ವಿವೇಕ ಸ್ಮಾರಕ ಶೀಘ್ರ ನಿರ್ಮಾಣಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಮೈಸೂರು

ವಿವೇಕ ಸ್ಮಾರಕ ಶೀಘ್ರ ನಿರ್ಮಾಣಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

September 25, 2021

ಮೈಸೂರು, ಸೆ.೨೪(ಆರ್‌ಕೆಬಿ)-ಸ್ವಾಮಿ ವಿವೇಕಾ ನಂದರ ಸಾಂಸ್ಕೃತಿಕ ಯುವ ಕೇಂದ್ರ ನಿರ್ಮಾಣಕ್ಕಾಗಿ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೈಸೂರು ಘಟಕದ ಆಶ್ರಯದಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಮೈಸೂರಿನ ನಾರಾಯಣಶಾಸ್ತಿç ರಸ್ತೆಯಲ್ಲಿರುವ ಎನ್‌ಟಿಎಂ ಶಾಲೆ ಎದುರು ಪ್ರತಿಭಟನೆ ನಡೆಸಿದರು.
ರಾಷ್ಟçವನ್ನೆಲ್ಲಾ ಒಂದುಗೂಡಿಸಲು ಶ್ರಮಪಟ್ಟ ವಿವೇಕಾನಂದರ ಸ್ಮಾರಕ ಆಗಲೇಬೇಕು. ವಿವೇಕರ ಹೆಸರಿನಲ್ಲಿ ಜಾತಿ ರಾಜಕಾರಣ ಬೇಡ ಎಂದು ಘೋಷಣೆ ಗಳನ್ನು ಕೂಗಿದರು. ಸ್ವಾಮಿ ವಿವೇಕಾನಂದರು ಭರತ ಖಂಡಕ್ಕೆ ತನ್ನತನವನ್ನು ನೀಡಿದರು. ಹಿಂದೂ ಧರ್ಮಕ್ಕೆ ನಿರ್ದಿಷ್ಟ ರೂಪ ಕೊಟ್ಟರು. ವಿಶ್ವ ಧರ್ಮಕ್ಕೆ ಒಂದು ತಳಹದಿ ಹಾಕಿದರು. ಮಾನವೀಯ ಭಾವನೆಗಳಿಗೆ ಹೆಚ್ಚು ಒತ್ತು ನೀಡಿ ಮಾನವ ಸೇವೆಯ ಹೊಸ ಆದರ್ಶವನ್ನು ಬೆಳಕಿಗೆ ತಂದರು. ವಿಶ್ವ ಭ್ರಾತೃತ್ವ ಮತ್ತು ವಿಶ್ವ ಶಾಂತಿಯ ಬೀಜ ಬಿತ್ತಿದ ಸ್ವಾಮಿ ವಿವೇಕಾನಂದರು ಎಂದೆAದಿಗೂ ಹಳತಾಗದ ಚಿರನೂತನ ಸಂದೇಶದೊAದಿಗೆ ಪ್ರಸ್ತುತವಾಗಿದ್ದಾರೆ. ಅಂತಹ ಸ್ವಾಮಿ ವಿವೇಕಾನಂದರು ೧೯೮೨ರಲ್ಲಿ ಮೈಸೂರಿಗೆ ಬಂದು ಅಂದಿನ ಅನಾಥಾಲಯದಲ್ಲಿ ತಂಗಿದ್ದು, ಅವರ ಪಾದಸ್ಪರ್ಶದಿಂದ ಪುನೀತವಾದ ಐತಿಹಾಸಿಕ ಸ್ಥಳವೂ ಆಗಿದೆ ಎಂದು ಪ್ರತಿಭಟನಾ ಕಾರರು ತಿಳಿಸಿದರು. ಮೈಸೂರಿಗೆ ವಿವೇಕಾನಂದರು ಅವಿನಾಭಾವ ಸಂಬAಧದ ಸಾಂಕೇತಿಕ ಮತ್ತು ಸ್ಫೂರ್ತಿಯ ಸೇವಾ ಕೇಂದ್ರವಾಗುತ್ತಿದೆ. ಯುವ ಸಾಂಸ್ಕೃತಿಕ ಕೇಂದ್ರ ಲಭ್ಯವಿರುವ ಸ್ಥಳದಲ್ಲಿ ಕನ್ನಡದ ಯುವ ಜನತೆಗೆ ಅಗತ್ಯವಾದ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸುವುದರಿಂದ ಸಹಸ್ರಾರು ಬಡ ವಿದ್ಯಾರ್ಥಿ ಗಳಿಗೆ ಸಾಂಸ್ಕೃತಿಕವಾಗಿ, ಶೈಕ್ಷಣ ಕವಾಗಿ, ಸ್ಪರ್ಧಾತ್ಮಕ ವಾಗಿ ಸಬಲರಾಗಲು ಬಹಳ ಅನುಕೂಲವಾಗುತ್ತದೆ. ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ, ವಿಶ್ವ ದರ್ಜೆಯ ಗ್ರಂಥಾಲಯ ನಿರ್ಮಿಸುವುದರಿಂದ ಸುತ್ತಮುತ್ತಲಿನ ೫ರಿಂದ ೬ ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವಿವೇಕಾನಂದರ ಜೀವನ ಸಂದೇಶಗಳನ್ನು ಅಧ್ಯಯನ ಮಾಡಿದರೆ ರಾಷ್ಟçವು ಅಪೇಕ್ಷಿಸುವ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣವಾಗಲಿದೆ. ಆ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ಯುವ ಕೇಂದ್ರ ಶೀಘ್ರವಾಗಿ ನಿರ್ಮಾಣವಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಶ್ರೀರಾಮ ಅಂಗೀರಸ, ಮುಖಂಡರಾದ ಎನ್.ಆರ್. ಮಂಜುನಾಥ್, ಪ್ರಾಂತ ಸಹ ಸಂಘಟನಾ ಕಾರ್ಯ ದರ್ಶಿ ಬಸವೇಶ, ಜಿಲ್ಲಾ ಸಂಚಾಲಕ ಮಲ್ಲಪ್ಪ, ಕಿರಣ್, ಶಿವೂ, ಶ್ರೇಯಸ್, ಜೀವನ್, ನಮೀತಾ, ನಾಗಶ್ರೀ, ನಂದಿನಿ ಇನ್ನಿತರರು ಉಪಸ್ಥಿತರಿದ್ದರು.

Translate »