ಬೀದಿನಾಯಿಗೆ ಡಿಕ್ಕಿಯಾಗುವುದ ತಪ್ಪಿಸಲೆತ್ನಿಸಿದ ಕಾರಿಗೆ ಬೈಕ್ ಡಿಕ್ಕಿ; ಕಾರು ಜಖಂ, ಬೈಕ್ ಸವಾರನಿಗೆ ಗಾಯ
ಮೈಸೂರು

ಬೀದಿನಾಯಿಗೆ ಡಿಕ್ಕಿಯಾಗುವುದ ತಪ್ಪಿಸಲೆತ್ನಿಸಿದ ಕಾರಿಗೆ ಬೈಕ್ ಡಿಕ್ಕಿ; ಕಾರು ಜಖಂ, ಬೈಕ್ ಸವಾರನಿಗೆ ಗಾಯ

April 25, 2020

ಮೈಸೂರು,ಏ.24(ಎಸ್‍ಪಿಎನ್)- ರಸ್ತೆ ಯಲ್ಲಿ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆ ಯುವುದನ್ನು ತಪ್ಪಿಸಲು ಕಾರು ಚಾಲಕ ಯತ್ನಿಸಿದಾಗ ಹಿಂದಿನಿಂದ ಅತೀ ವೇಗ ವಾಗಿ ಬಂದ ಮೋಟಾರ್ ಬೈಕೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ವಿಜಯ ನಗರ 4ನೇ ಹಂತದ ಆರ್‍ಎಂಪಿ ಸರ್ವಿಸ್ ರಸ್ತೆ ಸಮೀಪ ಗುರುವಾರ ಬೆಳಿಗ್ಗೆ ನಡೆದಿದೆ. ಪರಿಣಾಮ ಕಾರಿನ ಹಿಂಬದಿ ಬಹಳಷ್ಟು ಜಖಂಗೊಂಡಿದೆ.

ವಿಜಯನಗರ 4ನೇ ಹಂತದ ನಿವಾಸಿ ಸಂತೋಷ್ ಅವರ ಕಾರಿಗೆ(ಕೆಎ03-ಎಂಎಲ್ 9905) ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಕೆಳಗೆ ಬಿದ್ದು ಗಾಯಗೊಂ ಡಿದ್ದು, ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಘಟನೆ ವಿವರ: ಏ.23ರ ಬೆಳಿಗ್ಗೆ 10.15ರ ವೇಳೆ ಆರ್‍ಎಂಪಿ ಬಳಿಯ ಸರ್ವಿಸ್ ರಸ್ತೆ ಯಲ್ಲಿ ಸಂತೋಷ್ ತಮ್ಮ ಕಾರನ್ನು ವೇಗ ವಾಗಿ ಚಾಲನೆ ಮಾಡಿಕೊಂಡು ಹೋಗು ತ್ತಿದ್ದರು. ಈ ವೇಳೆ ಬೀದಿನಾಯಿಯೊಂದು ದಿಢೀರ್ ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಯಾಗುವುದನ್ನು ತಪ್ಪಿಸಲು ಥಟ್ಟನೆ ಬ್ರೇಕ್ ಹಾಕಿದ್ದಾರೆ. ಅದೇ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಮೋಟಾರ್ ಬೈಕ್ (ಕೆಎ09-ಹೆಚ್‍ವೈ 5498) ಸವಾರನ ನಿಯಂತ್ರಣ ತಪ್ಪಿ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡಿದೆ. ಈ ಸಂಬಂಧ ಕಾರು ಚಾಲಕ, ಮೋಟಾರ್ ಬೈಕ್ ಸವಾರನ ವಿರುದ್ಧ ವಿವಿಪುರಂ ಸಂಚಾರ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

Translate »