂಕರ್ ಮತ್ತು ಡಿಸಿಪಿ ಅನುಚೇತನ್ ಅವರನ್ನೂ ಕೂಡ ಸೇರಿಸಲಾಗಿದೆ ಎಂದು ತಿಳಿಸಿದರು.

ಪ್ರವೀಣ್ ಹತ್ಯೆಗೀಡಾದ ಪ್ರದೇಶದ ಸುತ್ತಮುತ್ತಲ ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲಿಸಿ ಅದರ ಆಧಾರದ ಮೇರೆಗೆ ಪೊಲೀಸರು ಜಾಕೀರ್ ಮತ್ತು ಮಹಮ್ಮದ್ ಷಫೀಕ್ ಎಂಬುವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಹತ್ಯೆಗೀಡಾದ ಪ್ರವೀಣ್ ಕೋಳಿ ಅಂಗಡಿ ಬಳಿ ಸುಮಾರು 40 ನಿಮಿಷ ಕಾಲ ಬೈಕ್‍ನಲ್ಲಿ ಇಬ್ಬರು ಕುಳಿತಿ ರುವುದು ಸಿಸಿ ಕ್ಯಾಮರಾದಲ್ಲಿ ದಾಖ ಲಾಗಿದೆ. ಪ್ರವೀಣ್ ಹತ್ಯೆ ನಂತರ ಇವರಿ ಬ್ಬರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವ್ಯಕ್ತಿಗಳು ಪ್ರವೀಣ್‍ನ ಚಲನ-ವಲನದ ಮೇಲೆ ನಿಗಾ ವಹಿಸಿ ಹಂತಕರಿಗೆ ಮಾಹಿತಿ ನೀಡಿರಬಹುದು ಎಂದು ಶಂಕಿಸಲಾಗಿದೆ. ಬೈಕ್‍ನಲ್ಲಿ ಕುಳಿತು ಹೊಂಚು ಹಾಕುತ್ತಿ ದ್ದವರು ಇದೀಗ ಬಂಧಿಸಲ್ಪಟ್ಟಿರುವವರೇ? ಎಂಬುದರ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ. ಆದರೆ ಇವರಿಬ್ಬರೂ ಪ್ರವೀಣ್ ಹತ್ಯೆಗೆ ಸಹಕರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Translate »