ದೂರ ಶಿಕ್ಷಣ ಬಲವರ್ಧನೆಗೆ ಪೋಸ್ಟರ್ ಸಿದ್ಧಪಡಿಸಿ, ಬಹುಮಾನ ಗೆಲ್ಲಿ: ಮುಕ್ತ ವಿವಿ ಆಹ್ವಾನ
ಮೈಸೂರು

ದೂರ ಶಿಕ್ಷಣ ಬಲವರ್ಧನೆಗೆ ಪೋಸ್ಟರ್ ಸಿದ್ಧಪಡಿಸಿ, ಬಹುಮಾನ ಗೆಲ್ಲಿ: ಮುಕ್ತ ವಿವಿ ಆಹ್ವಾನ

April 25, 2020

ಮೈಸೂರು,ಏ.24(ಪಿಎಂ)-ದೂರ ಶಿಕ್ಷಣ ಬಲವರ್ಧನೆಗೆ `ಕರಾಮುವಿ ನಡಿಗೆ ವಿದ್ಯಾರ್ಥಿಗಳ ಕಡೆಗೆ’ ವಿಚಾರವಾಗಿ `ಪೋಸ್ಟರ್’ ಸಿದ್ಧಪಡಿಸುವ ಸ್ಪರ್ಧೆ ಏರ್ಪಡಿಸಿ ರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‍ಓಯು) ವಿವಿಯ ಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದಿದೆ. ಉತ್ತಮ ಪೋಸ್ಟರ್ ವಿನ್ಯಾಸಕ್ಕೆ 10 ಸಾವಿರ ರೂ. ಬಹುಮಾನವಿದೆ. ಮೇ 5ರೊಳಗೆ ಪೊಸ್ಟರನ್ನು [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕೆಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ತಂತ್ರಜ್ಞಾನ ಬಳಸಿ ಆನ್‍ಲೈನ್ ತರಗತಿ ಮತ್ತು ಆಡಳಿತಾ ತ್ಮಕ ಸಭೆಗಳನ್ನು ನಡೆಸಲು ಹಾಗೂ ವಿದ್ಯಾರ್ಥಿಗಳ ಕುಂದುಕೊರತೆಗಳಿಗೆ ಸ್ಪಂದಿಸಲು ಮುಕ್ತ ವಿವಿ ಮುಂದಾಗಿದೆ. ಕುಲಪತಿಗಳ ಮಾರ್ಗದರ್ಶನದಲ್ಲಿ `ಕೆಎಸ್‍ಓಯು ಸ್ಟೂಡೆಂಟ್ ಆ್ಯಪ್’ ಮತ್ತು `ಕೆಎಸ್‍ಓಯು ಕನೆಕ್ಟ್’ ಆನ್‍ಲೈನ್ ವಿಡಿಯೋ ಕಾನ್ಫರೆನ್ಸ್ ಪ್ಲಾಟ್‍ಫಾರಂ ಬಳಸಿಕೊಳ್ಳುತ್ತಿದೆ. ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನ ಅನಿವಾರ್ಯ. ಈ ನಿಟ್ಟಿನಲ್ಲಿ ಮುಕ್ತ ವಿವಿ ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಕೆಎಸ್‍ಓಯು ಡಿಜಿಟಲ್ ಉಪಕ್ರಮಗಳನ್ನು ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ಪರಿಣಾಮಕಾರಿಯಾಗಿ ಪರಿ ಚಯಿಸಲು ಉದ್ದೇಶಿಸಿದೆ. ಆ ಮೂಲಕ ವಿದ್ಯಾರ್ಥಿಗಳ ನೋಂದಣಿಯನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಗಣನೀಯವಾಗಿ ಹೆಚ್ಚಿಸುವ ಯೋಜನೆಯನ್ನೂ ವಿವಿ ರೂಪಿಸಿದೆ.

Translate »