ವಸತಿ ರಹಿತ ಪೌರಕಾರ್ಮಿಕರ ಪಟ್ಟಿ ತಯಾರಿಸಿ
ಮೈಸೂರು

ವಸತಿ ರಹಿತ ಪೌರಕಾರ್ಮಿಕರ ಪಟ್ಟಿ ತಯಾರಿಸಿ

September 25, 2021

ಮೈಸೂರು, ಸೆ. ೨೪(ಆರ್‌ಕೆ)- ಮನೆ ಇಲ್ಲದ ಪೌರಕಾರ್ಮಿಕರನ್ನು ಗುರ್ತಿಸಿ ಪಟ್ಟಿಯೊಂದಿಗೆ ವರದಿ ಸಿದ್ದಪಡಿಸುವಂತೆ ರಾಜ್ಯ ಸಫಾಯಿ ಕರ್ಮಚಾರಿ ಆಯೋ ಗದ ಅಧ್ಯಕ್ಷ ಎಂ.ಶಿವಣ್ಣ ಅವರು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ದೇವರಾಜ ಅರಸು ಕಾಲೋನಿ ನಿವಾಸಿಗಳು ಮತ್ತು ಪೌರಕಾರ್ಮಿಕ ಮುಖಂಡರೊAದಿಗೆ ಸಭೆ ನಡೆಸಿ ಕುಂದು-ಕೊರತೆ ಆಲಿಸಿದ ಅವರು, ಮಂಡಕಳ್ಳಿ ಬಳಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿAದ ನಿರ್ಮಿಸಿರುವ ಮನೆ ಗಳಲ್ಲಿ ವಸತಿ ಸೌಲಭ್ಯ ಸಿಗದೇ ಇರುವ ವಸತಿ ರಹಿತರಿಗೆ ಮನೆ ನಿರ್ಮಿಸಿ ಕೊಡಬೇಕೆಂದು ಕೋರಿಕೊಂಡ ಪೌರ ಕಾರ್ಮಿಕ ಮುಖಂಡರು, ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಮನೆ ಇಲ್ಲದೇ ನೂರಾರು ಕುಟುಂಬ ಗಳು ಡಿ.ದೇವರಾಜ ಅರಸು ಬಡಾವಣೆಯ ಕೊಳಚೆ ಪ್ರದೇಶದಲ್ಲಿ ಗುಡಿಸಲಿನಲ್ಲೇ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಬಗ್ಗೆ ಹಲವು ಭಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದೂ ಅವರು ಶಿವಣ್ಣ ಅವರಿಗೆ ತಮ್ಮ ಅಳಲು ತೋಡಿಕೊಂಡರು.

ಈ ಕುರಿತಂತೆ ದೇವರಾಜ ಅರಸು ಕಾಲೋನಿಯಲ್ಲಿರುವ ವಸತಿ ರಹಿತ ಗುಡಿಸಲು ವಾಸಿಗಳ ಪಟ್ಟಿ ತಯಾರಿಸಿ ಪೂರ್ಣ ವರಧಿ ಸಿದ್ದಪಡಿಸಿ ಸಲ್ಲಿಸಿದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಶಾಸಕ ಎಸ್.ಎ.ರಾಮದಾಸ್‌ರೊಂದಿಗೆ ಚರ್ಚಿಸಿ ಗುಡಿಸಲಿಲ್ಲ ವಾಸಿಸುತ್ತಿರುವವರಿಗಾಗಿ ಮನೆ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಶಿವಣ್ಣ ತಿಳಿಸಿದರು. ಮಂಡಕಳ್ಳಿ ಬಳಿ ನಿರ್ಮಿಸಿರುವ ಮನೆಗಳಲ್ಲಿ ಅನಧಿ ಕೃತವಾಗಿ ವಾಸಿಸುತ್ತಿರುವ ಕುಟುಂಬ ಗಳನ್ನು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ತೆರವುಗೊಳಿಸಲು ಆಗಿಂದಾಗ್ಗೆ ಯತ್ನಿಸುತ್ತಿರುವುದರಿಂದ ತೊಂದರೆ ಉಂಟಾಗಿದೆ, ಬೇರೆಡೆ ಮನೆ ನಿರ್ಮಿಸಿಕೊಡುವವರಿಗಾದರೂ ವಾಸಿಸುವಂತೆ ಕೆಲ ಮುಖಂಡರು ಶಿವಣ್ಣ ಅವರಿಗೆ ಮನವಿ ಮಾಡಿಕೊಂಡರು.
ಪೌರಕಾರ್ಮಿಕ ಸಂಘಟನೆಗಳ ಮುಖಂಡ ರಾದ ವೆಂಕಟೇಶ, ಮುರುಗೇಶ, ರಮೇಶ, ರಂಗಸ್ವಾಮಿ, ಮಂಜುನಾಥ, ನಂಜಪ್ಪ, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮುನಿರಾಜು, ಎಕ್ಸಿಕ್ಯೂಟಿವ್ ಇಂಜಿನಿಯರ್ ಹರೀಶ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಚಂದ್ರ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.

 

Translate »